ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಯಾರ ಪಾಲಿಗೆ: ನಿಖಿಲ್‌ ಕುಮಾರಸ್ವಾಮಿ ಹೇಳಿದ್ದೇನು?

ಕೊಪ್ಪಳ, ಸೆಪ್ಟೆಂಬರ್‌ 04: ಚನ್ನಪಟ್ಟಣ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡ್ತೀನಿ ಅಂತ ಎಂದು ಕೂಡ ಬಹಿರಂಗವಾಗಿ ನಾನು ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಅಂತಿಮವಾಗಿ NDA ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತದಲ್ಲಿ ನಿಷ್ಠವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಣ್ಣ ಅವರು ಪ್ರತಿನಿಧಿಸಿದಂತ ಕ್ಷೇತ್ರ, ಅನಿರೀಕ್ಷಿತ ರಾಜಕಾರಣದ ಬೆಳವಣಿಗೆಗಳಿಂದ ಕೇಂದ್ರದ ನಾಯಕರು ದೆಹಲಿಗೆ ಹೋದರು. ನಾನು ನಿರಂತರವಾಗಿ ಕ್ಷೇತ್ರದಲ್ಲಿ ಭೇಟಿಯನ್ನು ಕೊಡುತ್ತಿದ್ದೇನೆ. ಪ್ರತಿ ಪಂಚಾಯಿತಿ ಮಟಕ್ಕೆ ಭೇಟಿ ನೀಡಿ. ಮುಖಂಡರುಗಳ ಅಭಿಪ್ರಾಯವನ್ನು ಸಂಗ್ರಹಣೆ ಮಾಡುತ್ತಿದ್ದೇನೆ. ಇವೆಲ್ಲವೂ ಕೂಡ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ನಾವು ಒಟ್ಟಾಗಿ ಇದ್ದವೇ, ಒಗ್ಗಟ್ಟಾಗಿ, ಒಟ್ಟಾರೆಯಾಗಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ವನ್ನು ದೂರವಿಡುವುದಕ್ಕೆ NDA ಅಭ್ಯರ್ಥಿ ಗೆಲುವಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ ಎಂದರು.

Channapatna Assembly Constituency ticket will be given to loyal workers Said Nikhil Kumaraswamy

ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆಸಿದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಒಂದೂವರೆ ವರ್ಷ ಆಗಿದೆ.5 ಗ್ಯಾರಂಟಿಗಳ ಹೆಸರಲ್ಲಿ ಸರ್ಕಾರ ರಚನೆ ಮಾಡಿದ್ದಾರೆ. 5 ಗ್ಯಾರಂಟಿಗಳನ್ನ ಇದುವರೆಗೂ ಜನಗಳಿಗೆ ಕೊಟ್ಟಿಲ್ಲ.ರಾಜ್ಯಗಳಲ್ಲಿ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯಗಳ ಪರಿಸ್ಥಿತಿ ಏನಾಗಿದೆ.? ಆರ್ಥಿಕ ಪರಿಸ್ಥಿತಿ ಏನಾಗಿದೆ? ಮಾಧ್ಯಮದಲ್ಲಿ ನಾವೇ ನೋಡ್ತಾ ಇದ್ದೇವೆ.ಹಾಗಾಗಿ ಇದು ಸುಮ್ಮನೆ ವೈಯಕ್ತಿಕವಾಗಿ ಮಾತಾಡುವಂತ ವಿಚಾರ ಅಲ್ಲ. ಸಾಕಷ್ಟು ರೈತರ ಸಮಸ್ಯೆ ಗಳನ್ನ ಎದುರಿಸುತ್ತಿದ್ದಾರೆ. ಹಿಂದುಳಿದ ಜನಾಂಗ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿರುವ ಮುಖ್ಯಮಂತ್ರಿಗಳು ಇವೆಲ್ಲದಕ್ಕೂ ಉತ್ತರ ಕೊಡಿ ಎಂದರು.

ಜನತಾದಳ ಅಂದ್ರೆ ಜನತಾ ಪರಿವಾರ ಮಾಜಿ ದೇವೇಗೌಡರು ಮುಖ್ಯಮಂತ್ರಿಗಳಾದಂತ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಶಾಸಕರನ್ನು ಗೆದ್ದಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ ಬಲಿಷ್ಠವಾಗಿದೆ. ಉತ್ತರ ಕರ್ನಾಟಕದಲ್ಲೂ ನಮಗೆ ಕೊಪ್ಪಳ, ರಾಯಚೂರು, ಬೀದರ್, ಬಿಜಾಪುರ, ಬಳ್ಳಾರಿ ಇರಬಹುದು ನಮ್ಮದೇ ಆದ ಶಕ್ತಿ ಇದೇ.ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಣ್ಣ ಅವರು ಕೊಡುಗೆ ಈ ರಾಜ್ಯಕ್ಕೆ ಈ ದೇಶಕ್ಕೆ ಕೊಟ್ಟಿದ್ದಾರೆ. ಈ ಭಾಗದಲ್ಲಿ ನೀರಾವರಿ ಯೋಜನೆ ಜನ ಮನಸ್ಸಿನಲ್ಲಿ ಇದೆ.ಇವತ್ತು ಪಕ್ಷವನ್ನ ತಳಮಟ್ಟದಿಂದ ಬಲಪಡಿಸಬೇಕು ಎಂದರು.

