Coconut: ತೆಂಗು ಕೃಷಿ: ಕಡಿಮೆ ಅವಧಿಗೆ ಉತ್ತಮ ಫಸಲು.. ಲಕ್ಷ.. ಲಕ್ಷ ಆದಾಯ ತಂದುಕೊಡುವ ತಳಿ

Coconut: ಇದೀಗ ತೆಂಗು ಬೆಳೆ ಈಗ ಕೇವಲ ಸಾಂಪ್ರದಾಯಿಕ ಕೃಷಿಯಾಗಿ ಉಳಿದಿಲ್ಲ, ಬದಲಿಗೆ ಯುವ ಕೃಷಿಕರನ್ನು ಸೆಳೆಯುತ್ತಿರುವ ಯಶಸ್ವಿ ಉದ್ಯಮವಾಗಿ ಮಾರ್ಪಟ್ಟಿದೆ. ದೀರ್ಘಾವಧಿ ಕಾಯುವಿಕೆಯ ಸಾಂಪ್ರದಾಯಿಕ ತಳಿಗಳಿಗೆ ಗುಡ್‌ಬೈ ಹೇಳುತ್ತಿರುವ ರಾಜ್ಯದ ರೈತರು, ಕೇವಲ 3ರಿಂದ 4 ವರ್ಷಗಳಲ್ಲೇ ಕಾಯಿ ಬಿಡುವ ತಳಿಯ ತೆಂಗಿನತ್ತ ಮುಖ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕ್ಷೇತ್ರದತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ತೋಟ ಹೆಚ್ಚು ಆದಾಯ ಗಳಿಸುವ ಉದ್ದೇಶದಿಂದ ತೆಂಗಿನ ಕೃಷಿಯನ್ನು ಅವಲಂಬನೆ ಮಾಡುತ್ತಿದ್ದಾರೆ. ಇದರಿಂದ ತೆಂಗಿನ ಕೃಷಿಗೆ ಇದೀಗ ಎಲ್ಲಿಲ್ಲದ ಬೇಡಿಕೆ ಬಂದಂತಾಗಿದೆ.

Coconut Farming High-Yield Varieties Give Farmers coconut in Just 3-4 Years Know Complete details

ಅತೀ ಬೇಗ ಫಸಲು ನೀಡುವ ತಳಿಯ ವಿವರ

ಅತೀ ಬೇಗನೆ ಇಳುವರಿ ನೀಡುವ ಗಿಡ್ಡ ಹಾಗೂ ಹೈಬ್ರಿಡ್ ತಳಿಯ ತೆಂಗಿನ ತಳಿಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಸಾಂಪ್ರದಾಯಿಕ ತಳಿಗಳು ಫಲ ನೀಡಲು ಹೆಚ್ಚು ಕಾಲ ತೆಗೆದುಕೊಳ್ಳುತ್ತವೆ. ಆದ್ದರಿಂದ ಕೇವಲ 3ರಿಂದ 4 ವರ್ಷಗಳಲ್ಲೇ ಫಲ ಕೊಡುವ ಹೊಸ ನಮೂನೆಯ 'ಗಿಡ್ಡ' ತಳಿಯ ತೆಂಗಿನ ಸಸಿಗಳು ಕೃಷಿಕರ ನೆಚ್ಚಿನ ಆಯ್ಕೆಯಾಗಿವೆ ಎಂದು ವರದಿಯಾಗಿದೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ

ರೈತರ ಪಾಲಿಗೆ ತೆಂಗು ಒಂದು ಉತ್ತಮ ಆದಾಯ ತಂದುಕೊಡುವ ಬೆಳೆಯಾಗಿದೆ. ತೆಂಗಿನ ಮರದ ಪ್ರತಿಯೊಂದು ಭಾಗಕ್ಕೂ ಈಗ ಭಾರಿ ಬೇಡಿಕೆ ಇದೆ. ಆದ್ದರಿಂದ ಕೃಷಿ ವಿಜ್ಞಾನಿಗಳು ಕಡಿಮೆ ಎತ್ತರ ಬೆಳೆಯುವ ಮತ್ತು ಬೇಗನೆ ಇಳುವರಿ ನೀಡುವ ತಳಿಗಳನ್ನು ಯಶಸ್ವಿಯಾಗಿ ಸಂಶೋಧಿಸಿದ್ದಾರೆ. ಈ ಸಸಿಗಳಿಗೆ ರಾಜ್ಯಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದ್ದು, ಭರ್ಜರಿ ಮಾರಾಟ ಕಾಣುತ್ತಿವೆ.

