ಚಂದನ ವಾಹಿನಿಯಲ್ಲಿ ಶಾಲಾ ಮಕ್ಕಳಿಗೆ ಪಾಠ; ವೇಳಾಪಟ್ಟಿ
ಬೆಂಗಳೂರು, ಜುಲೈ 21 : ಕರ್ನಾಟಕ ಸರ್ಕಾರ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ತರಗತಿಗಳನ್ನು ನಡೆಸಲು ಅನುಮತಿಯನ್ನು ನೀಡಿದೆ. ಜುಲೈನಿಂದ ಡಿಸೆಂಬರ್ ತನಕ ಪಾಠ ಪ್ರಸಾರ ಮಾಡಲಾಗುತ್ತದೆ.
ಕೊರೊನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ ಶಾಲೆಗಳು ಬಾಗಿಲು ಮುಚ್ಚಿವೆ. ಖಾಸಗಿ ಶಾಲೆಗಳು ಆನ್‌ಲೈನ್ ಮೂಲಕ ತರಗತಿ ಆರಂಭಿಸಿವೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿತಿ ಮೂಲಕ ಪಾಠ ಮಾಡಲಾಗುತ್ತದೆ.
ಕರ್ನಾಟಕ ಸರ್ಕಾರ ಈ ಯೋಜನೆಗಾಗಿ 1.60 ಕೋಟಿ ರೂ. ವೆಚ್ಚ ಮಾಡಲು ಅನುಮತಿ ನೀಡಿದೆ. ಹೆಚ್ಚು ವಿದ್ಯಾರ್ಥಿಗಳಿಗೆ ಪಾಠ ತಲುಪಲು ಸಹಾಯಕವಾಗುವಂತೆ ಯೂ ಟ್ಯೂಬ್‌ನಲ್ಲಿಯೂ ಪಾಠಗಳ ವಿಡಿಯೋ ಲಭ್ಯವಾಗುವಂತೆ ಮಾಡಲಾಗುತ್ತಿದೆ.
8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ಪಾಠಗಳನ್ನು ಮಾಡಲು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸೋಮವಾರದಿಂದ ಶುಕ್ರವಾರದ ತನಕ ಚಂದನ ವಾಹಿನಿಯಲ್ಲಿ ಪಾಠ ಪ್ರಸಾರವಾಗಲಿದೆ.

10 ನೇ ತರಗತಿ ವೇಳಾಪಟ್ಟಿ
* ಸೋಮವಾರ 9.30 ರಿಂದ 10 ಗಣಿತ, 10.30 ರಿಂದ 11 ವಿಜ್ಞಾನ, 3 ರಿಂದ 3.30 ಕನ್ನಡ.
* ಮಂಗಳವಾರ 9.30 ರಿಂದ 10 ವಿಜ್ಞಾನ, 10.30 ರಿಂದ 11 ಸಮಾ ವಿಜ್ಞಾನ, 3 ರಿಂದ 3.30 ಗಣಿತ
* ಬುಧವಾರ 9.30 ರಿಂದ 10 ಗಣಿತ, 10.30 ರಿಂದ 11 ಇಂಗ್ಲಿಶ್, 3 ರಿಂದ 3.30 ಹಿಂದಿ
* ಗುರುವಾರ 9.30 ರಿಂದ 10 ಸಮಾಜ ವಿಜ್ಞಾನ, 10.30 ರಿಂದ 11 ಕನ್ನಡ
* ಶುಕ್ರವಾರ 9.30 ರಿಂದ 10 ವಿಜ್ಞಾನ, 3 ರಿಂದ 3.30 ಸಮಾಜ ವಿಜ್ಞಾನ

9ನೇ ತರಗತಿ ಟೈಮ್ ಟೇಬಲ್
* ಸೋಮವಾರ 10 ರಿಂದ 10.30 ಇಂಗ್ಲಿಶ್, 3.30 ರಿಂದ 4 ಗಣಿತ, 5 ರಿಂದ 5.30 ಸಮಾಜ ವಿಜ್ಞಾನ
* ಮಂಗಳವಾರ 10 ರಿಂದ 10.30 ಸಮಾಜ ವಿಜ್ಞಾನ, 5 ರಿಂದ 5.30 ಸಮಾಜ ವಿಜ್ಞಾನ
* ಬುಧವಾರ 10 ರಿಂದ 10.30 ವಿಜ್ಞಾನ, 3.30 ರಿಂದ 4 ಗಣಿತ
* ಗುರುವಾರ 10 ರಿಂದ 10.30 ಹಿಂದಿ, 3.30 ರಿಂದ 4 ವಿಜ್ಞಾನ
* ಶುಕ್ರವಾರ 3. 30 ರಿಂದ 4 ಕನ್ನಡ

8ನೇ ತರಗತಿಗೆ ಪಾಠ
* ಸೋಮವಾರ 11.30 ರಿಂದ 12 ಗಣಿತ, 4 ರಿಂದ 4.30 ವಿಜ್ಞಾನ
* ಮಂಗಳವಾರ 11.30 ರಿಂದ 12 ಕನ್ನಡ, 4 ರಿಂದ 4.30 ಸಮಾಜ ವಿಜ್ಞಾನ
* ಬುಧವಾರ 11.30 ರಿಂದ 12 ಇಂಗ್ಲೀಶ್, 4 ರಿಂದ 4.30 ವಿಜ್ಞಾನ
* ಗುರುವಾರ 11.30 ರಿಂದ 12 ಗಣಿತ
* ಶುಕ್ರವಾರ 11.30 ರಿಂದ 12 ಸಮಾಜ ವಿಜ್ಞಾನ, 4 ರಿಂದ 4.30 ಹಿಂದಿ

ಸರ್ಕಾರದಿಂದ ಹಣ ಪಾವತಿ
8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ಪಾಠ ಮಾಡಲು ಕರ್ನಾಟಕ ಸರ್ಕಾರ 30 ನಿಮಿಷಗಳ ಎಂಟು ಅವಧಿಯ 120 ದಿನದ ಕಾರ್ಯಕ್ರಮ ಪ್ರಸಾರಕ್ಕೆ ಗಂಟೆಗೆ 24,426 ರೂ.ಗಳಂತೆ 1.17 ಕೋಟಿ ರೂ. ಪಾವತಿ ಮಾಡಲಿದೆ.












Click it and Unblock the Notifications