ಕಾಲೇಜು ಶಿಕ್ಷಣ ಇಲಾಖೆ; ಯುಜಿಸಿ ನಿಯಮದಂತೆ ಪದೋನ್ನತಿ, ಷರತ್ತುಗಳು
ಬೆಂಗಳೂರು, ಮೇ 24; ಕಾಲೇಜು ಶಿಕ್ಷಣ ಆಯುಕ್ತರ ಕಛೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರು/ ದೈಹಿಕ ಶಿಕ್ಷಣ ನಿರ್ದೇಶಕರು/ ಗ್ರಂಥಪಾಲಕರಿಗೆ ಸಿಹಿಸುದ್ದಿ ನೀಡಿದೆ. ವೃತ್ತಿ ಪದೋನ್ನತಿಯಡಿಯಲ್ಲಿ 2018ರ ಯುಜಿಸಿ ನಿಯಮಗಳ ಅನ್ವಯ ಶೈಕ್ಷಣಿಕ ಹಂತ 13ಎ ರ ವೇತನ ಶ್ರೇಣಿ ರೂ. 131400-217100 ರಲ್ಲಿ ಪದೋನ್ನತಿ ಮಂಜೂರು ಮಾಡುವ ಬಗ್ಗೆ ಆದೇಶ ಹೊರಡಿಸಿದೆ.
ಯುಜಿಸಿ ನಿಯಮಗಳ ಆದೇಶ ಸಂಖ್ಯೆ 18/07/2018, ಸರ್ಕಾರಿ ಆದೇಶ ಸಂಖ್ಯೆ 16/03/2019 ಹಾಗೂ ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಲಾದ ಆದೇಶ ಹಾಗೂ ಮಾರ್ಗಸೂಚಿಗಳು ಹಾಗೂ ಕೇಂದ್ರ ಕಛೇರಿಯಲ್ಲಿ ದಿನಾಂಕ 16/03/2023 ರಿಂದ ದಿನಾಂಕ 20/03/2023 ರವರೆಗೆ ನಡೆದ ಸಿ.ಎ.ಎಸ್ ಆಯ್ಕೆ ಸಮಿತಿಯ ಸಭೆಯ ಉಲ್ಲೇಖದಲ್ಲಿ ಈ ಆದೇಶ ಪ್ರಕಟವಾಗಿದೆ.

ಈ ಆದೇಶ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು/ ದೈಹಿಕ ಶಿಕ್ಷಣ ನಿರ್ದೇಶಕರು/ ಗ್ರಂಥಪಾಲಕರಿಗೆ 2018ರ ಯು.ಜಿ.ಸಿ. ವೇತನ ಶ್ರೇಣಿಗಳನ್ನು ಹಾಗೂ ಶೈಕ್ಷಣಿಕ ಹಂತ 12ರ ಯು.ಜಿ.ಸಿ ವೇತನ ಶ್ರೇಣಿ ರೂ. 79800-211500 ರಲ್ಲಿ ಪೂರೈಸಿರುವ 3 ವರ್ಷಗಳ ಸೇವೆಯನ್ನು ಪರಿಗಣಿಸಿ ಸಿ.ಎ.ಎಸ್ ವೃತ್ತಿ ಪದೋನ್ನತಿ ಅಡಿಯಲ್ಲಿ ಶೈಕ್ಷಣಿಕ ಹಂತ 13ಎ ರ ವೇತನ ಶ್ರೇಣಿ ರೂ. 131400-217100 ರಲ್ಲಿ ಪದೋನ್ನತಿ ಹೊಂದಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಹೇಳಿದೆ.
ಸರ್ಕಾರ ಹಾಗೂ ಯು.ಜಿ.ಸಿ.ಯ ಉಲ್ಲೇಖ (1) ಮತ್ತು (2)ರ ಆದೇಶಗಳನ್ವಯ 2018ರ ಯು.ಜಿ.ಸಿ. ವೇತನ ಶ್ರೇಣಿಯಲ್ಲಿ ಅನ್ವಯಿಸುವ ಷರತ್ತುಗಳಿಗೊಳಪಟ್ಟು ವೃತ್ತಿ ಪದೋನ್ನತಿ ಯೋಜನೆಯಡಿಯಲ್ಲಿ (Career Advancement Scheme) ಶೈಕ್ಷಣಿಕ ಹಂತಗಳಲ್ಲಿ ಪದೋನ್ನತಿ ಮಂಜೂರು ಮಾಡಲು ಸರ್ಕಾರದ ಆದೇಶದಲ್ಲಿ ಅನುಮೋದನೆ ನೀಡಲಾಗಿರುತ್ತದೆ.

