ಪೊಲೀಸರಿಗೆ ಕುಂಕುಮ, ವಿಭೂತಿ ಇಡಬೇಡಿ ಅಂದ್ರಾ ಗೃಹ ಸಚಿವ ಪರಮೇಶ್ವರ್?
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಸುಳ್ಳು ಸುದ್ದಿಗಳು ಹಬ್ಬುತ್ತಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ಗೃಹ ಸಚಿವ ಪರಮೇಶ್ವರ್, ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಹಣೆಗೆ ತಿಲಕ ಇಡದಂತೆ & ವಿಭೂತಿ ಹಚ್ಚದಂತೆ ಆದೇಶ ನೀಡಿದ್ದಾರೆ ಅನ್ನೋ ಸುದ್ದಿ ಆಕ್ರೋಶ ಸೃಷ್ಟಿಸಿತ್ತು. ಆದರೆ ಈ ಸುದ್ದಿಯ ಬಂಡವಾಳ ಈಗ ಬಯಲಾಗಿದೆ.
ಹೇಳಿಕೇಳಿ ಇದು ಸೋಷಿಯಲ್ ಮೀಡಿಯಾ ಜಮಾನ, ಇಲ್ಲಿ ಸತ್ಯಕ್ಕಿಂತ ಸುಳ್ಳಿಗೆ ಹೆಚ್ಚಿನ ಬೆಲೆ ಅನ್ನುವಂತಾಗಿದೆ. ಅದರಲ್ಲೂ ಜನ ತಮ್ಮ ದಿನನಿತ್ಯದ ಬ್ಯುಸಿ ಜೀವನದಲ್ಲಿ ಸತ್ಯ ಪರಿಶೋಧನೆ ಮಾಡಲು ಹೋಗಲ್ಲ. ಕೆಲವರು ಇದನ್ನ ಬಂಡವಾಳ ಮಾಡಿಕೊಂಡು ದಿನನಿತ್ಯ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಅದೇ ರೀತಿ ರಾಜ್ಯ ಗೃಹ ಸಚಿವರ ಹೇಳಿಕೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಬಗ್ಗೆ ಗೃಹ ಸಚಿವರು ಖಡಕ್ ರಿಯಾಕ್ಷನ್ ಕೊಟ್ಟಿದ್ದು, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಹಾಗಾದ್ರೆ ಗೃಹ ಸಚಿವರು ಹೇಳಿದ್ದೇನು? ಸುಳ್ಳು ಸುದ್ದಿ ಹಬ್ಬಿದ್ದೇಗೆ? ತಿಳಿಯೋಣ ಬನ್ನಿ.

ಪೊಲೀಸರಿಗೆ ಕುಂಕುಮ ಹಚ್ಚಬೇಡಿ ಅಂದ್ರಾ?
ಇಂತಹದ್ದೊಂದು ಸುದ್ದಿ 2 ದಿನದಿಂದ ಸಂಚಲನ ಸೃಷ್ಟಿಮಾಡಿದೆ. ಸೋಷಿಯಲ್ ಮೀಡಿಯಾ ಮಾತ್ರವಲ್ಲ ಕೆಲವು ಸುದ್ದಿ ಸಂಸ್ಥೆಗಳ ವೆಬ್‌ಸೈಟ್‌ಗೆ ಈ ನ್ಯೂಸ್ ಲಗ್ಗೆ ಇಟ್ಟಿತ್ತು. ಗೃಹ ಸಚಿವ ಪರಮೇಶ್ವರ್ ಪೊಲೀಸರಿಗೆ ಕುಂಕುಮ ಮತ್ತು ವಿಭೂತಿ ಇಡಬೇಡಿ ಅಂತಾ ಹೇಳಿದ್ದಾರೆ. ಹಾಗೆ, ಹೀಗೆ ಅಂತೆಲ್ಲಾ ಸುದ್ದಿ ಓಡಾಡಿತ್ತು. ಆದ್ರೆ ಈ ಸುಳ್ಳು ಸುದ್ದಿ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ಆಕ್ರೋಶ ಹೊರಹಾಕಿದೆ. ಅಲ್ಲದೆ ಗೃಹ ಸಚಿವರು ಕೂಡ ಸುಳ್ಳು ಸುದ್ದಿಯ ಬಗ್ಗೆ ಗರಂ ಆಗಿದ್ದು, ಸುಳ್ಳು ಸುದ್ದಿ ಹರಡಿದ್ದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಹಾಗಾದ್ರೆ ಗೃಹ ಸಚಿವರು ಪೊಲೀಸರಿಗೆ ಹಣೆಗೆ ತಿಲಕ ಇಡುವ ಬಗ್ಗೆ ನೀಡಿದ ಸ್ಪಷ್ಟನೆ ಏನು? ಮುಂದೆ ಓದಿ.
ಹೇಳಿದ್ದೇ ಒಂದು.. ಸುದ್ದಿ ಇನ್ನೊಂದು!
