ರಕ್ಷಕರಿಗೇ ಇಲ್ಲ ರಕ್ಷಣೆ: 9 ತಿಂಗಳಿಂದ ವೇತನವಿಲ್ಲದೆ ಮಕ್ಕಳ ಸಹಾಯವಾಣಿ ಸಿಬ್ಬಂದಿ ಪರದಾಟ

ಸಮಾಜದಲ್ಲಿ ದೌರ್ಜನ್ಯ, ಶೋಷಣೆ ಮತ್ತು ನಿರ್ಲಕ್ಷ್ಯಕ್ಕೆ ಒಳಗಾದ ಮಕ್ಕಳ ರಕ್ಷಣೆಗೆ 24 ಗಂಟೆಯೂ ಟೊಂಕ ಕಟ್ಟಿ ನಿಲ್ಲುವವರು 1098 ಮಕ್ಕಳ ಸಹಾಯವಾಣಿ ಸಿಬ್ಬಂದಿ. ಆದರೆ, ಸಂಕಷ್ಟದಲ್ಲಿರುವ ಕಂದಮ್ಮಗಳ ಪಾಲಿಗೆ ಆಶಾಕಿರಣವಾಗಿರುವ ಈ ಸಿಬ್ಬಂದಿಯ ಬದುಕೇ ಈಗ ಕತ್ತಲಲ್ಲಿ ಸಿಲುಕಿದೆ ಎಂದರೆ ತಪ್ಪಾಗಲಾರದೇನೋ ಅಲ್ಲವೇ?.

ಹಗಲಿರುಳು ಎನ್ನದೆ ಸೇವೆ ಸಲ್ಲಿಸುತ್ತಿರುವ ಇವರಿಗೆ ಕಳೆದ 9 ತಿಂಗಳಿಂದ ಬಿಡಿಗಾಸು ವೇತನವೂ ಪಾವತಿಯಾಗಿಲ್ಲ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

Child Helpline 1098 Staff Unpaid for 9 Months Struggle for Job Security amp amp Fair Wages in Karnataka

ದಿನದ 24 ಗಂಟೆಯೂ ಸೇವೆಗೆ ಸಿದ್ಧರಿರಬೇಕಾದ, ಅತ್ಯಂತ ಜವಾಬ್ದಾರಿಯುತ ಹುದ್ದೆಯಲ್ಲಿರುವ ಈ ಸಿಬ್ಬಂದಿಗೆ ಸೂಕ್ತ ವೇತನವೂ ಇಲ್ಲ, ಜೊತೆಗೆ ಉದ್ಯೋಗ ಭದ್ರತೆಯೂ ಇಲ್ಲದಂತಾಗಿದೆ. ಹೀಗಾಗಿ ಬದುಕು ಸಾಗಿಸಲು ದಾರಿ ಕಾಣದೆ ಸಿಬ್ಬಂದಿ ಕಣ್ಣೀರು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೇವಲ 13 ಸಾವಿರ ವೇತನ, 9 ತಿಂಗಳಿಂದ ಅದೂ ಇಲ್ಲ

ಪ್ರಸ್ತುತ ಮಕ್ಕಳ ಸಹಾಯವಾಣಿ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನೀಡುತ್ತಿರುವುದು ತಿಂಗಳಿಗೆ ಕೇವಲ 13,000 ರೂಪಾಯಿಗಳ ವೇತನ. ಆದರೆ, ಈ ಕನಿಷ್ಠ ಮೊತ್ತವೂ ಕಳೆದ ಒಂಬತ್ತು ತಿಂಗಳಿಂದ ಅವರ ಕೈಸೇರಿಲ್ಲ.