ಪದೋನ್ನತ್ತಿಗೆ ಷರತ್ತುಳು; ಪ್ರಾಂಶುಪಾಲರು ತಮ್ಮ ಹಂತದಲ್ಲಿ ಯು.ಜಿ.ಸಿ.ಯ ದಿನಾಂಕ 18/07/2018ರ ಕಂಡಿಕೆ 5.0 ರಿಂದ 6.4 ವರೆಗಿನ ಪ್ರಕಾರ ಆಯ್ಕೆ ಸಮಿತಿಯನ್ನು ರಚಿಸಿ ಸಹಾಯಕ ಪ್ರಾಧ್ಯಾಪಕರು/ ದೈಹಿಕ ಶಿಕ್ಷಣ ನಿರ್ದೇಶಕರು/ ಗ್ರಂಥಪಾಲಕರಿಗೆ ಸಂಬಂಧಿಸಿದಂತೆ, ಅಧಿಸೂಚನೆಯಲ್ಲಿ ನೀಡಲಾಗಿರುವ ಮಾರ್ಗಸೂಚಿ ಕೂಲಂಕಷವಾಗಿ ಪರಿಶೀಲಿಸಿ, ಗ್ರೇಡಿಂಗ್ ಆಧಾರಿಸಿ ಶೈಕ್ಷಣಿಕ ಹಂತಕ್ಕೆ ಅರ್ಹತೆ ಹೊಂದಿರುವವರ ಮಾಹಿತಿಗಳನ್ನು ನಿಗದಿತ ನಮೂನೆಗಳಲ್ಲಿ ಹಾಗೂ ಪ್ರಾಂಶುಪಾಲರ ಹಂತದ ಸಮಿತಿಯ ಶಿಫಾರಸ್ಸಿನೊಂದಿಗೆ ಅನುಮೋದನೆಗೆ ಸಲ್ಲಿಸಲಾಗಿದೆ.
ಇದರ ಪ್ರಕಾರ ಪ್ರಾಂಶುಪಾಲರ ಹಂತದ ಸಮಿತಿಯು ಅರ್ಹ ಸಹಾಯಕ ಪ್ರಾಧ್ಯಾಪಕರು/ ದೈಹಿಕ ಶಿಕ್ಷಣ ನಿರ್ದೇಶಕರು/ ಗ್ರಂಥಪಾಲಕರಿಗೆ ಉನ್ನತ ಶೈಕ್ಷಣಿಕ ಹಂತ 13ಎ ರ ವೃತ್ತಿ ಪದೋನ್ನತಿಗಾಗಿ ಶಿಫಾರಸ್ಸು ಮಾಡಿರುತ್ತಾರೆ. ಪ್ರಾಂಶುಪಾಲರ ಹಂತದ ಸಮಿತಿಯ ಶಿಫಾರಸ್ಸಿನ ಮೇರೆಗೆ ಸ್ವೀಕೃತಗೊಂಡ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹತೆ ಹೊಂದಿದವವರನ್ನು ಕೇಂದ್ರ ಕಛೇರಿಯಲ್ಲಿ ರಚಿಸಲಾಗಿರುವ ವಿಷಯ ತಜ್ಞರು ಹಾಗೂ ವಿಶ್ವವಿದ್ಯಾಲಯದ ಪ್ರತಿನಿಧಿಗಳನ್ನೊಳಗೊಂಡ ಆಯ್ಕೆ ಸಮಿತಿಯ ಮುಂದೆ ಪೂರಕ ದಾಖಲೆಗಳೊಂದಿಗೆ ಹಾಜರುಪಡಿಸಲಾಗಿತ್ತು.
ಅದರನ್ವಯ ಸಂದರ್ಶನಕ್ಕೆ/ ಪರಿಶೀಲನೆಗೆ ಹಾಜರಾದ ಸಹಾಯಕ ಪ್ರಾಧ್ಯಾಪಕರ ದೈಹಿಕ ನಿರ್ದೇಶಕರ/ ಗ್ರಂಥಪಾಲಕರ ಗ್ರೇಡಿಂಗ್‌ಗಳಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು, ಸಂಶೋಧನಾ ಲೇಖನಗಳು, ಶೈಕ್ಷಣಿಕ ಚಟುವಟಿಕೆಗಳು, ಪಠ್ಯ ಪುಸ್ತಕ ಪ್ರಕಟಿಸಿರುವ ಲೇಖನ, ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿ ಶೈಕ್ಷಣಿಕ ಹಂತ 13 ಎ ರಲ್ಲಿ ವೃತ್ತಿ ಪದೋನ್ನತಿ ಮಂಜೂರು ಮಾಡಲು ತೀರ್ಮಾನಿಸಲಾಗಿದೆ.
ಸರ್ಕಾರದ ದಿನಾಂಕ 02/03/202ರ ಆದೇಶದ ಅನುಮೋದನೆಗಳ ಪ್ರಕಾರ ಪ್ರಾಂಶುಪಾಲರ ಹಂತದ ಸಮಿತಿಯ ಶಿಫಾರಸ್ಸಿನ ಮೇರೆಗೆ ಹಾಗೂ ಇಲಾಖಾ ಹಂತದ ವೃತ್ತಿ ಪದೋನ್ನತಿ ಆಯ್ಕೆ ಸಮಿತಿಯ ತೀರ್ಮಾನದಂತೆ, ಒಟ್ಟು 88 ಸಹಾಯಕ ಪ್ರಾಧ್ಯಾಪಕರು/ ದೈಹಿಕ ಶಿಕ್ಷಣ ನಿರ್ದೇಶಕರು/ ಗ್ರಂಥಪಾಲಕರಿಗೆ ಶೈಕ್ಷಣಿಕ ಹಂತದ 13ಎ ರಲ್ಲಿ ವೃತ್ತಿ ಪದೋನ್ನತಿಯನ್ನು ಯುಜಿಸಿ ವೇತನ ಶ್ರೇಣಿ ರೂ.131400-217100 ಯನ್ನು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಮಂಜೂರು ಮಾಡಿ ಆದೇಶಿಸಲಾಗಿದೆ.
