ಚಾಮರಾಜನಗರ ಎಸ್‌ಪಿ ಕುಲದೀಪ್ ಕುಮಾರ್ ಜೈನ್ ಸಂದರ್ಶನ

By: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
Subscribe to Oneindia Kannada

ಚಾಮರಾಜನಗರ, ಜುಲೈ 07 : ವಾರದಲ್ಲಿ ಒಂದು ದಿನ ಕಡ್ಡಾಯ ರಜೆ ಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದ ಪೊಲೀಸರಿಗೆ ಚಾಮರಾಜನಗರ ಎಸ್‌ಪಿ ಕುಲದೀಪ್ ಕುಮಾರ್ ಆರ್. ಜೈನ್ ಮಾದರಿಯಾಗಬೇಕು. ವರ್ಷದಲ್ಲಿ ಒಂದು ರಜೆಯನ್ನೂ ಹಾಕದೇ ಅವರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಮೂಲತಃ ರಾಜಸ್ಥಾನ ಮೂಲದ ಕುಲದೀಪ್ ಕುಮಾರ್ ಆರ್. ಜೈನ್ ಒಂದು ವರ್ಷದಿಂದ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೂರು ಬಾರಿ ಇವರನ್ನು ವರ್ಗಾವಣೆ ಮಾಡುವ ಪ್ರಯತ್ನವೂ ನಡೆದಿತ್ತು. ಜಿಲ್ಲೆಗೆ ಬಂದು 1 ವರ್ಷವೂ ಆಗದಿರುವುದರಿಂದ ವರ್ಗಾವಣೆ ಆದೇಶವನ್ನು ಕೇಂದ್ರಿಯ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿ, ಗೆಲುವು ಸಾಧಿಸಿದ್ದಾರೆ. [ಚಾಮರಾಜನಗರ ಜಿಲ್ಲಾಡಳಿತ ಭವನದ ಕತೆ-ವ್ಯಥೆ]

Kuldeep Kumar

ರಾಜಸ್ಥಾನದ ರಮೇಶ್ ಕುಮಾರ್ ಜೈನ್ ಅವರ ಪುತ್ರ ಕುಲದೀಪ್ ಕುಮಾರ್ ಆರ್. ಜೈನ್. 2011ರ ಆಗಸ್ಟ್ 29ರಂದು ಅವರು ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಮಂಗಳೂರಿನಲ್ಲಿ ತಮ್ಮ ಪ್ರೋಬೆಷನರಿ ಅವಧಿ ಪೂರ್ಣಗೊಳಿಸಿ, ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿದರು. 2015 ಜೂನ್ 15 ರಂದು ಚಾಮರಾಜನಗರ ಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. [ಚಾಮರಾಜನಗರ ಕೋಳಿ ಕಾಳಗಕ್ಕೆ ಬಂದು ಜೈಲು ಸೇರಿದ್ರು]

ಮರೆಯಲಾಗದ ಆ ದಿನ : 2015 ನವೆಂಬರ್ 1ರಂದು ಕರಿಕಲ್ಲು ಮಾಫಿಯಾದವರು ಎಸ್‌ಪಿ ಮತ್ತು ಡಿಸಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದರು. ಚಾಮರಾಜನಗರದ ಗುಂಡ್ಲುಪೇಟೆ ವೃತ್ತದಲ್ಲಿ ಕರಿಕಲ್ಲು ಸಾಗಿಸುತ್ತಿದ್ದ ಲಾರಿ ತಡೆಯಲು ಹೋದಾಗ ಈ ದಾಳಿ ನಡೆದಿತ್ತು. [ಚಾಮರಾಜನಗರ ಡಿಸಿ ಮೇಲೆ ಹಲ್ಲೆ]

ಕುಲದೀಪ್ ಕುಮಾರ್ ಅವರು ಅಂದು ಪಾರಾದರು. ಆದರೆ, ಜಿಲ್ಲಾದಿಕಾರಿ ಎ.ಎಮ್.ಕುಂಜಪ್ಪ ಅವರಿಗೆ ಮಾತ್ರ ಕಲ್ಲೇಟು ಬಿದ್ದಿತ್ತು. ಅವರ ಕಾರು ಜಖಂಗೊಂಡಿತ್ತು. 'ಆ ದಿನವನ್ನು ಮರೆಯಲು ಸಾಧ್ಯವೇ ಇಲ್ಲ' ಎನ್ನುತ್ತಾರೆ ಕುಲದೀಪ್ ಕುಮಾರ್. ಚಾಮರಾಜನಗರದಲ್ಲಿನ ಅವರ ಕೆಲಸದ ಅನುಭವದ ಬಗ್ಗೆ ಒನ್ ಇಂಡಿಯಾ ಜೊತೆ ಅವರು ಮಾತನಾಡಿದ್ದಾರೆ. ಚಿಕ್ಕ ಸಂದರ್ಶನದ ವಿವರಗಳು ಇಲ್ಲಿವೆ......