ಅಂದಹಾಗೆ ಮೊದಲೇ ಹೇಳಿದಂತೆ ಸತ್ಯಕ್ಕಿಂತ ಸುಳ್ಳಿಗೆ ಬೆಲೆ ಜಾಸ್ತಿಯಾಗಿರುವಂತೆ ಕಾಣ್ತಿದೆ. ಈಗ ಗೃಹ ಸಚಿವ ಪರಮೇಶ್ವರ್ ಅವರ ವಿಚಾರದಲ್ಲೂ ಹಾಗೇ ಆಗಿದೆ. ರಾಜ್ಯ ಪೊಲೀಸ್ ಇಲಾಖೆಗೆ ಗೃಹ ಸಚಿವರು ಕಾನೂನಿನ ರೀತಿ ಕೆಲಸ ಮಾಡಿ ಎಂದಿದ್ದಾರಂತೆ. ಅಷ್ಟಕ್ಕೇ ಈ ಸುದ್ದಿ ತಿರುಚಿ, ಹಣೆಗೆ ಕುಂಕುಮ ಇಡಬೇಡಿ ಅಂತಾ ಪೊಲೀಸರಿಗೆ ಸೂಚಿಸಿದ್ದಾರೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿರುವ ಆರೋಪ ಈಗ ಕೇಳಿಬಂದಿದೆ. ಅಲ್ಲದೆ ಖುದ್ದು ಗೃಹ ಸಚಿವ ಪರಮೇಶ್ವರ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಯಾಕೆ ಅಂತಹ ಆದೇಶ ನೀಡಲಿ? ಅಂತಹ ಯಾವುದೇ ಆದೇಶ ನಾನು ಕೊಟ್ಟಿಲ್ಲ, ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದಿದ್ದಾರೆ ಗೃಹ ಸಚಿವ ಪರಮೇಶ್ವರ್.

ಟೀಕಿಸಿ, ಪ್ರಶ್ನಿಸಿ ಆದರೆ ಅಪಪ್ರಚಾರ ಮಾಡಬೇಡಿ!
ಸುಳ್ಳು ಸುಳ್ಳು ಸುದ್ದಿಯನ್ನ ಯಾರು ತಾನೆ ಒಪ್ಪಿಕೊಳ್ಳಲು ಸಾಧ್ಯ ಹೇಳಿ? ಹೀಗಾಗಿ ರಾಜ್ಯ ಕಾಂಗ್ರೆಸ್ ಘಟಕ ಕೂಡ ಈ ವಿಚಾರವನ್ನ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಜೊತೆಗೆ ಈ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಸರ್ಕಾರ ತಪ್ಪು ಮಾಡಿದಾಗ ಪ್ರಶ್ನಿಸುವ, ಟೀಕಿಸುವ, ತಿದ್ದುವ ಹೊಣೆ ಮಾಧ್ಯಮಗಳ ಮೇಲಿರುತ್ತದೆ, ಆದರೆ ಮಾದ್ಯಮಗಳೇ ಒಂದು ಪಕ್ಷದ ಅಜೆಂಡಾದ ಪರ ಕೆಲಸ ಮಾಡಲು ಶುರು ಮಾಡಿದಾಗ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಕಳೆದುಕೊಳ್ಳುತ್ತವೆ. ನಮ್ಮದೊಂದೇ ಮನವಿ, ಟೀಕಿಸಿ, ಪ್ರಶ್ನಿಸಿ ಆದರೆ ಅಪಪ್ರಚಾರ ಮಾಡಬೇಡಿ. ನೈತಿಕತೆಯನ್ನು ಕಳೆದುಕೊಳ್ಳಬೇಡಿ.' ಎಂದು ಮನವಿ ಮಾಡಿದೆ.
ಸರ್ಕಾರ ತಪ್ಪು ಮಾಡಿದಾಗ ಪ್ರಶ್ನಿಸುವ, ಟೀಕಿಸುವ, ತಿದ್ದುವ ಹೊಣೆ ಮಾಧ್ಯಮಗಳ ಮೇಲಿರುತ್ತದೆ,
— Karnataka Congress (@INCKarnataka) June 9, 2023
ಆದರೆ ಮಾದ್ಯಮಗಳೇ ಒಂದು ಪಕ್ಷದ ಅಜೆಂಡಾದ ಪರ ಕೆಲಸ ಮಾಡಲು ಶುರು ಮಾಡಿದಾಗ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಕಳೆದುಕೊಳ್ಳುತ್ತವೆ.
ನಮ್ಮದೊಂದೇ ಮನವಿ,
ಟೀಕಿಸಿ, ಪ್ರಶ್ನಿಸಿ ಆದರೆ ಅಪಪ್ರಚಾರ ಮಾಡಬೇಡಿ.
ನೈತಿಕತೆಯನ್ನು ಕಳೆದುಕೊಳ್ಳಬೇಡಿ. pic.twitter.com/uG7Rg8lith
ಒಟ್ನಲ್ಲಿ ಹೀಗೆ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಸವಾಲು ಎದುರಾದಂತೆ ಕಾಣುತ್ತಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸರ್ಕಾರದ ಬಗ್ಗೆ ಸಿಕ್ಕಾಪಟ್ಟೆ ಸುಳ್ಳುಸುದ್ದಿ ಹಬ್ಬಿಸಿ, ಅಪಪ್ರಚಾರ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಹೀಗಿದ್ದಾಗಲೇ ರಾಜ್ಯದಲ್ಲಿ ತಮ್ಮದೇ ಸರ್ಕಾರ ಹೊಂದಿದವರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈಗ ಕಾಂಗ್ರೆಸ್ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾ? ಅಥವಾ ಇದನ್ನ ಬರೀ ಬಾಯಿ ಮಾತಿಗೆ ಹೇಳಿ ಸುಮ್ಮನಾಗುತ್ತಾ? ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications