ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು ಎಲ್ಲವೂ ಹೋಯ್ತು!
ಬೆಂಗಳೂರು, ಸೆಪ್ಟೆಂಬರ್ 27; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪರಿಪೂರ್ಣ ಬಹುಮತ ಪಡೆದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಸರ್ಕಾರ ಮುನ್ನಡೆಸುತ್ತಿದ್ದಾರೆ. ಸರ್ಕಾರ 100 ದಿನಗಳನ್ನು ಪೂರೈಸಿದೆ.
ರಾಜ್ಯದ ಪ್ರತಿಪಕ್ಷ ಬಿಜೆಪಿ ಬುಧವಾರ ಟ್ವೀಟ್ ಮಾಡಿದ್ದು, 'ಕಾಂಗ್ರೆಸ್ ಬಂದಿದೆ ಜನತೆಯ ಬದುಕು ದುಸ್ತರವಾಗಿದೆ' ಎಂದು ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದೆ. ಕಾವೇರಿ ವಿವಾದವನ್ನು ಉಲ್ಲೇಖಿಸಿ, 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು ಎಲ್ಲವೂ ಹೋಯ್ತು..!' ಎಂದು ಹೇಳಿದೆ.

ಬಿಜೆಪಿಯ ಟ್ವೀಟ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು ಎಲ್ಲವೂ ಹೋಯ್ತು..!
* ಕಾಂಗ್ರೆಸ್ ಬಂತು ಕಾವೇರಿ ಹೋಯ್ತು..!
* ಕಾಂಗ್ರೆಸ್ ಬಂತು ಅಭಿವೃದ್ಧಿ ಹೋಯ್ತು..!
Cauvery Dispute: ಕಾವೇರಿ ನೆಪದಲ್ಲಿ ಬಿಜೆಪಿ & ಜೆಡಿಎಸ್ ರಾಜಕೀಯ...
* ಕಾಂಗ್ರೆಸ್ ಬಂತು ಆರ್ಥಿಕತೆ ಹೋಯ್ತು..!
* ಕಾಂಗ್ರೆಸ್ ಬಂತು ಕರ್ನಾಟಕದ ಆಸ್ಮಿತೆ ಹೋಯ್ತು..!
* ಕಾಂಗ್ರೆಸ್ ಬಂತು ಮಹದಾಯಿ ಹೋಯ್ತು..!
* ಕಾಂಗ್ರೆಸ್ ಬಂತು ಭದ್ರಾ ಮೇಲ್ದಂಡೆ ಹೋಯ್ತು..!
* ಕಾಂಗ್ರೆಸ್ ಬಂತು ಅನ್ನಭಾಗ್ಯ ಹೋಯ್ತು..!
* ಕಾಂಗ್ರೆಸ್ ಬಂತು ಕಿಸಾನ್ ಸಮ್ಮಾನ್ ಹೋಯ್ತು..!
* ಕಾಂಗ್ರೆಸ್ ಬಂತು ರೈತ ಮಕ್ಕಳ ವಿದ್ಯಾನಿಧಿ ಹೋಯ್ತು..!
ಕಾಂಗ್ರೆಸ್ ಬಂದಿದೆ ಜನತೆಯ ಬದುಕು ದುಸ್ತರವಾಗಿದೆ..! ಎಂದು ಬಿಜೆಪಿ ಹೇಳಿದೆ.
ಸರಣಿ ಟ್ವೀಟ್‌ಗಳು; ಕರ್ನಾಟಕ ಬಿಜೆಪಿ #ಕಾವೇರಿನಮ್ಮದು, #SaveKaveri, #NadaDrohiCongress ಎಂಬ ಹ್ಯಾಷ್ ಟ್ಯಾಗ್‌ಗಳನ್ನು ಬಳಕೆ ಮಾಡಿಕೊಂಡು ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡುತ್ತಿದೆ.