ಕುಮಾರಣ್ಣ ಅವರು ಕೇಂದ್ರ ಸಚಿವರಾದ ಬಳಿಕ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಪ್ರಾರಂಭವಾಗಿದೆ. ಇವೆಲ್ಲವನ್ನೂ ಕೂಡ ಗಮನಿಸಿ ಪಕ್ಷದ ಕಟ್ಟ ಕಡೆಯ ಕಾರ್ಯಕರ್ತರನ್ನ ಗುರುತಿಸುವ ಪ್ರಾಮಾಣಿಕ ಕೆಲಸ ಪಕ್ಷ ಮಾಡುತ್ತೆ ಎಂದರು..ರಾಜ್ಯದ 31 ಜಿಲ್ಲೆಗಳಲ್ಲಿ ಕೂಡ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವಂತ ಪ್ರಾಮಾಣಿಕ ಕೆಲಸ ಮಾಡುತ್ತೇವೆ.

ಇನ್ನು ಕೊಪ್ಪಳ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ನಮಗೆ ರಾಜ್ಯ ಅಂದ ಮೇಲೆ ಎಲ್ಲವೂ ಒಂದೇ, ಸಮಸ್ಯೆಗಳು ಆ ಜಿಲ್ಲೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಇರುವಂತ ಸಮಸ್ಯೆಗಳನ್ನ ಮಾತ್ರ ಉದ್ದೇಶಿಸಿ ಮಾತನಾಡುವಂತದಲ್ಲ, ಸಮಸ್ಯೆಗಳು ಉದ್ಭವವಾದಂತ ಸಂದರ್ಭದಲ್ಲಿ ನಮ್ಮ ನಾಯಕರುಗಳಿಗೆ, ನಮ್ಮ ನಾಯಕರು ತಾಕಿತನ್ನ ಮಾಡಿದ್ದಾರೆ ಯಾವುದೇ ಸಮಸ್ಯೆ ಇರಬಹುದು ಜಿಲ್ಲಾ ಮಟ್ಟದ,ತಾಲೂಕು ಮಟ್ಟದ ಸಮಸ್ಯೆಗಳಿಗೆ ಸ್ಪಂದಿಸುವಂತ ಪ್ರಾಮಾಣಿಕ ಕೆಲಸ ಸದನದ ಒಳಗಡೆ ಸದನದ ಒಳಗಡೆ ನಮ್ಮ ಎಲ್ಲ ಹಿರಿಯ ಮುಖಂಡರುಗಳು ರೈತರ ಪರ ಸದಾ ಕಾಲ ಧ್ವನಿ ಎತ್ತಿದ್ದೇವೆ ಎಂದರು.

ಪಾದಯಾತ್ರೆ ಯಶಸ್ವಿ ಆಗಿಲ್ಲ ಅನ್ನುವ ವಿಚಾರಕ್ಕೆ ಮಾತನಾಡಿದ ಅವರು ಪಾದಯಾತ್ರೆಯಲ್ಲಿ ನಮ್ಮ ಜತೆ ಜನಸಾಗರ ಸೇರಿತ್ತು. ರಾಮನಗರ,ಮಂಡ್ಯ,ಮೈಸೂರು ಒಟ್ಟು 121 ಕಿಲೋಮೀಟರ್ ಪಾದಯಾತ್ರೆಯಿಂದ ಏನು ಮಾಡಿದ್ದೇವೆ ಎಂದು ಮಾಧ್ಯಮದಲ್ಲಿ ನೋಡಿದ್ದೀರಿ.ಈ ಸರ್ಕಾರ ಆಡಳಿತದಲ್ಲಿ ವಿಫಲವಾಗಿದೆ. ಸಹಸ್ತ್ರರು ಸಂಖ್ಯೆನಲ್ಲಿ ರೈತರು, ಹಲವಾರು ಸಂಘಟನೆಗಳು ನಮ್ಮ ಜೊತೆಯಲ್ಲಿ ಬೆಂಬಲವಾಗಿ ನಿಂತಿರುವ ಸಾಕ್ಷಿ ಇದೆ. ಆಗಾಗಿ ಪಾದಯಾತ್ರೆ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಸನ್ಮಾನ್ಯ ದೇವೇಗೌಡ ಸಾಹೇಬರು ಜಾತ್ಯತೀತ ಅನ್ನುವ ನಿಲುವಿನ ಮೇಲೆ ಪಕ್ಷವನ್ನ ಕಟ್ಟಿದ್ದಾರೆ. ದೇವೇಗೌಡ ರು ಮುಸ್ಲಿಂ ಸಮುದಾಯಕ್ಕೆ ರಿಸರ್ವೇಶನ್ ತಂದುಕೊಟ್ಟಂತವರು. ಇತಿಹಾಸ ಯಾರು ಮರೆಮಾಚಿಸಕ್ಕೆ ಆಗೋದಿಲ್ಲ.ನಾವು ಬಿಜೆಪಿ ಜೊತೆ ಕೈ ಜೋಡಿಸಿದ ಮಾತ್ರಕ್ಕೆ ನಮ್ಮ ಸಿದ್ದಂತವನ್ನ ಮಾರಾಟ ಮಾಡಿಕೊಂಡಿಲ್ಲ. ನಾನು ಅಲ್ಪಸಂಖ್ಯಾತರಿಗೂ ಕೂಡ ಎಲ್ಲಾ ಸಮುದಾಯದಗಳಿಗೂ ಕೂಡ ಸಮಾಜದ ಏಳಿಗೆಗೋಸ್ಕರ ಜನತಾದಳ ಪಕ್ಷ ದುಡಿಯುತ್ತೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+