ಷರತ್ತುಗಳು
* 2018ರ ಯುಜಿಸಿ ವೇತನ ಶ್ರೇಣಿಗಳಲ್ಲಿನ ಗ್ರೇಡಿಂಗ್ ಆಧಾರಿತ ಶೈಕ್ಷಣಿಕ ಹಂತ ಮಂಜೂರಾತಿಯು ಉಲ್ಲೇಖ (1) ರಿಂದ (4) ರವರೆಗಿನ ಯುಜಿಸಿ/ ಸರ್ಕಾರದ ಆದೇಶಗಳಲ್ಲಿನ ನಿಯಮಗಳ ನಿಬಂಧನೆಗಳೂಪಟ್ಟಿರುತ್ತದೆ.
* ಸಹಾಯಕ ಪ್ರಾಧ್ಯಾಪಕರ ಖಾಯಂ ನೇಮಕಾತಿ ದಿನಾಂಕ, ಯು.ಜಿ.ಸಿ. ವೇತನ ನಿಗದೀಕರಣದ ದಿನಾಂಕ, ವೇತನ ರಹಿತ ರಜೆ/ ಅನಧಿಕೃತ ಗೈರು ಹಾಜರಿ, ಶಿಸ್ತು ಕ್ರಮದ ಮಾಹಿತಿ, ಸಂಶೋಧನಾ ಲೇಖನ ಹಾಗೂ ರೆಫ್ರೆಷರ್ ಕೋರ್ಸ್‌ಗಳನ್ನು ನಿಗದಿತ ಎರಡು ವಾರದ ತರಬೇತಿ ಪೂರೈಸಿರುವುದು, ಇನ್ನಿತರೆ ಎಲ್ಲಾ ಅಂಶಗಳಿಗೆ ಸಂಬಂಧಿಸಿದಂತೆ ಪ್ರಾಂಶುಪಾಲರ ಹಂತದ ಸಮಿತಿಯು ಮತ್ತೊಮ್ಮೆ ಪರಿಶೀಲಿಸುವ ನಿಬಂಧನೆಗೊಳಪಟ್ಟಿರುತ್ತದೆ.
* ಈ ವೃತ್ತಿ ಪದೋನ್ನತಿ ಮಂಜೂರಾತಿಯು ಯುಜಿಸಿ/ ಸರ್ಕಾರ/ ಇಲಾಖೆ ಕಾಲಕಾಲಕ್ಕೆ ಹೊರಡಿಸುವ ಆದೇಶ/ ಸುತ್ತೋಲೆ/ಪತ್ರಗಳಲ್ಲಿ ನಿಗದಿಪಡಿಸುವ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.
* ಈ ವೃತ್ತಿ ಪದೋನ್ನತಿಯನ್ನು ಸೇವಾ ಜೇಷ್ಠತೆಗೆ ಪರಿಗಣಿಸಲು ಅವಕಾಶವಿರುವುದಿಲ್ಲ.
* ಈ ಆದೇಶದನ್ವಯ ಮಂಜೂರು ಮಾಡಲಾದ ಶೈಕ್ಷಣಿಕ ಹಂತಗಳ ವೃತ್ತಿ ಪದೋನ್ನತಿಯು ಸ್ಥಳೀಯ/ ಮಹಾಲೇಖಪಾಲರ ಲೆಕ್ಕಪರಿಶೋಧನೆಗೆ ಒಳಪಟ್ಟಿದ್ದು, ಯಾವುದೇ ಅಸಂಗತೆ ಮಾಹಿತಿ ಕಂಡು ಬಂದಲ್ಲಿ ಮರು ಪರಿಶೀಲಿಸುವ ಮತ್ತು ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳುವ ಷರತ್ತಿಗೊಳಪಟ್ಟಿರುತ್ತದೆ.
* ವೃತ್ತಿ ಪದೋನ್ನತಿ ಮಂಜೂರಾತಿ ಆದೇಶದ ಮೇರೆಗೆ ಪ್ರಾಂಶುಪಾಲರು ಎಲ್ಲಾ ದಾಖಲಾತಿಗಳನ್ನು ಮತ್ತೊಮ್ಮೆ ಪರಿಶೀಲಿಸಿದ ನಂತರ ಸಹ ಪ್ರಾಧ್ಯಾಪಕರ ವೇತನ ನಿಗದೀಕರಣದ ಬಗ್ಗೆ ಅಗತ್ಯ ಕ್ರಮಕೈಗೊಳ್ಳತಕ್ಕದ್ದು.












Click it and Unblock the Notifications