‘ನಾಯಕತ್ವವಿಲ್ಲದ ಬಿಜೆಪಿ ನಾವಿಕನಿಲ್ಲದೆ ಮುಳುಗುತ್ತಿರುವ ಹಡಗು...’

ಅತ್ತ ಬಿಜೆಪಿ ತನ್ನ ವಿರುದ್ಧ ಆರೋಪ ಮಾಡುತ್ತಿದ್ದರೆ, ಮತ್ತೊಂದು ಕಡೆ ಬಿಜೆಪಿ ವಿರುದ್ಧ ಈಗ ಕಾಂಗ್ರೆಸ್ ಕೂಡ ವಾಗ್ದಾಳಿ ನಡೆಸುತ್ತಿದೆ. ಅದರಲ್ಲೂ ಬಿಜೆಪಿ ಆಂತರಿಕ ಜಗಳವನ್ನೇ ದಾಳ ಮಾಡಿಕೊಂಡು ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ. ಹೀಗೆ ಕೈ ಪಾಳಯ ಈಗ ಕೇಸರಿ ಪಡೆಯ ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಿದೆ.

ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸೋಷಿಯಲ್ ಮೀಡಿಯಾ ಫೈಟ್ ಜೋರಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರವಾಗಿ ನಡೆಯುತ್ತಿದ್ದ ಕಿತ್ತಾಟ ಇದೀಗ ಬೇರೆ ಬೇರೆ ತಿರುವು ಪಡೆಯುತ್ತಿದೆ. ಎರಡೂ ಪಕ್ಷಗಳು ಆಂತರಿಕ ಕಿತ್ತಾಟದ ಆರೋಪವನ್ನ ಮಾಡುತ್ತಿವೆ. ಇದೀಗ ಬಿಜೆಪಿ ಆಂತರಿಕ ಕಿತ್ತಾಟದ ಆಧಾರದಲ್ಲಿ ಕಾಂಗ್ರೆಸ್ ಆರೋಪವನ್ನು ಮಾಡಿದೆ. ಹಾಗಾದರೆ ಕಾಂಗ್ರೆಸ್ ಹೇಳಿದ್ದು ಏನು?

bjp-is-suffering-from-the-inside-war

'ನಾಯಕತ್ವವಿಲ್ಲದ ಬಿಜೆಪಿ ನಾವಿಕನಿಲ್ಲದೆ...'

ಹೌದು, ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ರೇಣುಕಾಚಾರ್ಯ ಹೇಳಿಕೆ ಉಲ್ಲೇಖ ಮಾಡಿ ಈಗ ಬಿಜೆಪಿ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. 'ನಾಯಕತ್ವವಿಲ್ಲದ ಬಿಜೆಪಿ ನಾವಿಕನಿಲ್ಲದೆ ಮುಳುಗುತ್ತಿರುವ ಹಡಗು, ಮುಳುಗುವ ಹಡಗಿನಿಂದ ಎಲ್ಲರೂ ಹೊರ ಜಿಗಿಯುವವರೇ... ಒಂದೆಡೆ ರಾಜ್ಯ ಬಿಜೆಪಿಯನ್ನು ದ್ವೇಷಿಸುತ್ತಿರುವ ಹೈಕಮಾಂಡ್, ಮತ್ತೊಂದೆಡೆ ಯಡಿಯೂರಪ್ಪ ಬಣವನ್ನು ಹಣಿಯುತ್ತಿರುವ ಸಂತೋಷ ಕೂಟ, ಇನ್ನೊಂದೆಡೆ ಆಂತರಿಕ ಕಿತ್ತಾಟ!' ಅಂತಾ ಬಿಜೆಪಿ ಒಳಜಗಳದ ವಿಚಾರವನ್ನು ಕೆಣಕಿದೆ.

ಹಾಗೇ ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ ಬಿಜೆಪಿ ವಿರುದ್ಧ ಆರೋಪವನ್ನು ಮುಂದುವರಿಸಿ, 'ಎಲ್ಲರೂ ಹೊರಹೋದಮೇಲೆ ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ನಾನೇ ನಾಯಕ ಎಂದು ಎನಿಸಿಕೊಳ್ಳಲು ಬಿ ಎಲ್ ಸಂತೋಷ್ ಕಾಯುತ್ತಿದ್ದಾರೆ. ರೇಣುಕಾಚಾರ್ಯ ಹೇಳುವಂತೆ @BJP4Karnataka ತನ್ನ ಅಸಾಮರ್ಥ್ಯ ಬಹಿರಂಗವಾಗಿ ಒಪ್ಪಿಕೊಳ್ಳುವುದೇ ಅಥವಾ ರೇಣುಕಾಚಾರ್ಯರನ್ನು ಕಿಕ್ ಔಟ್ ಮಾಡುವುದೇ?' ಎಂದು ಸವಾಲು ಹಾಕಿದೆ.

ಒಟ್ನಲ್ಲಿ ಲೋಕಸಭೆ ಚುನಾವಣೆ ಹಾಗೂ ಐದು ರಾಜ್ಯಗಳ ಚುನಾವಣೆಗೆ ದಿನಗಣನೆ ಶುರು ಆಗಿರುವ ಸಮಯದಲ್ಲೇ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಿತ್ತಾಟ ಜೋರಾಗಿದೆ. ಅದೇ ರೀತಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ & ಪ್ರತ್ಯಾರೋಪ ಮಾಡುತ್ತಿದ್ದಾರೆ. ಆದರೆ ಈ ಕಿತ್ತಾಟಕ್ಕೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಮತದಾರ ಯಾವ ರೀತಿ ಪ್ರತಿಕ್ರಿಯೆಯನ್ನು ಕೊಡ್ತಾನೆ? ಯಾರಿಗೆ ಜೈ ಅಂತಾನೆ? ಮತದಾರ ಪ್ರಭುವಿನ ಒಲವು ಯಾರ ಕಡೆ ಇರಲಿದೆ? ಅನ್ನೋದನ್ನ ಕಾದು ನೋಡಬೇಕಿದೆ. ಅಲ್ಲಿಯವರೆಗೂ, ಎರಡೂ ಪಕ್ಷಗಳ ಫೈಟಿಂಗ್ ಹೀಗೆ ಮುಂದುವರಿಯುವುದು ಬಹುತೇಕ ಗ್ಯಾರಂಟಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+