ಕೇಂದ್ರ ಮಂತ್ರಿಗಳಾದ ರಾಜ್ಯದ ಸಂಸದರಿಗೆ ಕುಮಾರಸ್ವಾಮಿ ಟ್ವೀಟ್
Recommended Video
ಬೆಂಗಳೂರು, ಮೇ 31: ಕೇಂದ್ರ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯದ ನಾಲ್ವರು ಬಿಜೆಪಿ ಸಂಸದರಿಗೆ ಕುಮಾರಸ್ವಾಮಿ ಅಭಿನಂದನೆ ತಿಳಿಸಿದ್ದಾರೆ.
ನಿರ್ಮಲಾ ಸೀತಾರಾಮನ್, ಸದಾನಂದಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿಯವರಿಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಮೂವರೂ ಕೇಂದ್ರ ಮಂತ್ರಿಗಳಿಗೆ ಶುಭಾಶಯಗಳು ಎಂದಿದ್ದಾರೆ.
Congratulations to @nsitharaman, @DVSBJP, @JoshiPralhad and @AngadiMp on being sworn in as cabinet ministers. All the best to them and looking forward to their cooperation for development work in the state.
— CM of Karnataka (@CMofKarnataka) May 30, 2019
ರಾಜ್ಯದ ಅಭಿವೃದ್ಧಿಗೆ ಮೂವರು ಸಂಸದರು ರಾಜ್ಯ ಸರ್ಕಾರದೊಂದಿಗೆ ಸಹಕಾರ ನೀಡುತ್ತೀರೆಂದು ನಂಬಿದ್ದೇವೆ ಎಂದು ಸಿಎಂ ಹೇಳಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದ ಸದಾನಂದಗೌಡ, ಹುಬ್ಬಳ್ಳಿ-ಧಾರವಾಡದ ಪ್ರಹ್ಲಾದ ಜೋಶಿ, ಬೆಳಗಾವಿಯ ಸುರೇಶ್ ಅಂಗಡಿ ಹಾಗೂ ಕರ್ನಾಟಕದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಕೇಂದ್ರ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕಳೆದ ಬಾರಿ ಆಡಳಿತ ಪಕ್ಷ ಮತ್ತು ರಾಜ್ಯಕ್ಕೆ ಅತ್ಯುತ್ತಮ ಸಂವಹನಕಾರರಾಗಿ ಅನಂತ್‌ಕುಮಾರ್ ಅವರು ಇದ್ದರು ಆದರೆ ಈ ಬಾರಿ ಅವರು ಇಲ್ಲ ಹಾಗಾಗಿ ಇದು ರಾಜ್ಯಕ್ಕೆ ದೊಡ್ಡ ಹಿನ್ನಡೆ ಎನ್ನಲಾಗುತ್ತಿದೆ. ಅನಂತ್‌ಕುಮಾರ್ ಅವರ ಸ್ಥಾನವನ್ನು ಸದಾನಂದಗೌಡ ಅವರು ತುಂಬುತ್ತಾರೆಯೇ ಕಾದು ನೋಡಬೇಕಿದೆ.












Click it and Unblock the Notifications