Get Updates
Get notified of breaking news, exclusive insights, and must-see stories!

"ಸಿಎಂ ಸಿದ್ದರಾಮಯ್ಯ ಮಹಿಳಾ ಪತ್ರಕರ್ತೆಯರನ್ನೂ ಬಿಡ್ತಿಲ್ಲ" ಕೇಳಿ ಬಂತು ಗಂಭೀರ ಆರೋಪ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳಾ ಕಾರ್ಯಕರ್ತರೊಂದಿಗೆ ತಪ್ಪಾಗಿ ನಡೆದುಕೊಳ್ಳುತ್ತಾರೆ. ಮಹಿಳೆಯರು, ಮಹಿಳಾ ಕಾರ್ಯಕರ್ತೆಯರು ಇಲ್ಲ ಮಹಿಳಾ ಪತ್ರಕರ್ತರನ್ನೂ ಅವರು ಬಿಡುತ್ತಿಲ್ಲ ಅಂತ ಹಿಂದುತ್ವದ ಪ್ರಖರ ವಾಗ್ಮಿ ನಾಜೀಯಾ ಖಾನ್ ಅವರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರನ್ನೂ ಬಿಡುತ್ತಿಲ್ಲ. ನೊಂದವರ ಲಿಸ್ಟ್‌ ನನ್ನ ಬಳಿ ಇದೆ ಅಂತ ಅವರು ಹೇಳಿರುವ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಕರ್ನಾಟಕದಲ್ಲಿ ನಡೆದ ಸಮಾರಂಭದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಅವರ ಮೇಲೆ ಗಂಭೀರ ಆರೋಪಗಳನ್ನೂ ಅವರು ಮಾಡಿದ್ದಾರೆ. ನಾಜೀಯಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಹೇಳಿರುವುದೇನು ಎನ್ನುವ ಮಾಹಿತಿ ಇಲ್ಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ನಿಂತು ನಿರೂಪಕಿಯೊಬ್ಬರನ್ನು ನೋಡಿದ್ದು ಈ ಹಿಂದೆ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ನಗುತ್ತಲ್ಲೇ ಎಲ್ಲರ ಮುಂದೆ ಸಿದ್ದರಾಮಯ್ಯ ಅವರು ಮಾತನಾಡಿದ್ದರು. ಆದರೆ ಅವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನುವ ಬಗ್ಗೆ ಇದೀಗ ಗಂಭೀರ ಆರೋಪಗಳು ಕೇಳಿ ಬಂದಿವೆ. ಸಿಎಂ ಸಿದ್ದರಾಮಯ್ಯ ಅವರು ಮಹಿಳೆಯರು ಹಾಗೂ ಮಹಿಳಾ ಪತ್ರಕರ್ತರ ಜೊತೆ ಕೆಟ್ಟದಾಗಿ ವರ್ತಿಸುತ್ತಾರೆ ಅಂತ ವಾಗ್ಮಿ ನಾಜೀಯಾ ಖಾನ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಯಾರ ಬಳಿ ಈ ರೀತಿ ವರ್ತಿಸಿದ್ದಾರೆ ಎನ್ನುವ ಲಿಸ್ಟ್‌ ಇದೆ ಅಂತಲೂ ಅವರು ಹೇಳಿದ್ದಾರೆ.

