ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಗೆ ಬೆದರಿಕೆ ಪತ್ರ.! ಮಾಜಿ ಕಾರು ಚಾಲಕನ ಮೇಲೆ ಅನುಮಾನ?

ಬೆಂಗಳೂರು,ಏಪ್ರಿಲ್6:‌ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ರೆಡಿ ಆಗಿರುವ ನಟ ಕಿಚ್ಚ ಸುದೀಪ್‌ ಅವರಿಗೆ ಬೆದರಿಕೆ ಪತ್ರ ಬಂದಿತ್ತು. ಈಗ ಈ ಕೇಸ್ ಸಿಸಿಬಿಗೆ ವರ್ಗಾವಣೆ ಆಗಿದೆ.

ಈಗಾಗಲೇ ತನಿಖೆ ನಡೆಸಿದ ಮಾಹಿತಿಯನ್ನ ಪೊಲೀಸರು ಸಂಗ್ರಹಿಸಿದ್ದು, ಈ ಕೇಸ್‌ ಸಿಬಿಗೆ ವರ್ಗಾವಣೆ ಆಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಪತ್ರಬರೆದ ಕಿಡಿಗೇಡಿಯನ್ನು ಹುಡುಕಾಟಕ್ಕಾಗಿ ಬಲೆ ಬೀಸಿದ್ದಾರೆ.

CCB To Investigate Threat Letters To Actor kiccha sudeep

ಈಗಾಗಲೇ ಎಲ್ಲಾ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಜಕೀಯ ಹಾಗೂ ಸಿನಿಮಾರಂಗ ಎರಡೂ ಆಯಾಮದಲ್ಲೂ ತನಿಖೆ ಬಿಗಿ ಗೊಳಿಸಿದ್ದಾರೆ. ಈ ನಡುವೆ ಸಿನಿಮಾರಂಗದ ಕೆಲ ವಿರೋಧಿಗಳ‌ ಜೊತೆ ಸೇರಿ ವ್ಯಕ್ತಿಯೋರ್ವ ಈ ಕೃತ್ಯ ನಡೆಸಿರಬಹುದು ಎನ್ನುವ ಸಂದೇಹ ವ್ಯಕ್ತವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಬಳಿಯೂ ಮಾಹಿತಿ ಕಲೆ ಹಾಕಲಾಗಿದೆ. ಈ ವೇಳೆ ಸುದೀಪ್ ಮತ್ತವರ ತಂಡ ಕಾರು ಚಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕಾರು ಚಾಲಕನೊಬ್ಬನನ್ನು ಸುದೀಪ್ ಕೆಲಸದಿಂದ ತೆಗೆಡು ಹಾಕಿದ್ದರಿಂದ ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ನಡೆದುಕೊಂದಿರಬಹುದು ಎನ್ನುವ ಅನುಮಾನ ಹೊರ ಬಿದ್ದಿದೆ.

ಹೀಗಾಗಿ ಪ್ರಕರಣದ ಹೆಚ್ಚಿನ ತನಿಖೆ ವಿಚಾರವಾಗಿ ಕೇಸ್ ಸಿಸಿಬಿಗೆ ವರ್ಗಾವಣೆ ಮಾಡಿದ್ದು, ಮಾಜಿ ಕಾರು ಚಾಲಕನಿಗಾಗಿ ಸಿಸಿಬಿ ತೀವ್ರ ಹುಡುಕಾಟ ನಡೆಸಿದ್ದಾರೆ. ಕೇಸ್ ಆದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಕಾರು ಚಾಲಕ ನಾಪತ್ತೆಯಾಗಿನೆ. ಮಾಜಿ ಕಾರು ಚಾಲಕನನ್ನ ಹಿಡಿದರೆ ಯಾರ ಜೊತೆ ಸೇರಿ ಕುತಂತ್ರ ಮಾಡಿದ್ದಾರೆ ಎಂಬುದಕ್ಕೆ ಉತ್ತರ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

