ಅಪ್ಪನ ಹೆಸರು ಹೇಳಿಕೊಂಡು ಕುಮಾರಸ್ವಾಮಿ ಇನ್ನೆಷ್ಟು ರಾಜಕಾರಣ ನಡೆಸುತ್ತಾರೆ?: ಚಲುವರಾಯಸ್ವಾಮಿ
ಮಂಡ್ಯ,ಅಕ್ಟೋಬರ್ 05: ಚುನಾವಣೆ ಬಂದಾಗ ಮಾತ್ರ ಕುಮಾರಸ್ವಾಮಿ ಮಾತನಾಡುತ್ತಾರೆ. ಕುಮಾರಸ್ವಾಮಿ ಅಪ್ಪನ ಹೆಸರು ಹೇಳಿಕೊಂಡು ಇನ್ನೆಷ್ಟು ದಿನ ರಾಜಕಾರಣ ನಡೆಸುತ್ತಾರೆ ಎಂದು ಸಚಿವ ಚಲುವರಾಯಸ್ವಾಮಿ ಕೇಳಿದರು.
ಈ ಕುರಿತು ಮಂಡ್ಯದಲ್ಲಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಹಿಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಕಾವೇರಿ ನೀರಿಗಾಗಿ ಸಾಕಷ್ಟು ಹೋರಾಡಿದ್ದಾರೆ, ಹಾಗಾಗಿ ಕುಮಾರಸ್ವಾಮಿ ಅಪ್ಪನ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಾ ಬಂದಿದ್ದಾರೆ, ಅವರ ವೈಯಕ್ತಿಕ ಐಡೆಂಟಿಟಿ ಏನೂ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

ಕುಮಾರಸ್ವಾಮಿ ಸಾಧನೆ ಏನು ಅಂತ ನಮಗೂ ಗೊತ್ತು. ನಿಮಗೂ ಗೊತ್ತು, ಈ ಜಿಲ್ಲೆಯ ಜನಕ್ಕೂ ಗೊತ್ತು. ಮತಕ್ಕಾಗಿ ಏನು ಬೇಕೋ ಅದನ್ನ ಮಾತನಾಡುತ್ತಾರೆ. ಜಿಲ್ಲೆಗೆ ಏನು ಕೊಡುಗೆ ಕೊಟ್ಟಿಲ್ಲ. ಅವರ ತಂದೆ ಕೊಡುಗೆ ಕೊಟ್ಟಿದ್ದುಆಯ್ತು, ನಮ್ಮ ಜನತೆ ಕೃತಜ್ಞತೆ ಸಲ್ಲಿಸಿದ್ದು ಆಯ್ತು. ದೇವೇಗೌಡರ ಕೊಡುಗೆ ಮೇಲೆ ರಾಜಕಾರಣ ಮಾಡುತ್ತಿದ್ದಾರೆ.
ಕುಮಾರಸ್ವಾಮಿಗೆ ಮಂಡ್ಯದಲ್ಲಿ ಅನುಯಾಯಿಗಳಿರಬಹುದು ಆದರೆ ಜಿಲ್ಲೆಗೆ ಮತ್ತು ಕಾವೇರಿ ಅಚ್ಚುಕಟ್ಟುಗೆ ಅವರ ಕೊಡುಗೆ ಏನೂ ಇಲ್ಲ ಎಂದು ಹೇಳಿದರು. ಆದರೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಕಾವೇರಿ ನೀರಿಗಾಗಿ ಸಾಕಷ್ಟು ಹೋರಾಡಿದ್ದಾರೆ, ಹಾಗಾಗಿ ಕುಮಾರಸ್ವಾಮಿ ಅಪ್ಪನ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಇನ್ನೂ ಸರ್ಕಾರ ಸಂಕ್ರಾಂತಿ ನಂತರ ಇರಲ್ಲ ಅಂತ ಕನಸು ಕಾಣುತ್ತಾ ಇರಲ್ಲಿ ಎಂದು ಕಿಡಿಕಾರಿದರು.












Click it and Unblock the Notifications