ಸಿಎಂ ಗ್ರಾಮ ವಾಸ್ತವ್ಯ: ಎರಡನೇ ಹಂತದ ದಿನಾಂಕ ಬದಲು

ಬೆಂಗಳೂರು, ಜೂನ್ 7: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಬಹುನಿರೀಕ್ಷಿತ ಗ್ರಾಮ ವಾಸ್ತವ್ಯದ ಎರಡನೆಯ ಹಂತದ ಭೇಟಿಯ ದಿನಾಂಕಗಳಲ್ಲಿ ಬದಲಾವಣೆ ಮಾಡಲಾಗಿದೆ.

ಆದರೆ, ಗ್ರಾಮ ವಾಸ್ತವ್ಯ ಆರಂಭವಾಗುವ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಎರಡನೆಯ ಹಂತದ ದಿನಾಂಕಗಳನ್ನು ಹಿಂದಕ್ಕೆ ಹಾಕಿಕೊಳ್ಳಲಾಗಿದೆ.

ಪೂರ್ವ ನಿಗದಿಯಂತೆ ಜುಲೈ 5 ಮತ್ತು 6ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಎರಡನೆಯ ಹಂತದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿತ್ತು. ಈ ದಿನಾಂಕಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಜೂನ್ 28 ಮತ್ತು 29ರಂದೇ ಎರಡನೆಯ ಹಂತದ ಗ್ರಾಮ ವಾಸ್ತವ್ಯ ನಡೆಯಲಿದೆ.

CM HD Kumaraswamy 2nd phase grama vastavya prephoned

ಜುಲೈ 5ರಂದು ಅವರು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗ್ರಾಮದಲ್ಲಿ ಮತ್ತು ಜುಲೈ 6ರಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ವಾಸ್ತವ್ಯ ಹೂಡಬೇಕಿತ್ತು. ಈ ಎರಡು ದಿನಗಳ ಭೇಟಿಯನ್ನು ಮೊದಲೇ ಆಯೋಜಿಸಿದ್ದು, ಬಸವಕಲ್ಯಾಣ ಮತ್ತು ಸಿಂಧನೂರು ಗ್ರಾಮಗಳಿಗೆ ಕ್ರಮವಾಗಿ ಜೂನ್ 28 ಮತ್ತು 29ರಂದು ಭೇಟಿ ನೀಡಲಿದ್ದಾರೆ.

ಜೂನ್ 21ರಿಂದ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಆರಂಭವಾಗಲಿದೆ. ಜೂನ್ 21ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನಲ್ಲಿ ಹಾಗೂ ಜೂನ್ 22ರಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+