CM Siddaramaiah is Not Even Sparing a Female Journalist Serious Allegations

ಬೆಳಗಾವಿಯಲ್ಲಿ ಸಿಎಂ ಕುರಿತು ನಾಜಿಯಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೆಳಗಾವಿ ತಾಲ್ಲೂಕಿನ ಸುಳೇಬಾವಿ ಗ್ರಾಮದಲ್ಲಿ ಬಟೇಂಗೆ ತೋ ಕಟೆಂಗೆ.. ಎಕ್ ಹೈ ತೋ ಸೇಫ್ ಹೈ ಎನ್ನುವ ಕಾರ್ಯಕ್ರಮವನ್ನ ಭಾನುವಾರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರೋಷಾವೇಷವಾಗಿ ಮಾತನಾಡಿರುವ ಅವರು ಸಿಎಂ ಸಿದ್ದರಾಮಯ್ಯ ಮೇಲೆ ಗಂಭೀರ ಆರೋಪಗಳನ್ನ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಾರೆ. ಸಿದ್ದರಾಮಯ್ಯ ಅವರ ಚುಮ್ಮಾ ಚಾಟಿ (ಮುತ್ತು) ಬಗ್ಗೆ ನಾನು ವಿರೋಧಿಸಿದ್ದೇನೆ. ಅಲ್ಲದೆ ಅವರು ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರಿಗೆ ಮುತ್ತು ಕೊಡುತ್ತಾರೆ. ಪಕ್ಷದ ಮಹಿಳಾ ವಕ್ತಾರೆಯರಿಗೆ ಮುತ್ತು ನೀಡುತ್ತಾರೆ.

ಚಲನಚಿತ್ರ ನಟಿಯರನ್ನೂ ಬಿಡದೇ ಅಪ್ಪಿಕೊಳ್ಳುತ್ತಾರೆ. ಅಲ್ಲದೆ ಕರ್ನಾಟಕದ ಮಹಿಳಾ ಪತ್ರಕರ್ತೆಯರೊಂದಿಗೂ ಸಿಎಂ ಅಸಭ್ಯವಾಗಿ ವರ್ತಿಸಲು ಯತ್ನಿಸಿದ್ದಾರೆ. ಮಹಿಳಾ ಪತ್ರಕರ್ತೆಯರೊಂದಿಗೂ ಚುಮ್ಮಾ ಚಾಟಿ ಮಾಡೋದಕ್ಕೆ ಟ್ರೈ ಮಾಡಿದ್ದಾರೆ.

ಲಿಸ್ಟ್‌ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಗಂಭೀರ ಆರೋಪ ಮಾಡಿರುವ ನಾಜೀಯಾ ಖಾನ್ ಅವರು ಸಿಎಂ ಯಾರ ಬಳಿ ಎಲ್ಲಾ ಈ ರೀತಿ ವರ್ತಿಸಿದ್ದಾರೆ ಅಂತ ನನಗೆ ಗೊತ್ತಿದೆ. ನನ್ನ ಬಳಿ ಸಿಎಂ ಸಿದ್ದರಾಮಯ್ಯ ಅವರಿಂದ ನೊಂದಿರುವ ಮಹಿಳಾ ಪತ್ರಕರ್ತೆಯರ ಲಿಸ್ಟ್ ಕೂಡ ಇದೆ ಅಂತ ಅವರು ಹೇಳಿದ್ದಾರೆ.

ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದ್ದು. ಚರ್ಚೆಗೂ ಕಾರಣವಾಗಿದೆ. ದೇಶದಲ್ಲಿ ನಾನು ಎಲ್ಲಿ ಬೇಕಾದರೂ ಭಾಷಣ ಮಾಡುವ ಸ್ವಾತಂತ್ರ ಇದೆ. ಅದೇ ರೀತಿ ನಾನು ಕರ್ನಾಟಕದಲ್ಲಿಯೂ ನಾನು ಭಾಷಣ ಮಾಡ್ತಿದ್ದಿನಿ ಅಂತ ಅವರು ಹೇಳಿದ್ದಾರೆ.

ಸಿಎಂ ವಿರುದ್ಧ ಹೇಳಿಕೆಗೆ ಆಕ್ರೋಶ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಆಧಾರ ರಹಿತವಾಗಿ ಆರೋಪ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಈ ಹೇಳಿಕೆಗೆ ಸಾರ್ವಜನಿಕ ವಲಯದಿಂದಲೂ ವಿರೋಧ ವ್ಯಕ್ತವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+