Good News: ಕೇಂದ್ರ ಸರ್ಕಾರದಿಂದ ಬೆಂಗಳೂರಿನಲ್ಲಿ 34 ರೂ.ಗೆ ಅಕ್ಕಿ ಮಾರಾಟ ಆರಂಭ
ಬೆಂಗಳೂರು ನವೆಂಬರ್ 1: ತರಕಾರಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಮಧ್ಯಮ ವರ್ಗದ ಜನರಿಗಾಗಿ ಕಡಿಮೆ ಬೆಲೆಯಲ್ಲಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಈ ದೀಪಾವಳಿ ಉಡುಗೊರೆಯಾಗಿ ಕೇಂದ್ರ ಸರ್ಕಾರ ಕೇವಲ 34 ರೂ.ಗೆ ಅಕ್ಕಿ ಮಾರಾಟ ಆರಂಭಿಸಿದೆ. ಇಂದಿನಿಂದಲೇ ಆಹಾರ ಧಾನ್ಯಗಳಾದ ಅಕ್ಕಿ, ಬೇಳೆ, ಕಾಳು ವಿತರಿಸಲು ಆರಂಭವಾಗಿದೆ.
ಇಂದಿನಿಂದಲೇ ಕೇಂದ್ರ ಸರ್ಕಾರ ಬೆಂಗಳೂರಿನಲ್ಲಿ 34 ರೂ.ಗೆ ಅಕ್ಕಿ ಮಾರಾಟ ಆರಂಭ ಮಾಡಿದೆ. ಹಾಗಾದರೆ ಯಾವ ಬೇಳೆಕಾಳುಗಳ ಬೆಲೆ ಹೇಗಿದೆ ಎಂದು ತಿಳಿಯೋಣ. ಅಕ್ಕಿ ಬೆಲೆ 55-60 ರೂಪಾಯಿ, ಗೋಧಿ ಹಿಟ್ಟು 45-50 ರೂಪಾಯಿ, ಕಡಲೆಬೇಳೆ 90-100 ರೂಪಾಯಿ, ಹೆಸರುಬೇಳೆ120-130 ರೂಪಾಯಿ ಮಾರಾಟವಾಗುತ್ತಿದೆ.

ಬೆಲೆ ಏರಿಕೆಯಿಂದ ಮಧ್ಯಮ ವರ್ಗದವರು ಕಷ್ಟ ಅನುಭವಿಸುತ್ತಿರುವುದರ ನಡುವೆ ಸರ್ಕಾರ ಈ ನಿರ್ಧಾರ ಮಾಡಿದೆ. ಅಲ್ಲದೆ ಕೇಂದ್ರ ಗ್ರಾಹಕ ವ್ಯವಹಾರ ಮತ್ತು ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದಿಂದ ಬೆಂಗಳೂರಿನಲ್ಲಿ 34 ರೂಪಾಯಿಗೆ ಅಕ್ಕಿ, 30 ರೂಪಾಯಿಗೆ ಗೋಧಿ ಹಿಟ್ಟು, ಕಡಲೇಬೇಳೆ 70 ರೂಪಾಯಿ, ಹೆಸರುಬೇಳೆ 207 ರೂಪಾಯಿಗೆ ಮಾರಾಟ ಮಾಡುತ್ತಿದೆ. ಇದರಿಂದಾಗಿ ಸಾಮಾನ್ಯ ಜನರಿಗೆ ಹೊರೆ ಕಡಿಮೆಯಾಗಿದೆ.
ಈ ಯೋಜನೆಗೆ ದೆಹಲಿಯ ಕೃಷಿ ಭವನದಲ್ಲಿ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಚಾಲನೆ ನೀಡಿದರು. ಕರ್ನಾಟಕದ ಹಲವೆಡೆ ಚುನಾವಣೆಗೂ ಮುನ್ನ ಭಾರತ್ ಯೋಜನೆ ಚಾಲ್ತಿಯಲ್ಲಿತ್ತು. ಆದರೆ ಚುನಾವಣೆ ಬಳಿಕ ಇದು ಕೆಲ ದಿನ ಸ್ಥಗಿತವಾಗಿತ್ತು.
ಚುನಾವಣೆ ಪ್ರಯುಕ್ತ ಈ ಯೋಜನೆ ತರಲಾಗಿತ್ತು. ಹೀಗಾಗಿ ಚುನಾವಣೆ ಬಳಿಕ ಯೋಜನೆ ಬಂದ್ ಆಗುತ್ತದೆ ಎನ್ನುವ ಊಹಾಪೋಹಗಳಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಈ ಯೋಜನೆ ಬೆಂಗಳೂರಿನಲ್ಲಿ ಮತ್ತೆ ಆರಂಭವಾಗಿದ್ದರಿಂದ ಜನ ಖುಷಿ ವ್ಯಕ್ತಪಡಿಸಿದ್ದಾರೆ.

ಮಳೆಗೆ ಬೆಂಗಳೂರು ತರಕಾರಿ ರೇಟ್ ಗಗನಕ್ಕೆ
ಬೆಂಗಳೂರಲ್ಲಿ ಏಕಾಏಕಿ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ಹಲವು ತರಕಾರಿಗಳ ಬೆಲೆ ಗಗನಮುಖಿಯಾಗಿದೆ. ಅಷ್ಟೇ ಅಲ್ಲ ಸಾಲು ಸಾಲು ಹಬ್ಬಗಳಿದ್ದು, ಈ ಸಂದರ್ಭದಲ್ಲಿ ಧಾರಾಕಾರ ಮಳೆಯಾಗುತ್ತಿರುವುದು ತರಕಾರಿ ಬೆಲೆಯನ್ನು ಗಗನಕ್ಕೇರಿಸಿದೆ.
ರಾಜ್ಯದಲ್ಲಿ ಕಳೆದೆರೆಡು ದಿನಗಳಿಮದ ವಿರಾಮ ಪಡೆದ ಮಳೆ ಈಗ ಮತ್ತೆ ಶುರುವಾಗಿದೆ. ರಾಜ್ಯದಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಇದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಅಲ್ಲದೇ ಬಿಟ್ಟು ಬಿಡದೆ ಮಳೆಯಾಗುತ್ತಿರುವುದರಿಂದ ವ್ಯಾಪಾರ ಕುಸಿದು ತರಕಾರಿ, ಹೂವು, ಹಣ್ಣುಗಳ ಬೆಲೆ ಹೆಚ್ಚಾಗಿದೆ.












Click it and Unblock the Notifications