ನಟ ಜೈಜಗದೀಶ್ ವಿರುದ್ಧ ಬೆಳ್ಳೂರು ಠಾಣೆಯಲ್ಲಿ ದೂರು
ಮಂಡ್ಯ, ಜೂ. 09: ಕಾರಿನ ಮೇಲೆ ಖಾಲಿ ಬಾಟಲಿ ಬಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಹಿರಿಯ ನಟ ಜೈ ಜಗದೀಶ್ ವಿರುದ್ಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜೂ. 05 ರಂದು ಈ ಘಟನೆ ನಡೆದಿದ್ದು, ಜಯರಾಮೇಗೌಡ ಎಂಬುವರು ಜೈ ಜಗದೀಶ್ ವಿರುದ್ಧ ದೂರು ಸಲ್ಲಿಸಿದ್ದಾರೆ. ತಾಲೂಕಿನ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಲ್ಲಿಗೆರೆ ಟೋಲ್ ಬಳಿ ಹಿರಿಯ ನಟ ಜೈ ಜಗದೀಶ್ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಜೂ. 5 ರಂದು ನಾನು ಬಸ್ ಇಳಿಯುವ ಸಂದರ್ಭದಲ್ಲಿ ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದರು. ಈ ಸಮಯದಲ್ಲಿ ಬಸ್ ನಿಂದ ಯಾಕೆ ಬಾಟಲಿ ಎಸೆಯುತ್ತೀಯ ಎಂದು ಪ್ರಶ್ನಿಸಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದರು. ಏಕಾಏಕಿ ನನ್ನನ್ನು ನಿಂದನೆ ಮಾಡಿದರು ಎಂದು ದೂರುದಾರ ಅರೋಪಿಸಿದ್ದಾರೆ. ಈ ಸಂಬಂಧ ಬೆಳ್ಳೂರು ಪೊಲೀಸರು ದೂರು ಸ್ವೀಕರಿಸಿದ್ದು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.
Recommended Video
ವಿಜಯಪುರ: ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಪ್ರಯತ್ನ - BSY | Oneindia Kannada
(ಒನ್ಇಂಡಿಯಾ ಸುದ್ದಿ)












Click it and Unblock the Notifications