2 ಕಡೆ ಎಫ್‌ಎಸ್ಎಲ್‌ ಸ್ಥಾಪಿಸಲು 7ಕೋಟಿ ರೂ. ಅನುದಾನ

ಬೆಂಗಳೂರು, ಅಕ್ಟೋಬರ್ 25: ಪೊಲೀಸರು ವಶಪಡಿಸಿಕೊಂಡ ಮಾದಕ ದ್ರವ್ಯದ ಮಾದರಿಗಳ ಪರೀಕ್ಷೆಯನ್ನು ನಡೆಸಲು ಕರ್ನಾಟಕದಲ್ಲಿ ಇನ್ನೂ ಎರಡು 'ವಿಧಿ ವಿಜ್ಞಾನ ಪ್ರಯೋಗಾಲಯ' (ಎಫ್‌ಎಸ್‌ಎಲ್‌) ಸ್ಥಾಪಿಸಲು ಕೇಂದ್ರ ಸರ್ಕಾರ 7ಕೋಟಿ ರೂ. ಅನುದಾನವನ್ನು ರಾಜ್ಯಕ್ಕೆ ನೀಡಿದೆ.

ಮಾದಕ ವಸ್ತು ಕಳ್ಳ ಸಾಗಣೆ ಇಂದು ನೆನ್ನೆಯದಲ್ಲ. ನಿರಂತರವಾಗಿ ಮಾದಕ ವಸ್ತುಗಳನ್ನು ಸಾಗಣೆ ನಡೆಸುವ ಸಾಕಷ್ಟು ಅಪರಾಧಿಗಳು ಪೊಲೀಸರು ಬಂಧಿಸುತ್ತಲೇ ಇರುತ್ತಾರೆ. ಬಂಧಿಸಿ ನಂತರ ವಶಕ್ಕೆ ಪಡೆಯುವ ಮಾದಕ ವಸ್ತುಗಳ ತ್ವರಿತ ಪರೀಕ್ಷೆ ನಡೆಸಲು ಕರ್ನಾಟಕದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಅಗತ್ಯತೆ ಇತ್ತು.

ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕೇಂದ್ರದಿಂದ ಏಳು ಕೋಟಿ ರೂ. ಪಡೆದಿರುವುದು ಸಂತಸದ ಸಂಗತಿ. ಹೊಸದಾಗಿ ಸ್ಥಾಪನೆಗೊಳ್ಳಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಗಳು ಡ್ರಗ್ಸ್ ಇನ್ನಿತರ ಮಾಧಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಗೆ ಸಹಕಾರಿಯಾಗಲಿದೆ. ತ್ವರಿತಗತಿಯಲ್ಲಿ ಮಾದಕ ವಸ್ತುಗಳ ಮಾದರಿ ಪರೀಕ್ಷೆಗಳ ವರದಿ ಲಭ್ಯವಾಗಲಿದೆ. ಒಂದನ್ನು ಪ್ರಯೋಗಾಲಯವನ್ನು ನೆಚ್ಚಿಕೊಳ್ಳುವುದು ತಪ್ಪಲಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.

Central Govt give Rs.7 cr grant to karnataka govt for establishing 2 forensic labs.

ಈಗಾಗಲೇ ಬೆಂಗಳೂರಿನಲ್ಲಿ 'ವಿಧಿ ವಿಜ್ಞಾನ ಪ್ರಯೋಗಾಲಯ' ಇದೆ. ಹುಬ್ಬಳ್ಳಿ , ಬಳ್ಳಾರಿ, ಕಲಬುರಗಿ, ಮೈಸೂರು ಸೇರಿದಂತೆ ಒಟ್ಟು ಆರು ಜಿಲ್ಲೆಗಳಲ್ಲಿ ಎಪ್‌ಎಸ್‌ಎಲ್‌ ಆರಂಭಿಸಲಾಗುತ್ತದೆ ಎಂದು ಈ ಹಿಂದೆ ರಾಜ್ಯ ಸರ್ಕಾರ ಹೇಳಿತ್ತು. ಅದಾದ ಬಳಿಕ ಕಲಬುರಗಿ, ನಂತರ ಬಳ್ಳಾರಿಯಲ್ಲಿ ಸ್ಥಾಪನೆ ಆದವು.

ಅಲ್ಲದೇ ಇತ್ತೀಚೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೆಂಗಳೂರಲ್ಲಿ ಮಾತ್ರವಲ್ಲ ಶೀಘ್ರವೇ ಶಿವಮೊಗ್ಗದಲ್ಲೂ 'ವಿಧಿ ವಿಜ್ಞಾನ ಪ್ರಯೋಗಾಲಯ' (ಎಫ್‌ಎಸ್‌ಎಲ್‌) ಸ್ಥಾಪಿಸಲಾಗುವುದು ಎಂದು ಶಿವಮೊಗ್ಗದ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದರು.

ಅಗತ್ಯದಷ್ಟು 'ವಿಧಿ ವಿಜ್ಞಾನ ಪ್ರಯೋಗಾಲಯ' (ಎಫ್‌ಎಸ್‌ಎಲ್‌) ಸ್ಥಾಪಿಸಿದ್ದೇ ಆದಲ್ಲಿ ಸಮಾಜದಲ್ಲಿ ಅಪರಾಧ ಚಟುವಟಿಕೆಗಳಿಗೆ ತ್ವರಿತ ಗತಿಯಲ್ಲಿ ಬ್ರೇಕ್ ಹಾಕಲು ಸಾಧ್ಯವಾಗುತ್ತದೆ. ಅಲ್ಲದೇ ಇರುವ ಅಲ್ಪ ಸಂಖ್ಯೆಯ ಪ್ರಯೋಗಾಲದ ಮೇಲಿನ ಒತ್ತಡ ತುಸು ತಗ್ಗಲಿದೆ. ಹೀಗಾಗಿಯೇ ಉದ್ದೇಶದಂತೆ ರಾಜ್ಯ ಸರ್ಕಾರ ಕೇಂದ್ರದಿಂದ ಅನುದಾನ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+