ವಾರ್ಷಿಕ 20 ಲಕ್ಷಕ್ಕೂ ಅಧಿಕ ಸಸಿಗಳ ಮಾರಾಟ

ರಾಜ್ಯದಲ್ಲಿ ಬೆಳೆಯುವ ಒಟ್ಟು ತೆಂಗಿನಲ್ಲಿ ತುಮಕೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳೇ ಶೇಕಡ 80ರಷ್ಟು ಪಾಲು ಹೊಂದಿವೆ. ಅದರಲ್ಲೂ ತಿಪಟೂರು ಮತ್ತು ಅರಸೀಕೆರೆ ವ್ಯಾಪ್ತಿಯ ತಳಿಗಳು ಜಾಗತಿಕ ಮಟ್ಟದಲ್ಲೂ ಪ್ರಸಿದ್ಧಿ ಪಡೆದಿವೆ. ರಾಜ್ಯದ ಅಂದಾಜು 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಕೊವಿಡ್ ಸೋಂಕಿನ ನಂತರ ಆರೋಗ್ಯ ಜಾಗೃತಿ ಹೆಚ್ಚಿದ್ದರಿಂದ ತೆಂಗಿನ ಉತ್ಪನ್ನಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಿದೆ. ವಯಸ್ಸಾದ ಮರಗಳ ತೆರವು ಹಾಗೂ ನುಸಿ ಪೀಡೆಯಿಂದ ನಾಶವಾದ ಮರಗಳ ಜಾಗದಲ್ಲಿ ಹೊಸ ಸಸಿಗಳನ್ನು ನೆಡಲಾಗುತ್ತಿದ್ದು, ಪ್ರತಿವರ್ಷ 20 ರಿಂದ 25 ಲಕ್ಷ ತೆಂಗಿನ ಸಸಿಗಳು ಮಾರಾಟವಾಗುತ್ತಿವೆ ಎಂದು ತಿಳಿದುಬಂದಿದೆ.

ಜಾಗತಿಕ ಮಟ್ಟದಲ್ಲಿ ಭಾರತ ನಂಬರ್ ಒನ್

ತೆಂಗು ಕೃಷಿಯಲ್ಲಿ ವಿಶ್ವಮಟ್ಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ದೇಶದ 19 ರಾಜ್ಯಗಳಲ್ಲಿ ತೆಂಗು ಕೃಷಿಯನ್ನು ವಿಸ್ತರಿಸುವ ಕಾರ್ಯ ನಡೆಯುತ್ತಿದೆ. ಅದರಲ್ಲೂ ಕರ್ನಾಟಕದಲ್ಲೇ ಪ್ರಸ್ತುತ ಅತೀ ಹೆಚ್ಚು ತೆಂಗು ಬೆಳೆಯುವ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿದೆ.

ರಾಜ್ಯದಲ್ಲಿ ತೆಂಗು ಕೃಷಿ ವಿಸ್ತರಣೆಗೆ ತೋಟಗಾರಿಕೆ ಇಲಾಖೆ ಹಾಗೂ ರಾಷ್ಟ್ರೀಯ ತೆಂಗು ಅಭಿವೃದ್ಧಿ ಮಂಡಳಿ ಸಕ್ರಿಯವಾಗಿ ಶ್ರಮಿಸುತ್ತಿವೆ. ರೈತರಿಗೆ ಅಗತ್ಯ ತಾಂತ್ರಿಕ ಮಾರ್ಗದರ್ಶನ ನೀಡಲಾಗುತ್ತಿದ್ದು, ಸಬ್ಸಿಡಿ ದರದಲ್ಲಿ ಉತ್ತಮ ತಳಿಯ ಸಸಿಗಳನ್ನು ವಿತರಿಸಲಾಗುತ್ತಿದೆ. ಕಡಿಮೆ ಆದಾಯ ತರುವ ಬೆಳೆಗಳ ಬದಲಾಗಿ ರೈತರು ನಿರಂತರ ಆದಾಯ ನೀಡುವ ತೆಂಗು ಮತ್ತು ಅಡಿಕೆ ಬೆಳೆಗಳತ್ತ ಆಕರ್ಷಿತರಾಗುತ್ತಿದ್ದಾರೆ.

ದೇಶದಲ್ಲಿ ಹೆಚ್ಚು ತೆಂಗು ಬೆಳೆಯುವ ಟಾಪ್ 10 ರಾಜ್ಯಗಳು: ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಮಹಾರಾಷ್ಟ್ರ, ಗುಜರಾತ್, ಗೋವಾ ಮತ್ತು ಅಸ್ಸಾಂ.

ರಾಜ್ಯದ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಗಳು

* ತುಮಕೂರು
* ಮಂಡ್ಯ
* ಹಾಸನ
* ಚಿಕ್ಕಮಗಳೂರು
* ಚಿತ್ರದುರ್ಗ
* ಉಡುಪಿ
* ಮೈಸೂರು
* ದಕ್ಷಿಣ ಕನ್ನಡ
* ರಾಮನಗರ
* ಚಾಮರಾಜನಗರ.

ಬೆಳೆಗಾರರ ಪ್ರಮುಖ ಬೇಡಿಕೆಗಳು

* ಸರ್ಕಾರವು ಎನ್‌ಡಿಡಿಸಿ ಮಾದರಿಯಲ್ಲಿ ತೆಂಗು ಬೆಳೆಗಾರರಿಗಾಗಿ ಹೊಸ ಕಾರ್ಯಕ್ರಮ ರೂಪಿಸಬೇಕು.

* ನುಸಿಪೀಡೆ ಹಾಗೂ ಕೀಟಬಾಧೆಯಿಂದ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು.

* ಸಣ್ಣ ಮತ್ತು ಅಂಚಿನ ರೈತರಿಗೆ ಉಚಿತವಾಗಿ ಸುಧಾರಿತ ತಳಿಯ ತೆಂಗಿನ ಸಸಿಗಳನ್ನು ವಿತರಿಸಬೇಕು.

* ತೆಂಗು ಬೆಳೆಗಾರರ ಮಕ್ಕಳಿಗೆ ತೆಂಗು ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಕುರಿತು ತರಬೇತಿ ಹಾಗೂ ಸಂಸ್ಕರಣಾ ಘಟಕ ಸ್ಥಾಪನೆಗೆ ಸಾಲ ಸೌಲಭ್ಯ ಒದಗಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+