* ಹೊಂಗನೂರು ಗಲಾಟೆಯ ವಾಸ್ತವತೆ ಬಗ್ಗೆ ನಿಮ್ಮ ಅಭಿಪ್ರಾಯ?
ಹೊಂಗನೂರು ಗ್ರಾಮದಲ್ಲಿ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಘಟನೆ ಆಗಬಾರದಾಗಿತ್ತು. ಪ್ರಕರಣದಲ್ಲಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗಲಾಟೆ ಪ್ರಕರಣದಲ್ಲಿ ಸಾರ್ವಜನಿಕ ಆಸ್ತಿಗಳಿಗೆ ನಷ್ಟ ಮಾಡಿದವರು, ಕರ್ತವ್ಯಕ್ಕೆ ಅಡ್ಡಿ ಮಾಡಿದವರ ವಿರುದ್ಧ 6 ಪ್ರಕರಣ ದಾಖಲಾಗಿದೆ. 60ಕ್ಕೂ ಹೆಚ್ಚು ಜನರು ನ್ಯಾಯಾಂಗ ಬಂಧನದಲ್ಲಿದ್ದಾರೆ.[ಹೊಂಗನೂರು ಉದ್ವಿಗ್ನ]

* ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಗ್ಗೆ ನಿಮ್ಮ ಅನಿಸಿಕೆ?
ಜಿಲ್ಲೆಯಲ್ಲಿ ಜನರು ಬಹುತೇಕರು ಮುಗ್ಧರು, ಸ್ವಲ್ಪ ಕಾನೂನು ನಿಯಮಗಳು ಮೊದಲಿಗಿಂತ ಅಭಿವೃದ್ಧಿಯಾಗುತ್ತಿದೆ.

* ಪೊಲೀಸ್ ವ್ಯವಸ್ಥೆ ಜನಸ್ನೇಹಿ ಆಗಿದೆಯೇ?
ವಿದ್ಯಾವಂತರು ಕೆಲವೆಡೆ ವಾಟ್ಸಾಪ್ ಮೂಲಕ ದೂರು ದಾಖಲಿಸುತ್ತಿದ್ದಾರೆ. ಅವುಗಳ ಬಗ್ಗೆಯೂ ಕ್ರಮ ತೆಗೆದುಕೊಂಡಿದ್ದೇವೆ. ನಮ್ಮ ಕಚೇರಿ ಯಾವಾಗಲೂ ತೆರೆದಿರುತ್ತದೆ. ಮೊದಲು ಠಾಣೆಗಳಿಗೆ ಹೋಗುವ ಬದಲು ಜನರು ನನ್ನ ಬಳಿ ಬರುತ್ತಿದ್ದಾರೆ. ಇದು ಅವರು ನನ್ನ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿ.

* ಅಕ್ರಮ ಕರಿಕಲ್ಲು ಗಣಿಗಾರಿಕೆ ತಡೆಯಲು ಇಲಾಖೆ ಯಶಸ್ವಿಯಾಗಿದೆಯೇ?
ಬಹುಶಃ ನೂರಕ್ಕೆ ನೂರಷ್ಟು ಇಲ್ಲದಿದ್ದರೂ ತೃಪ್ತಿದಾಯಕವಾಗಿಲ್ಲ.

* ನಿಮ್ಮ ಅವಧಿಯಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗಿದಿಯೇ?
ಅಪರಾಧಗಳು ಹೇಳಿ-ಕೇಳಿ ಆಗುವಂತಹದ್ದಲ್ಲ. ಕೆಲವು ಕಡೆ ಸುಳ್ಳು ಪ್ರಕರಣಗಳು ದಾಖಲಾಗುತ್ತದೆ ಪರಿಶೀಲಸಿ ಕ್ರಮ ಕೈಗೊಳ್ಳಬೇಕು. ಕಾನೂನು ಎಲ್ಲರಿಗೂ ಒಂದೇ ನಮ್ಮ ಇಲಾಖೆಯಲ್ಲಿಯೂ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chamarajanagar Superintendent of Police (SP) Kuldeep Kumar R.Jain interview. Kuldeep Kumar took charge as SP on June 15, 2015.
Please Wait while comments are loading...