ಕರ್ನಾಟಕ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ 1200 ಕೋಟಿ ಮಂಜೂರು

ನವದೆಹಲಿ, ಅಕ್ಟೋಬರ್ 4: ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಮುಂಗಡವಾಗಿ ಬಿಹಾರಕ್ಕೆ 400 ಕೋಟಿ ರುಪಾಯಿಯನ್ನು ಹಾಗೂ ಕರ್ನಾಟಕಕ್ಕೆ 1200 ಕೋಟಿ ರುಪಾಯಿಯನ್ನು 'ಆನ್ ಅಕೌಂಟ್ ಆಧಾರದಲ್ಲಿ' ಬಿಡುಗಡೆ ಮಾಡಲು ಕೇಂದ್ರ ಸರ್ಕಾರವು ಶುಕ್ರವಾರ ಒಪ್ಪಿಗೆ ಸೂಚಿಸಿದೆ.

ಅಂದ ಹಾಗೆ, ಕರ್ನಾಟಕ ಹಾಗೂ ಬಿಹಾರಕ್ಕೆ ಮಾತ್ರ ಈ ರೀತಿಯ ವಿಶೇಷ ಆಸ್ಥೆ ವಹಿಸಿ, ಮಧ್ಯಂತರ ಪರಿಹಾರ ಘೋಷಣೆ ಮಾಡಿದ್ದು ಏಕೆ ಎಂಬ ಪ್ರಶ್ನೆಯ ಬೆನ್ನತ್ತಿ ಹೋದರೆ, ಗೊತ್ತಾಗುವುದು ಇಷ್ಟು. ಎರಡೂ ರಾಜ್ಯಗಳ ವಿಪತ್ತು ನಿರ್ವಹಣೆ ನಿಧಿಯಲ್ಲಿ ಹಣ ಇಲ್ಲ. ಇನ್ನು ಈ ನಿಧಿಗೆ ಶೇಕಡಾ ಎಪ್ಪತ್ತೈದರಷ್ಟು (ಸಾಮಾನ್ಯ ಜಿಲ್ಲೆಗಳಿಗೆ ಶೇಕಡಾ ಎಪ್ಪತ್ತೈದು, ಗುಡ್ಡಗಾಡು ರಾಜ್ಯಗಳಿಗೆ ಶೇಕಡಾ ತೊಂಬತ್ತರಷ್ಟು) ಹಣ ನೀಡುವುದು ಕೇಂದ್ರ ಸರ್ಕಾರ.

ಆ ಪಾಲನ್ನು ಮುಂಗಡವಾಗಿ ನೀಡುವಂತೆ ಮಾಡಿದ ಮನವಿಯನ್ನು ಪುರಸ್ಕರಿಸಿ, ಈ ಘೋಷಣೆ ಮಾಡಿರುವುದು ಕಂಡುಬರುತ್ತದೆ.

Narendra Modi

SDRF ಪಾಲಿನ ಎರಡನೇ ಕಂತು 213.75 ಕೋಟಿಯನ್ನು ಬಿಹಾರ ರಾಜ್ಯಕ್ಕೆ ಬಿಡುಗಡೆ ಮಾಡಲು ಸರ್ಕಾರವು ಒಪ್ಪಿಗೆ ಸೂಚಿಸಿದೆ. ಈ ಎರಡು ರಾಜ್ಯಗಳಿಗೆ ನೆರೆ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ ಹಣವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಯಾವಾಗ ತಲುಪಲಿದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಕೇಂದ್ರ ಸರ್ಕಾರದಿಂದ ಸಾವಿರದಿನ್ನೂರು ಕೋಟಿ ಹಣ ಬಿಡುಗಡೆಯೇ ಆಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಇಬ್ಬರೂ ಟ್ವೀಟ್ ಮಾಡಿದ್ದಾರೆ. ಆದರೆ ಈಗಿನ ಘೋಷಣೆಯನ್ನು ಸರಿಯಾಗಿ ಅರ್ಥೈಸಬೇಕು ಅಂದರೆ, ಕೇಂದ್ರ ಸರ್ಕಾರ ಹಣ ಮಂಜೂರು ಮಾಡಿದೆಯೇ ವಿನಾ ಬಿಡುಗಡೆ ಮಾಡಿಲ್ಲ.

ಮಳೆ ಹಾನಿಯಿಂದಾಗಿ ಕರ್ನಾಟಕ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಕೇಂದ್ರ ಸರ್ಕಾರದಿಂದ ಈ ವರೆಗೆ ನಯಾ ಪೈಸೆ ಬಿಡುಗಡೆ ಆಗಿಲ್ಲ. ಅಷ್ಟೇ ಅಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಂಬಂಧಿಸಿದಂತೆ ಸಮಾಧಾನ ಮಾತು ಸಹ ಆಡಿಲ್ಲ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.

ಭಾರೀ ಮಳೆಯಿಂದಾಗಿ ಕರ್ನಾಟಕದಲ್ಲಿ 38,400 ಕೋಟಿ ರುಪಾಯಿ ನಷ್ಟ ಆಗಿರುವುದಾಗಿ ರಾಜ್ಯ ಸರ್ಕಾರ ಅಂದಾಜು ಮಾಡಿತ್ತು. ಶೀಘ್ರವೇ 3,400 ಕೋಟಿ ಬಿಡುಗಡೆ ಮಾಡುವಂತೆ ಕೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+