ವಿಜಯಪುರ : ಮೂರು ಅಂತಸ್ತಿನ ಕಾಲೇಜು ಕಟ್ಟಡ ಕುಸಿತ
ವಿಜಯಪುರ, ಆ.10 : ಕಾಲೇಜಿನ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ. ಕಟ್ಟಡದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಜೀವಹಾನಿಯಾಗಿಲ್ಲ.
ರೇಶ್ಮಿ ಪ್ಯಾರಾ ಮೆಡಿಕಲ್ ಇನ್ಸಿಟ್ಯೂಟ್‌ಗೆ ಸೇರಿದ ಪಿಯುಸಿ ವಿಜ್ಞಾನ ಕಾಲೇಜು ಕಟ್ಟಡ ಗುರುವಾರ ಬೆಳಗ್ಗೆ ಕುಸಿದುಬಿದ್ದಿದೆ. ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಅದೃಷ್ಟವಶಾತ್ ಕಟ್ಟಡ ಕುಸಿದು ಬೀಳುವಾಗ ಯಾರೂ ಕಾಲೇಜಿನ ಕಟ್ಟಡದಲ್ಲಿ ಇರಲಿಲ್ಲ. ಆದ್ದರಿಂದ, ಯಾವುದೇ ಜೀವಹಾನಿಯಾಗಿಲ್ಲ. ಕಾಲೇಜಿನ ಆಡಳಿತ ಮಂಡಳಿ ಕಟ್ಟಡ ಶಿಥಿಲಗೊಂಡಿದ್ದರೂ ನಿರ್ಲಕ್ಷ್ಯ ತೋರಿತ್ತು ಎಂದು ಆರೋಪಿಸಲಾಗಿದೆ.












Click it and Unblock the Notifications