ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ಬೈ ಎಲೆಕ್ಷನ್: ಇಲ್ಲಿದೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ!
ಬೆಂಗಳೂರು, ಅಕ್ಟೋಬರ್ 16: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13 ರಂದು ಉಪ ಚುನಾವಣೆ ಘೋಷಣೆಯಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿಯ ಶಿಗ್ಗಾಂವಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿದ್ದು, ಟಿಕೆಟ್‌ಗಾಗಿ ಫೈಪೋಟಿ ಜೋರಾಗಿದೆ.
ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ರಂಗೇರಿದ್ದು, ಟಿಕೆಟ್‌ಗಾಗಿ ಭಾರೀ ಲಾಬಿಗಳು ನಡೆಯುತ್ತಿವೆ. ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರ ಸಾಕಷ್ಟು ಮಹತ್ವದವನ್ನ ಪಡೆದುಕೊಂಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಅಸ್ತಿತ್ವದ ಪ್ರಶ್ನೆಯಾದ್ರೆ, ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯಾಗಿದೆ.

ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆ ಆದ ಬೆನ್ನಲ್ಲೇ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಕಾಂಕ್ಷಿಗಳಿಂದ ಪೈಪೋಟಿ ಜೋರಾಗಿದೆ. ಟಿಕೆಟ್ ಗಾಗಿ ಲಾಬಿ ಶುರುವಾಗಿದ್ದು, ಹಲವು ಆಕಾಂಕ್ಷಿಗಳು ರಾಜ್ಯ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ರೆ, ಇನ್ನೂ ಕೆಲವರು ರಾಷ್ಟ್ರ ಮಟ್ಟದ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ. ಅದರಲ್ಲೂ ಶಿಗ್ಗಾಂವಿಯಲ್ಲಿ ಹಲವು ಆಕಾಂಕ್ಷಿಗಳು ಇದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಎಂಬುವುದು ಕುತೂಹಲಕ್ಕೆ ಕಾರಣವಾಗಿದ್ದು, ಮೂರು ಕ್ಷೇತ್ರಗಳಿಗೆ ಹಲವು ಆಕಾಂಕ್ಷಿಗಳು ಕಾಂಗ್ರೆಸ್‌ನಲ್ಲಿ ಇದ್ದಾರೆ. ಟಿಕೆಟ್‌ಗಾಗಿ ಭಾರೀ ಲಾಬಿಗಳು ನಡೆಯುತ್ತಿದ್ದು, ಅಭ್ಯರ್ಥಿ ಆಯ್ಕೆ ಕಸರತ್ತು ಇನ್ನೂ ಮುಂದುವರಿದಿದೆ. ಹಾಗಾದ್ರೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳು ಯಾರೆಲ್ಲಾ? ಇಲ್ಲಿದೆ ಮಾಹಿತಿ
ಮೂರು ಕ್ಷೇತ್ರಗಳ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು ಯಾರು?
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ
* ಡಿಕೆ ಸುರೇಶ್, ಮಾಜಿ ಸಂಸದ
* ಡಿಕೆ ಶಿವಕುಮಾರ್, ಡಿಸಿಎಂ
* ರಘುನಂದನ್ ರಾಮಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
* ಅಶ್ವಥ್, ಮಾಜಿ ಶಾಸಕ
ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ
* ಯಾಸಿರ್ ಖಾನ್ ಪಠಾಣ್, 2023 ಪರಾಜಿತ ಅಭ್ಯರ್ಥಿ
* ಅಜಂಪೀರ್ ಖಾದ್ರಿ, ಮಾಜಿ ಶಾಸಕ
* ಆನಂದ್ ಗಡ್ಡದೇವರ ಮಠ, ಲೋಕಸಭಾ ಅಭ್ಯರ್ಥಿ
* ಸಿಎಂ ಫೈಜ಼್, ಸಿಎಂ ಇಬ್ರಾಹಿಂ ಪುತ್ರ
* ಸೋಮಣ್ಣ ಬೇವಿನಮರದ, ಮಾಜಿ ಎಂಎಲ್‌ಸಿ
ಸಂಡೂರು ವಿಧಾನಭೆ ಕ್ಷೇತ್ರ
* ಅನ್ನಪೂರ್ಣ ತುಕಾರಾಂ, ತುಕಾರಾಂ ಪತ್ನಿ
* ಸೌಪರ್ಣಿಕ, ತುಕಾರಾಂ ಪುತ್ರಿ
ಚುನಾವಣೆಯ ಪ್ರಮುಖ ದಿನಾಂಕಗಳು
* ಅಕ್ಟೋಬರ್ 18ರಿಂದ ಉಪಚುನಾವಣೆಗೆ ಅಧಿಸೂಚನೆ ಪ್ರಕಟ
* ಅಕ್ಟೋಬರ್ 25ರಂದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆ ದಿನ
* ಅಕ್ಟೋಬರ್ 28ರಂದು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ
* ಅಕ್ಟೋಬರ್ ಅ.30ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ












Click it and Unblock the Notifications