Get Updates
Get notified of breaking news, exclusive insights, and must-see stories!

ವಿಧಾನಸಭೆಯಲ್ಲಿ ರಾಜಾ ವೆಂಕಟಪ್ಪ ನಾಯಕಗೆ ಸಂತಾಪ ಸೂಚನೆ- ಸದನ ಬುಧವಾರಕ್ಕೆ ಮುಂದೂಡಿಕೆ

ಬೆಂಗಳೂರು, ಫೆ. 26: ರಾಜ್ಯ ವಿಧಾನಸಭೆ ಅಧಿವೇಶನದ ಕಾರ್ಯಕಲಾಪವನ್ನು ಮತ್ತೆ ಒಂದು ದಿನ ವಿಸ್ತರಣೆ ಮಾಡಲಾಗಿದೆ. ಫೆಬ್ರವರಿ 23ರ ಶುಕ್ರವಾರದಂದು ಮುಗಿಯಬೇಕಿದ್ದ ಅಧಿವೇಶನವನ್ನು ಒಂದು ದಿನ ವಿಸ್ತರಣೆ ಮಾಡಿ ಸೋಮವಾರಕ್ಕೆ ಮುಂದೂಡಲಾಗಿತ್ತು. ಆದರೆ ಭಾನುವಾರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯ್ಕ ಅವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಸಂತಾಪ ಸೂಚನೆ ಸಲ್ಲಿಸಿ ಯಾವುದೇ ಕಾರ್ಯಕಲಾಪಗಳನ್ನು ನಡೆಸದೆ ಅಧಿವೇಶನವನ್ನು ಬುಧವಾರಕ್ಕೆ ಮುಂದೂಡಲಾಯಿತು.

ಇನ್ನೂ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯ್ಕ ಅವರು ನಿಧನ ಕುರಿತು ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯದ ವೇಳೆ ಮಾತನಾಡಿದ ಶಿವಕುಮಾರ್, ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ತಾಲೂಕಿನ ಶಾಸಕರಾಗಿದ್ದ ದಿವಂಗತ ರಾಜಾ ವೆಂಕಟಪ್ಪ ನಾಯಕ ಅವರು ಅಜಾತ ಶತ್ರು ಹಾಗೂ ಆದರ್ಶ ವ್ಯಕ್ತಿತ್ವ ಎಂದು ಸಂತಾಪ ಸೂಚಿಸಿದರು.

Condolences To Raja Venkatappa Nayaka Both Houses Session Adjourned To Wednesday

ರಾಜಾ ವೆಂಕಟಪ್ಪ ನಾಯಕ ಅವರು ನನಗೆ 1987ರಿಂದ ಪರಿಚಯ. ನಾನು ಗ್ರಾನೈಟ್ ವ್ಯವಹಾರ ಮಾಡುತ್ತಿದ್ದಾಗ ಅವರು ತಮ್ಮ ಸ್ನೇಹಿತರೊಂದಿಗೆ ನಮ್ಮ ಊರಿಗೆ ಬಂದಿದ್ದರು. ನಮ್ಮನ್ನು ಅವರ ಊರಿಗೆ ಕರೆದುಕೊಂಡು ಹೋಗಿ ಅಲ್ಲಿನ ಭಾಗದ ಕಲ್ಲಿನ ಬಗ್ಗೆ ತೋರಿಸಿದ್ದರು. ಆ ಸಂದರ್ಭದಲ್ಲಿ ನಾನು ಅವರನ್ನು ಕೇಳಿದೆ. ನಾನು ಈಗಾಗಲೇ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದೇನೆ. ನೀವು ರಾಜ ಮನೆತನದವರು, ನಿಮ್ಮ ಕುಟುಂಬದವರು ಶಾಸಕರಾಗಿದ್ದಾರೆ. ನೀವು ಯಾಕೆ ಇನ್ನು ಸ್ಪರ್ಧೆ ಮಾಡಿಲ್ಲ ಎಂದು ಕೇಳಿದೆ. ನಂತರ ಅವರು 1994ರಲ್ಲಿ ಸ್ಪರ್ಧಿಸಿ, ನಮ್ಮ ಜತೆ ನಾಲ್ಕು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ.

ಯಾವುದೇ ರಾಜ ಸದಾ ರಾಜನಾಗಿ, ಯಾವುದೇ ಶ್ರೀಮಂತ ಸದಾ ಶ್ರೀಮಂತನಾಗಿ, ಯಾವುದೇ ಬಡವ ಸದಾ ಬಡವನಾಗಿ ಇರಲು ಸಾಧ್ಯವಿಲ್ಲ. ಯಾರು ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು. ದೇವರು ನಮಗೆ ಕೊಟ್ಟಿರುವುದು ಶಾಶ್ವತವಲ್ಲ. ನಮ್ಮ ಸಂಬಂಧಗಳು ಮಾತ್ರ ಶಾಶ್ವತ.

