ವೋಲ್ವೋ ಅಂಬಾರಿ ಬಸ್ ಸೇವೆಗೆ ಸಿಎಂ ಚಾಲನೆ: ಅಂಬಾರಿ ಉತ್ಸವ ಸ್ಲೀಪರ್ ಬಸ್ ಗಳ ವಿಶಿಷ್ಟತೆಗಳೇನು.?
ಅಂಬಾರಿ ಉತ್ಸವ ಸ್ಲೀಪರ್ ಬಸ್ ಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಉತ್ತಮ ವಿಶೇಷತೆಗಳನ್ನ ಒಳಗೊಂಡಿದೆ.
ಬೆಂಗಳೂರು,ಫೆಬ್ರವರಿ21: 20 ಅಂಬಾರಿ ಉತ್ಸವ ಸ್ಲೀಪರ್ ಬಸ್ ಸೇವೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದ ಅವರಣದಲ್ಲಿ ಚಾಲನೆ ನೀಡಿದರು.
ಅಂಬಾರಿ ಉತ್ಸವ-ಸಂಭ್ರಮದ ಪ್ರಯಾಣ ಎಂಬ ಘೋಷಣೆಯೊಂದಿದೆ ಕೆ ಎಸ್ ಆರ್ ಟಿ ಬಿ ಹೊಸ ಬಸ್ ಸೇವೆ ಆರಂಭವಾಗಿದ್ದು, ಕೆಎಸ್‌ಆರ್‌ಟಿಸಿ ನಿರ್ವಹಿಸುವ ಎಲ್ಲಾ ಸ್ಲೀಪರ್ ಕೋಚ್ ಗಳಿಗಿಂತ ಅತ್ಯುತ್ತಮ ಸೌಕರ್ಯವನ್ನ ಈ ಬಸ್ ಗಳು ಹೊಂದಿವೆ. ರಾಜ್ಯದ ಹಲವು ಭಾಗಗಳಲ್ಲಿ ಈ ಬಸ್ ಗಳು ಸಂಚಾರಿಸಲಿದ್ದು, ಹಂತ ಹಂತ ಬಸ್ ಗಳನ್ನ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ಇನ್ನೂ ನೂತನ ವೋಲ್ವೋ 9600s ಮಲ್ಟಿ ಅಕ್ಸಲ್ ಬಸ್ ಗೆ ಚಾಲನೆ ನೀಡಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೀಕ್ಷಣೆ ಮಾಡಿದರು.
ಈ "ಅಂಬಾರಿ ಉತ್ಸವ" ವಾಹನಗಳನ್ನು ಕೆಳಕಂಡ ಮಾರ್ಗಗಳಲ್ಲಿ ಕಾರ್ಯಾಚರಣೆ:
ಬೆಂಗಳೂರು - ಸಿಕಂದ್ರಬಾದ್
ಬೆಂಗಳೂರು - ಹೈದ್ರಾಬಾದ್
ಬೆಂಗಳೂರು - ಎರ್ನಾಕುಲಂ
ಬೆಂಗಳೂರು - ತಿರುವನಂತಪುರಂ
ಬೆಂಗಳೂರು - ತ್ರಿಚೂರು
ಬೆಂಗಳೂರು - ಪಣಜಿ
ಕುಂದಾಪುರ - ಬೆಂಗಳೂರು
ಮಂಗಳೂರು - ಪೂನಾ

ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ ಗಳ ವಿಶಿಷ್ಟತೆಗಳು:
1. 40 ಆಸನಗಳು 2x1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಮಲಗುವ ಮತ್ತು ಕುಳಿತುಕೊಳ್ಳುವ ಸ್ಥಾನದಲ್ಲಿ ಬೆಸ್ಟ್-ಇನ್-ಕ್ಲಾಸ್ ಹೆಡ್ ರೂಮ್ ಜೊತೆಗೆ ಉನ್ನತ ಪ್ರಯಾಣದ ಅನುಭವವನ್ನು ನೀಡುತ್ತದೆ.
2. KSRTC ವೋಲ್ವೋ-9600s ವಾಹನವು ಸುರಕ್ಷಿತ, ಪರಿಸರ ಕಾಳಜಿ ಹಾಗೂ ಗುಣಮಟ್ಟವನ್ನು ಒಳಗೊಂಡ ಬಲಿಷ್ಠ ಸ್ಕ್ಯಾಂಡಿನೇವಿಯನ್ ಸಂಪ್ರದಾಯದ ವಿನ್ಯಾಸದಲ್ಲಿ ರೂಪಗೊಂಡಿರುವ ವಾಹನವಾಗಿದೆ.
3. KSRTC ವೋಲ್ವೋ-9600s ಮಾದರಿಯ ವಾಹನದ ಮುಂಭಾಗವು ಏರೋಡೈನಾಮಿಕ್ ಮೇರುಕೃತಿಯ ಭಾಗವಾಗಿದೆ, ವೇಗದ ಕಾರ್ಯಾಚರಣೆಗಳಲ್ಲಿ ಗಾಳಿಯ ಎಳೆತವನ್ನು ಕಡಿಮೆ ಮಾಡಲು ಪೂರಕವಾಗಿ, ಇಂಧನದ ಉಳಿತಾಯಕ್ಕೆ ಕಾರಣವಾಗುತ್ತದೆ.

4. ಹೊಸದಾಗಿ ವಿನ್ಯಾಸಗೊಳಿಸಿದ ಪ್ಯಾನೊರಮಿಕ್ ವಿಂಡೋಗಳನ್ನು ಹೊಂದಿರುವ KSRTC ವೋಲ್ವೋ-9600s ವಾಹನವು ಪ್ರಯಾಣಿಕರಿಗೆ ವಿಹಂಗಮ ನೋಟದ ವೈಭವವನ್ನು ನೀಡುತ್ತದೆ.
5. ವಾಹನವು ಉತ್ತಮ ಕಾರ್ಯಕ್ಷಮತೆ ಜೊತೆಗೆ ಐಷಾರಾಮಿ ಗುಣಗಳನ್ನು ಹೊಂದಿದ್ದು, ವಾಹನದ ಹೊರಭಾಗದ ಭವ್ಯತೆಗೆ V-ಆಕಾರದ ಹೆಡ್-ಲೈಟ್ಗಳು ವಿಶಿಷ್ಟವಾದ ಸೊಬಗನ್ನು ನೀಡುತ್ತದೆ.
6. ಹೊಸ ಸುಧಾರಿತ PX ಸಸ್ಪೆನ್ಶನ್ ಸ್ಟೀರಿಂಗ್ ಸ್ಥಿರತೆ ಮತ್ತು ನಿರ್ವಹಣೆಯನ್ನು ಹೊಂದಿದ್ದು ಇದು ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತದೆ.

7. ಎಬಿಎಸ್, ಎಂಜಿನ್ ಬ್ರೇಕ್, ಹಿಲ್ ಸ್ಟಾರ್ಟ್ ನೆರವು, ಇಂಟಿಗ್ರೇಟೆಡ್ ಹೈಡ್ರೊಡೈನಾಮಿಕ್ ರಿಟಾರ್ಡರ್ ಮತ್ತು ಎಲೆಕ್ಟ್ರಾನಿಕ್ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ಇವಿಎಸ್ಸಿ) ಸೇರಿದಂತೆ ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ನೊಂದಿಗೆ ವರ್ಧಿತ ಸ್ಥಿರತೆ ಮತ್ತು ನಿಯಂತ್ರಣವನ್ನು ಈ ವಾಹನವು ಹೊಂದಿದೆ.
8. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಸಿಬ್ಬಂದಿ ವರ್ಗದವರ ಕಲ್ಯಾಣಕ್ಕಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಿಗಮವು ಆಂತರಿಕವಾಗಿ ತನ್ನ ಪ್ರಾದೇಶಿಕ ಹಾಗೂ ವಿಭಾಗೀಯ ಕಾರ್ಯಗಾರಗಳಲ್ಲಿಯೇ ಹಳೆಯ 250ಕ್ಕೂ ಹೆಚ್ಚು ವಾಹನಗಳನ್ನು ಆಂತರಿಕ ಸಂಪನ್ಮೂಲಗಳಿಂದಲೇ ನವೀಕರಣಗೊಳಿಸಿ ಕಾರ್ಯಚರಣೆಗೊಳಿಸುತ್ತಿದೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications