ಬೇಕಾಬಿಟ್ಟಿ ದರ ವಸೂಲಿ ಮಾಡುವ ಖಾಸಗಿ ಬಸ್‌ಗಳ ವಿರುದ್ಧ ಕ್ರಮ: ಸಿಎಂ

ಬೆಂಗಳೂರು, ನವೆಂಬರ್ 2: 'ಇರೋದು ಒಂದೇ ಸೀಟು ಬೇಕಿದ್ರೆ ಇಷ್ಟು ಹಣಕೊಟ್ಟು ಬನ್ನಿ ಇಲ್ಲ ಅಂದ್ರೆ ನಿಮ್ಮಿಷ್ಟ' ಇದು ಖಾಸಗಿ ಬಸ್‌ಗಳ ಕಂಡಕ್ಟರ್ ಮಾತು.

ಹೌದು ಹಬ್ಬಗಳು ಬಂತೆಂದರೆ ಸಾಕು ತಮ್ಮ ನಿಯತ್ತು ಮರೆತು ಖಾಸಗಿ ಬಸ್‌ಗಳು ಸುಲಿಗೆಗಿಳಿದುಬಿಡುತ್ತವೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

ಖಾಸಗಿ ಬಸ್‌ಗಳು ಬೇಕಾಬಿಟ್ಟಿ ಬಸ್‌ದರವನ್ನು ಹೆಚ್ಚಳ ಮಾಡುವ ಹಾಗಿಲ್ಲ, ಒಂದೊಮ್ಮೆ ಬಸ್‌ ಮಾಲೀಕರ ಕುರಿತು ದೂರು ಬಂದರೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

CM warns Private buses over high fares

ಇನ್ನು ದೀಪಾವಳಿ ಹಬ್ಬಕ್ಕೆ ಆರು ದಿನಗಳು ಬಾಕಿ ಇದೆ ಕೆಎಸ್‌ಆರ್‌ಟಿಸಿಯು 1500 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಿದೆ. ಆದರೂ ಖಾಸಗಿ ಬಸ್‌ಗಳ ದಂಧೆ ಮಾತ್ರ ಕಡಿಮೆಯಾಗಿಲ್ಲ. ದುಪ್ಪಟ್ಟು ಹಣವನ್ನು ಬಾಚಿಕೊಳ್ಳಲು ಆರಂಭಿಸಿದೆ.

ಈಗಾಗಲೇ ಸರ್ಕಾರಿ ಬಸ್‌ಗಳು ಸೀಟುಗಳು ಬಹುತೇಕ ಬುಕ್ ಆಗಿವೆ ಇನ್ನು ಖಾಸಗಿ ಬಸ್‌ಗಳಿಗೆ ಮೊರೆ ಹೋಗುವವರ ಸಂಖ್ಯೆ ಹೆಚ್ಚಿದೆ. ಬಸ್‌ಗಳ ಸೀಟು ಭರ್ತಿಯಾಗದಿದ್ದರೂ ಖಾಲಿ ಇಲ್ಲ ಕೇವಲ ಒಂದೇ ಸೀಟು ಇರೋದು ಇಷ್ಟು ಹಣ ಕೊಟ್ರೆ ಮಾತ್ರ ಸೀಟು ಸಿಗುತ್ತೆ ಎಂದು ಹೇಳಿ ದಂಧೆಗಿಳಿದಿದ್ದಾರೆ. ಅನಿವಾರ್ಯವಾಗಿ ಸಾರ್ವಜನಿಕರು ಅವರು ಕೇಳಿದಷ್ಟು ಹಣವನ್ನು ನೀಡುತ್ತಿದ್ದಾರೆ. ಆದರೆ ಇನ್ನುಮುಂದೆ ಇದಕ್ಕೆ ಕಡಿವಾಣ ಬೀಳುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+