ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ವಿರುದ್ಧ ಎಸಿಬಿಗೆ ದೂರು
ಬೆಂಗಳೂರು, ಜೂನ್ 12 : ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ. ಎಸಿಬಿ ಅಧಿಕಾರಿಗಳು ಕಾನೂನು ಸಲಹೆ ಪಡೆದ ಬಳಿಕ ತನಿಖೆ ನಡೆಸುವ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಉದ್ಯೋಗ ಮತ್ತು ತರಬೇತಿ ಇಲಾಖೆಯ ಮಾಜಿ ನೌಕರ ಶಂಕರ ದೇವೇಗೌಡ ಅವರು ರತ್ನಪ್ರಭಾ ಅವರ ವಿರುದ್ಧ ದೂರು ನೀಡಿದ್ದಾರೆ. ನ್ಯಾಯಾಲಯದ ಆದೇಶ ಜಾರಿಯಾಗದಂತೆ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ದೂರಿನಲ್ಲಿ ಏನಿದೆ? : ಕರ್ನಾಟಕದ ಸರ್ಕಾರದ ಬಡ್ತಿ ಮೀಸಲು ಕಾಯ್ದೆ 2002 ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. 2017ರ ಫೆ. 9ರಂದು ನೀಡಿದ್ದ ಆದೇಶದಿಂದಾಗಿ 45 ಇಲಾಖೆಗಳಲ್ಲಿ ಒಟ್ಟು 3,799 ಸಿಬ್ಬಂದಿ ಹಿಂಬಡ್ತಿ ಪಡೆಯಲಿದ್ದರು.

ಆದರೆ, ಸುಪ್ರೀಂಕೋರ್ಟ್ ಆದೇಶವನ್ನು ಜಾರಿಗೆ ತರಬೇಕಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಇಲಾಖಾ ಕಾರ್ಯದರ್ಶಿಗಳ ಮೇಲೆ ಒತ್ತಡ ಹೇರಿದ್ದಾರೆ. ಈ ಮೂಲಕ ಕೊನೆ ಕ್ಷಣದಲ್ಲಿ ಆದೇಶ ಜಾರಿಯಾಗದಂತೆ ಮಾಡಿದ್ದಾರೆ.
ರತ್ನಪ್ರಭಾ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎಸಿಬಿ ಅಧಿಕಾರಿಗಳು ಕಾನೂನು ಸಲಹೆ ಪಡೆದ ಬಳಿಕ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.












Click it and Unblock the Notifications