ನಾಲ್ಕು ದಿನಗಳ ಹಿಂದೆ ನಾನು, ಜಿ.ಸಿ ಚಂದ್ರಶೇಖರ್, ಎಸ್ ಟಿ ಸೋಮಶೇಖರ್, ಶ್ರೀನಿವಾಸ್ ಅವರ ಜತೆ ಆಸ್ಪತ್ರೆಗೆ ಹೋಗಿ ರಾಜಾ ವೆಂಕಟಪ್ಪ ನಾಯಕ ಅವರ ಆರೋಗ್ಯ ವಿಚಾರಿಸಿ ಬಂದಿದ್ದೆ. ಅವರನ್ನು ಐಸಿಯುನಿಂದ ಸಾಮಾನ್ಯ ವಾರ್ಡ್ ಗೆ ಕರೆತಂದಿದ್ದರು. ನಾನು ಖಾಸಗಿಯಾಗಿ ಅವರ ಜೊತೆ ಮಾತನಾಡಿದೆ. ಅವರು ಕಾಗದ ಮೇಲೆ ಬರೆದು ನನ್ನ ಜೊತೆ ಮಾತನಾಡಲು ಪ್ರಯತ್ನಿಸಿದರು. ರಾಜ್ಯ ಸಭೆ ಚುನಾವಣೆ ಬಗ್ಗೆ ಮಾತನಾಡಿದಾಗ, ಮತದಾನದ ವೇಳೆಗೆ ಬರುತ್ತೇನೆ ಎಂದು ಸನ್ನೆ ಮೂಲಕ ಹೇಳಿದರು. ಅವರಿಂದ ಸಹಿ ಹಾಕಿಸಲು ಹೋದಾಗ ಅವರ ಸಹಿ ಸರಿಯಾಗಿ ಬರಲಿಲ್ಲ. ಆಗ ವೈದ್ಯರು ನಾವು ಪ್ರಮಾಣ ಪತ್ರ ನೀಡುತ್ತೇವೆ ಎಂದು ತಿಳಿಸಿದರು. ನಾನು ಅವರ ಕುಟುಂಬದ ಸದಸ್ಯರ ಜೊತೆ ಮಾತನಾಡಿದೆ.

ನಾನು ನಿನ್ನೆ ಕಾರ್ಯಕ್ರಮದಲ್ಲಿ ಇದ್ದಾಗ ಅವರು ವಿಧಿವಶರಾದ ಬಗ್ಗೆ ಮಾಹಿತಿ ತಿಳಿಯಿತು. ಆಗ ನಾನು ತಕ್ಷಣ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದೆ. ರಾಜಕಾರಣ ಏನೇ ಇರಲಿ, ರಾಜಾ ವೆಂಕಟಪ್ಪ ನಾಯಕ ಅವರು ನಮಗೆ ತೊಂದರೆ ಕೊಟ್ಟಿದ್ದಾರೆ ಎಂದು ಯಾರೊಬ್ಬರೂ ಹೇಳುವುದಿಲ್ಲ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ ಎಂಬ ವಿವೇಕಾನಂದರ ಮಾತಿನಂತೆ ಅವರು ಯಾವುದೇ ವೈರತ್ವ ಇಲ್ಲದೆ ಜೀವನ ಮಾಡಿದ್ದಾರೆ. ರಾಜಾ ವೆಂಕಟಪ್ಪ ಅವರ ನಿಧನದ ಸುದ್ದಿ ಕೇಳಿ ಅವರ ಅಭಿಮಾನಿ ಕೂಡ ಹೃದಯಾಘಾತದಿಂದ ಮೃತರಾಗಿದ್ದಾರೆ.

ಆ ಕ್ಷೇತ್ರದಿಂದ ಬೇರೆ ಪಕ್ಷದವರು ಪಕ್ಷ ಸೇರುವ ಸನ್ನಿವೇಶ ಇತ್ತು. ಆಗ ಖರ್ಗೆ ಅವರು, ರಾಜಾ ವೆಂಕಟಪ್ಪ ನಾಯಕ ಅವರು ಉತ್ತಮ ವ್ಯಕ್ತಿತ್ವ ಹೊಂದಿದ್ದು ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಿದರು. ಖರ್ಗೆ ಅವರು ರಾಜಾ ವೆಂಕಟಪ್ಪ ಅವರಿಗೆ ರಾಜ್ಯ ಮಟ್ಟದ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡುವಂತೆ ಸೂಚಿಸಿದರು. ಸಂಸತ್ ಚುನಾವಣೆಗೆ ಸಮೀಕ್ಷೆ ಮಾಡಿಸಿದಾಗ ರಾಜಾ ವೆಂಕಟಪ್ಪ ನಾಯಕ ಅವರು ಅಭ್ಯರ್ಥಿ ಆಗಬೇಕು ಎಂದು ವರದಿ ಬಂದಿತ್ತು. ಅವರ ಆರೋಗ್ಯ ಸ್ಥಿತಿ ನೋಡಿ ನಾವು ಬೇರೆಯವರ ಬಗ್ಗೆ ಆಲೋಚನೆ ಮಾಡಿದೆವು.

ದೇವರು ನಮಗೆ ಎರಡು ಆಯ್ಕೆ ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ರಾಜಾ ವೆಂಕಟಪ್ಪ ನಾಯಕ ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ. ರಾಜಾ ವೆಂಕಟಪ್ಪ ನಾಯಕ ಅವರು ನಮ್ಮಿಂದ ದೂರವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+