CCB To Investigate Threat Letters To Actor kiccha sudeep

ಈಗಾಗಲೇ ಚಿತ್ರರಂಗದವರ ಮೇಲು ಅನುಮಾನ ವ್ಯಕ್ತಪಡಿಸಿರುವ ಕಿಚ್ಚ ಸುದೀಪ್‌ ಹೇಳಿಕೆಯನ್ನ ಪರಿಗಣಿಸಿ ಮತ್ತಷ್ಟು ತನಿಖೆಯನ್ನ ಸಿಸಿಬಿ ನಡೆಸಿದ್ದು, ಪತ್ರ ಬರೆದಿದ್ದು ಯಾರು.? ಆತನ ಬಳಿ ಇರುವ ಸಾಕ್ಷಿಗಳೇನು.? ವಿಡಿಯೋಗಳು ನಿಜಕ್ಕೂ ಇದೆಯಾ , ವೀಡಿಯೋ ಇದ್ದರೆ ಅದನ್ನ ಬ್ಲಾಕ್ ಮೇಲ್ ಗೆ ಬಳಸಲು ಇಚ್ಚಿಸಿದ್ದನಾ..? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸುದೀಪ್ ಗೆ ಅಂಚೆ ಮೂಲಕ ಬಂದ ಎರಡು ಬೆದರಿಕೆ ಪತ್ರ!

ನಟ ಸುದೀಪ್‌ ಅವರಿಗೆ ಅಂಚೆ ಮೂಲಕ ಪತ್ರ ಬೆದರಿಕೆ ಪತ್ರ ಬಂದಿದ್ದು, ಪತ್ರದಲ್ಲಿ ಖಾಸಗಿ ವಿಡಿಯೋ ಕುರಿತು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಇನ್ನು ಈ ಕುರಿತು ನಟ ಸುದೀಪ್‌ ಮಾತನಾಡಿ, ನಮ್ಮ ಮನೆ ಅಡ್ರೆಸ್ ಗೊತ್ತಿದೆ. ಲೆಟರ್ ಹಾಕಿದ್ದಾರೆ ಪೊಸ್ಟ್ ಬಂದಿದೆ, ಆ ವಿಚಾರವನ್ನು ಹೊರ ತೆಗೆಯುತ್ತೇನೆ. ಪೋಸ್ಟ್‌ ಗೆ ಯಾವ ರೀತಿ ಉತ್ತರ ಕೊಡ್ಬೇಕೋ ಕೊಡ್ತೀನಿ. ಇದು ಚಿತ್ರರಂಗದ ಕೆಲವರದ್ದೆ ಕೈವಾಡ
ಅದು ಕೂಡ ನನಗೆ ಗೊತ್ತು. ನಾನು ಯಾವುದಕ್ಕೂ ಭಯ ಪಡಲ್ಲ ಎಂದು ಹೇಳಿದ್ದಾರೆ.

ಏನಿದು ಬೆದರಿಕೆ ಪ್ರಕರಣ?

ನಟ ಕಿಚ್ಚ ಸುದೀಪ್​ಗೆ ಬೆದರಿಕೆ ಪತ್ರ ಬಂದಿದ್ದು ಆತಂಕ ಮೂಡಿಸಿತ್ತು. ಸುದೀಪ್ ಮ್ಯಾನೇಜರ್ ಜಾಕ್ ಮಂಜುಗೆ ಈ ಪತ್ರ ಸಿಕ್ಕಿದೆ. ಈ ಪತ್ರದಲ್ಲಿ ಸುದೀಪ್ ಬಗ್ಗೆ ಕೆಟ್ಟ ಪದಗಳ ಬಳಕೆ ಆಗಿದೆ. ಸುದೀಪ್ ಅವರ ಖಾಸಗಿ ವಿಡಿಯೋ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಲಾಗಿದೆ. 'ನಟನ ಘನತೆಗೆ ಧಕ್ಕೆ ತರಲು ಮಾಡಿರೋ ಸಂಚು' ಎಂದು ಮಂಜು ಅವರು ದೂರಿದ್ದಾರೆ. ಪುಟ್ಟೇನಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 506, ಸೆಕ್ಷನ್ 504 ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಈ ಪತ್ರ ಎಲ್ಲಿಂದ ಬಂತು, ಯಾರು ಕಳುಹಿಸಿದ್ದು ಎನ್ನುವ ತನಿಖೆ ನಡೆಯುತ್ತಿದೆ. ಈ ಪ್ರಕರಣವನ್ನ ಇದೀಗ ಸಿಸಿಬಿಗೆ ವರ್ಗಾವಣೆ ಮಾಡಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+