ದಿನನಿತ್ಯದ ಅಗತ್ಯಗಳು, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಹಾಗೂ ಆಸ್ಪತ್ರೆ ಖರ್ಚುಗಳನ್ನ ನಿಭಾಯಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸೇವಾ ಮನೋಭಾವದಿಂದ ಕಷ್ಟದಲ್ಲಿರುವ ಮಕ್ಕಳ ನೆರವಿಗೆ ಧಾವಿಸುವ ಈ ಜೀವಗಳಿಗೆ, ತಮ್ಮ ಸ್ವಂತ ಕುಟುಂಬದ ಹೊಟ್ಟೆ ತುಂಬಿಸುವುದೇ ಈಗ ದೊಡ್ಡ ಸವಾಲಾಗಿದೆ. ವೇತನ ವಿಳಂಬದಿಂದಾಗಿ ಸಿಬ್ಬಂದಿ ತೀವ್ರ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

24 ಗಂಟೆ ಕೆಲಸ: ಕಾಡುತ್ತಿದೆ ಉದ್ಯೋಗ ಭದ್ರತೆ ಆತಂಕ

ಮಕ್ಕಳ ರಕ್ಷಣೆ ಎಂಬುದು ಅತ್ಯಂತ ಸೂಕ್ಷ್ಮ ಹಾಗೂ ಜವಾಬ್ದಾರಿಯುತ ಕೆಲಸ. ಇಲ್ಲಿ ಕೆಲಸದ ಅವಧಿಗೆ ಯಾವುದೇ ನಿರ್ದಿಷ್ಟ ಮಿತಿಯಿಲ್ಲ. ತುರ್ತು ಸಂದರ್ಭಗಳು ಎದುರಾದಾಗ, ಮಧ್ಯರಾತ್ರಿಯಾದರೂ ಸ್ಥಳಕ್ಕೆ ಧಾವಿಸಿ ಮಕ್ಕಳನ್ನ ರಕ್ಷಿಸಬೇಕಾದ ಅನಿವಾರ್ಯತೆ ಇರುತ್ತದೆ.

ಇಷ್ಟೆಲ್ಲಾ ಮಾನಸಿಕ ಮತ್ತು ದೈಹಿಕ ಒತ್ತಡಗಳ ನಡುವೆ ಕರ್ತವ್ಯ ನಿರ್ವಹಿಸಿದರೂ, ಇವರಿಗೆ ಯಾವುದೇ ಉದ್ಯೋಗ ಭದ್ರತೆ ಇಲ್ಲ. ವರ್ಷಾನುಗಟ್ಟಲೆ ದುಡಿದರೂ ಸೇವೆ ಖಾಯಂ ಆಗಿಲ್ಲ ಎಂಬ ಕೊರಗು ಇವರನ್ನ ಕಾಡುತ್ತಿದೆ.

ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ

ತಮ್ಮ ಬದುಕಿನ ಈ ಸ್ಥಿತಿಯ ಬಗ್ಗೆ ಅಳಲು ತೋಡಿಕೊಂಡಿರುವ ಮಕ್ಕಳ ಸಹಾಯವಾಣಿ ಸಿಬ್ಬಂದಿ, ಸರ್ಕಾರ ತಕ್ಷಣವೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂಬತ್ತು ತಿಂಗಳಿಂದ ಬಾಕಿ ಉಳಿದಿರುವ ವೇತನವನ್ನ ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಮುಂದಿನ ದಿನಗಳಲ್ಲಿ ವೇತನ ವಿಳಂಬವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದರ ಜೊತೆಗೆ, ಪ್ರಸ್ತುತ ಇರುವ ಅಲ್ಪ ವೇತನದ ಸ್ವರೂಪವನ್ನ ಮರುಪರಿಶೀಲಿಸಿ, ಕೆಲಸದ ಒತ್ತಡ ಹಾಗೂ ಜವಾಬ್ದಾರಿಗೆ ತಕ್ಕಂತೆ ನ್ಯಾಯಯುತ ವೇತನ ನಿಗದಿಪಡಿಸಬೇಕು. ಅರ್ಹತೆ ಮತ್ತು ನಿಯಮಗಳ ಆಧಾರದ ಮೇಲೆ ಸೇವೆಯನ್ನ ಖಾಯಂಗೊಳಿಸಿ, ಉದ್ಯೋಗ ಭದ್ರತೆ ಒದಗಿಸಬೇಕು ಎಂಬುದು ಸಿಬ್ಬಂದಿಯ ಪ್ರಮುಖ ಬೇಡಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+