‘ಅನ್ನಭಾಗ್ಯ’ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಬಿಗ್ ಅಪ್‌ಡೇಟ್!
ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಮೊದಲ ಬಾರಿ ಅಧಿಕಾರಕ್ಕೆ ಬಂದ ನಂತರ, ಅಂದ್ರೆ 2013ರಲ್ಲಿ ಸಿಎಂ ಆದ ನಂತರ 'ಅನ್ನಭಾಗ್ಯ' ಯೋಜನೆ ಜಾರಿಗೆ ತಂದರು. ಈ ಯೋಜನೆ ಆಗಿನ ಕಾಲಕ್ಕೆ ದೇಶಾದ್ಯಂತ ದೊಡ್ಡ ಸದ್ದು ಮಾಡಿತ್ತು. 2023ರಲ್ಲಿ ಮತ್ತೆ ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರಕ್ಕೆ ಬಂದ ನಂತರ 'ಅನ್ನಭಾಗ್ಯ' ಯೋಜನೆಗೆ ಮತ್ತಷ್ಟು ವೇಗ ಸಿಕ್ಕಿತ್ತು. ಈಗ ಈ ಯೋಜನೆಗೆ 10 ವರ್ಷ ತುಂಬಿದ್ದು, ಸಿದ್ದರಾಮಯ್ಯ ಅವರು ಕರ್ನಾಟಕ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯುವಲ್ಲಿ 5 ಗ್ಯಾರಂಟಿ ಯೋಜನೆಗಳ ಆಶ್ವಾಸನೆ ದೊಡ್ಡ ಪಾತ್ರವನ್ನೇ ವಹಿಸಿತ್ತು. ಇದೇ ಕಾರಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಯುದ್ಧವೂ ನಡೆಯುತ್ತಿದೆ. ಅದ್ರಲ್ಲೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನೇ ಬಿಜೆಪಿಯೂ ಅಸ್ತ್ರ ಮಾಡ್ಕೊಂಡು ಪ್ರತಿನಿತ್ಯ ವಾಗ್ದಾಳಿ ನಡೆಸುತ್ತಿದೆ. ಈ ಸಮಯಕ್ಕೇ ಲೋಕಸಭೆ ಚುನಾವಣೆಯೂ ಬಂದಿದೆ, ಹೀಗಿದ್ದಾಗ ಸಿಎಂ ಸಿದ್ದರಾಮಯ್ಯ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಅದ್ರಲ್ಲೂ ಅನ್ನಭಾಗ್ಯ ಯೋಜನೆ ವಿಚಾರವಾಗಿ ಬಿಗ್ ನ್ಯೂಸ್ ಸಿಕ್ಕಿದೆ!

'ಹಸಿವು ಮುಕ್ತ ಕರ್ನಾಟಕ ನಿರ್ಮಾಣ..'
ಇದೀಗ ಸಿಎಂ ಸಿದ್ದರಾಮಯ್ಯ ಅವರು ವಿಶೇಷ ಟ್ವೀಟ್ ಒಂದನ್ನ ಮಾಡಿ ಅನ್ನಭಾಗದ ಬಗ್ಗೆ ವಿಶೇಷ ಮಾಹಿತಿ ನೀಡಿದ್ದು, 'ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯು ಹತ್ತು ವರ್ಷ ಪೂರೈಸುತ್ತಿರುವುದು ಖುಷಿಯ ಜೊತೆಗೆ ಸಂತೃಪ್ತಭಾವ ಮೂಡಿಸಿದೆ.' ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಒಂದು ಗುಡ್ ನ್ಯೂಸ್ ಕೂಡ ಕೊಟ್ಟಿದ್ದಾರೆ.
ಅನ್ನಭಾಗ್ಯ ದಶಕದ ಸಂಭ್ರಮ!
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮಾತನ್ನು ಮುಂದುವರಿಸಿ, 'ನಾಡನ್ನು ಕೊರೊನಾ, ಬರ ಮತ್ತು ಪ್ರವಾಹ ಬಾಧಿಸಿದಾಗ ಜನರ ನೆರವಿಗೆ ನಿಂತಿದ್ದು ನಮ್ಮ ಅನ್ನಭಾಗ್ಯ ಕಾರ್ಯಕ್ರಮ ಎಂಬುದು ಇದರ ಯಶಸ್ಸಿಗೆ ಹಿಡಿದ ಕನ್ನಡಿ. ಇಂತಹ ಜನಪರ ಯೋಜನೆ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನ ನಾಳೆ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ತಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಾರ್ಥಕ ಕ್ಷಣದಲ್ಲಿ ಭಾಗಿಯಾಗಬೇಕೆಂದು ಕೋರುತ್ತೇವೆ.' ಎಂದು ಮನವಿ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ.
ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯು ಹತ್ತು ವರ್ಷ ಪೂರೈಸುತ್ತಿರುವುದು ಖುಷಿಯ ಜೊತೆಗೆ ಸಂತೃಪ್ತಭಾವ ಮೂಡಿಸಿದೆ.
— Siddaramaiah (@siddaramaiah) February 28, 2024
ನಾಡನ್ನು ಕೊರೊನಾ, ಬರ ಮತ್ತು ಪ್ರವಾಹ ಬಾಧಿಸಿದಾಗಲೆಲ್ಲ ಜನರ ನೆರವಿಗೆ ನಿಂತಿದ್ದು ನಮ್ಮ ಅನ್ನಭಾಗ್ಯ ಕಾರ್ಯಕ್ರಮ ಎಂಬುದು ಇದರ ಯಶಸ್ಸಿಗೆ… pic.twitter.com/04lHO8MHq2
ಒಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಜಾರಿಗೆ ತಂದಿದ್ದ ದೊಡ್ಡ ಯೋಜನೆ ಅನ್ನಭಾಗ್ಯ, ಈಗ ದಶಕದ ಸಂಭ್ರಮದಲ್ಲಿ ಇದೆ. ಹೀಗಾಗಿ ಇದನ್ನ ಜನರಿಗೆ ತಲುಪಿಸಲು ಸಿದ್ದರಾಮಯ್ಯ ಅವರ ಸರ್ಕಾರ ಹೊಸ ಪ್ಲಾನ್ ಮಾಡಿದೆ. ಈ ಮೂಲಕ ವಿರೋಧ ಪಕ್ಷಗಳ ನಾಯಕರಿಗೂ ಹೊಸ ಸವಾಲು ಎಸೆಯಲು ವೇದಿಕೆ ಸಿದ್ಧವಾಗಿದೆ.












Click it and Unblock the Notifications