ಫಾಲಿ ನಾರಿಮನ್ ತೆಗೆದು ಹಾಕಿ, ಬೇಡಿಕೆಗೆ ಸೊಪ್ಪು ಹಾಕದ ಸಿಎಂ

Posted By:
Subscribe to Oneindia Kannada

ಬೆಂಗಳೂರು, ಸೆ. 07: ಕಾವೇರಿ ಜಲವಿವಾದದಲ್ಲಿ ರಾಜ್ಯಕ್ಕೆ ಪದೇ ಪದೆ ಸೋಲುಂಟಾಗುತ್ತಿರುವುದಕ್ಕೆ ಫಾಲಿ ನಾರಿಮನ್ ಹಾಗೂ ಅವರ ತಂಡವೇ ಕಾರಣ. ಸಮರ್ಥವಾಗಿ ವಾದ ಮಂಡಿಸದ ಕಾರಣ ಸುಪ್ರೀಂಕೋರ್ಟಿನಿಂದ ರಾಜ್ಯದ ವಿರುದ್ಧವಾದ ತೀರ್ಪು ಬಂದಿದೆ ಎಂಬ ಕೂಗಿಗೆ ಸಿಎಂ ಸಿದ್ದರಾಮಯ್ಯ ಕಿವಿಯೊಡ್ಡಿಲ್ಲ.

ಹಿರಿಯ ವಕೀಲರಾದ ಫಾಲಿ ನಾರಿಮನ್ ಅವರನ್ನು ಬದಲಾಯಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಕಾವೇರಿ ವಿವಾದದಲ್ಲಿ ನಾರಿಮನ್ ನೇತೃತ್ವದ ತಂಡ ರಾಜ್ಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದೆ ಎಂದಿದ್ದಾರೆ.

CM Siddaramaiah rejects demand to remove of Fali S. Nariman and Panel

ಮಾಜಿ ಸಂಸದ, ಕಾವೇರರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಅವರು ಕರ್ನಾಟಕ ವಕೀಲರ ಆಯೋಗದ ಮುಖ್ಯಸ್ಥರಾದ ಫಾಲಿ ಎಸ್ ನಾರಿಮನ್ ಅವರನ್ನು ತೆಗೆದು ಹಾಕುವಂತೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಜಲವಿವಾದದ ವಿಷಯದಲ್ಲಿ ನಾರಿಮನ್ ಅವರು ಆಳವಾಗಿ ಅಧ್ಯಯನ ಮಾಡಿದ್ದಾರೆ. ಅವರು ಮಂಡಿಸಿದ ವಾದ ಸಮರ್ಥವಾಗಿದೆ. ಅವರನ್ನು ಬದಲಾಯಿಸುವ ಅಗತ್ಯವಿಲ್ಲ. ಸುಪ್ರೀಂಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬರಲಿದೆ ಎಂಬ ಮಾಹಿತಿ ಸರ್ಕಾರಕ್ಕೆ ಮೊದಲೇ ನೀಡಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former MP and Cauvery Hitarakshana Samithi President G. Madegowda has demanded for the removal of Fali S. Nariman as the head of Karnataka’s Advocates Panel in the Supreme Court for failing to present the case effectively. But, CM Siddaramaiah rejected demand to remove of Fali S. Nariman and Panel
Please Wait while comments are loading...