ಜೆಡಿಎಸ್ ಗೆ ಆತ್ಮಸಾಕ್ಷಿ ಇದೆಯೇ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ 27; ಜೆಡಿಎಸ್ ಗೆ ಗೆಲ್ಲಲು 45 ಮತಗಳ ಅಗತ್ಯವಿದೆ ಅಷ್ಟು ಮತಗಳು ಅವರಿಗಿದೆಯೇ ? ಅವರಿಗೆ ಆತ್ಮಸಾಕ್ಷಿ ಇದೆಯೇ ಎಂದು ಪ್ರಶ್ನಿಸಿ ಅವರ ಮತಗಳೇ ನಮಗೆ ಬರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಯ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸಭಾ ಚುನಾವಣೆಯ ಬಗ್ಗೆ ಮಾತನಾಡಿ ಎಲ್ಲರೂ ಗೆಲ್ಲಬೇಕೆಂದೆ ಸ್ಪರ್ಧಿಸುತ್ತಾರೆ ಎಂದು ಹೇಳಿದರು.

Chief Minister Siddaramaiah questioned whether the JDS has a conscience

ಅಡ್ಡಮತ ವಿಚಾರವಾಗಿ ಕಾನೂನು ತಿದ್ದಿ ಎಫ್.ಐ.ಆರ್. ಹಾಕಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಅವರಿಗೆ ಮತವಿಲ್ಲದಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸಿ , ಶಾಸಕರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಬೆದರಿಕೆ ಹಾಕಿರುವುದಕ್ಕೆ ಎಫ್.ಐ.ಆರ್ ಹಾಕಲಾಗಿದೆ ಎಂದರು. ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕೆ.ಸಿ.ರೆಡ್ಡಿಯವರ 48 ನೇ ಪುಣ್ಯ ತಿಥಿ

ಆಡಳಿತ ಹಾಗೂ ರಾಜ್ಯದ ಬಗ್ಗೆ ಕೆ.ಸಿ ರೆಡ್ಡಿ ಅವರಿಗಿದ್ದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕೆ.ಸಿ.ರೆಡ್ಡಿಯವರ 48 ನೇ ಪುಣ್ಯ ತಿಥಿಯನ್ನು ಇಂದು ಆಚರಿಸಲಾಗಿದೆ. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳು. ರಾಜ್ಯದ ಬೆಳವಣಿಗೆಗೆ ಅಡಿಪಾಯ ಹಾಕಿದವರು ಅವರು. ಸ್ವಾತಂತ್ರ್ಯ ಹೋರಾಟಗಾರರಾಗಿ ತಮ್ಮನ್ನು ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಕರ್ನಾಟಕ ಇಂದು ಆರ್ಥಿಕವಾಗಿ ಸಧೃಢವಾಗಿದ್ದರೆ ಅವರು ಹಾಕಿದ ಬುನಾದಿಯೇ ಕಾರಣ. 1950 ನೇ ಇಸವಿಯಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಮೊದಲ ಚುನಾವಣೆಯಲ್ಲಿ ಕೆ.ಸಿ.ರೆಡ್ಡಿಯವರೇ ಮೊದಲ ಮುಖ್ಯ ಮಂತ್ರಿಯಾದರು. ಅವರನ್ನು ಸ್ಮರಿಸಿ ಗೌರವಿಸುವ ಕೆಲಸವನ್ನು ಸರ್ಕಾರ ಮಾಡಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+