ಮಂಗಳವಾರ ರಾತ್ರಿ ಟ್ವೀಟ್ ಮಾಡಿದ್ದ ಬಿಜೆಪಿ, 'I.N.D.I. ಮೈತ್ರಿಕೂಟವನ್ನು ಮೆಚ್ಚಿಸಲು ಕಾಂಗ್ರೆಸ್ ಕರ್ನಾಟಕಕ್ಕೆ ದ್ರೋಹ ಬಗೆದಿದೆ. ಸ್ಟಾಲಿನ್ ಸರ್ಕಾರದ ವಾದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಬೇಕಾಗಿದ್ದ ಈ ಅಂಶಗಳನ್ನು ಮರೆತ ಪರಿಣಾಮ ಕನ್ನಡಿಗರಿಗೆ ಅನ್ಯಾಯವಾಗಿದೆ' ಎಂದು ಆರೋಪಿಸಿತ್ತು.
* ತಮಿಳುನಾಡಿನ 1.8 ಲಕ್ಷ ಹೆಕ್ಟೇರ್ ಕುರುವೈ ಬೆಳೆಗೆ 32 ಟಿಎಂಸಿ ನೀರು ಮಾತ್ರ ಒದಗಿಸುವುದು ರಾಜ್ಯದ ಜವಾಬ್ದಾರಿ..!
* ತಮಿಳುನಾಡು ಬೆಳೆಯುತ್ತಿರುವ ಹೆಚ್ಚುವರಿ 7.8 ಲಕ್ಷ ಹೆಕ್ಟೇರ್ ಬೆಳೆಯ ಜವಾಬ್ದಾರಿ ಕರ್ನಾಟಕದ್ದಲ್ಲ ಎಂಬುದನ್ನು ಮನವರಿಕೆ ಮಾಡಲಿಲ್ಲ..!
* ಬರಗಾಲದ ಮುನ್ಸೂಚನೆ ಸಿಗುತ್ತಿದ್ದಂತೆ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿ ಅರ್ಥ ಮಾಡಿಸುವ ಪ್ರಯತ್ನ ಮಾಡಲಿಲ್ಲ.!
* ಮುಂಗಾರು ಕ್ಷೀಣವಾಗಿ ನೀರಿಗೆ ಹಾಹಾಕಾರ ಉಂಟಾಗುತ್ತಿರುವಾಗಲೇ ವಾಸ್ತವ ಸ್ಥಿತಿಯನ್ನೂ ಸುಪ್ರೀಂ ಮುಂದೆ ಇಡಲಿಲ್ಲ..!
* ಕರ್ನಾಟಕದ ಹವಾಮಾನ ಮುನ್ಸೂಚನೆಯೂ ಪೂರಕವಾಗಿಲ್ಲ ಎಂಬುದನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಬೇಕಿತ್ತು..!
* ಈಶಾನ್ಯ ಮಾರುತದ ಮಳೆ ನೀರು ಹಿಡಿದಿಡಲು ತಮಿಳುನಾಡು ಇದುವರೆಗೂ ಯಾವ ವ್ಯವಸ್ಥೆಯನ್ನೂ ಮಾಡಿಕೊಳ್ಳದೆ ಕರ್ನಾಟಕವನ್ನು ದೂಷಿಸುತ್ತಿದೆ ಎಂಬ ವಾಸ್ತವವನ್ನು ಅರ್ಥ ಮಾಡಿಸಬೇಕಿತ್ತು..!
* ಬೆಂಗಳೂರಿನ ಕುಡಿಯುವ ನೀರಿನ ಅಗತ್ಯ ನೀಗಿಸಲು 35 ಟಿಎಂಸಿ ಬೇಕು ಎಂಬುದನ್ನು ತಿಳಿಸಬೇಕಿತ್ತು. ಆದರೆ ಸಿದ್ದರಾಮಯ್ಯ ಅವರ ಸರ್ಕಾರ ಇದ್ಯಾವುದೂ ಮಾಡದೆ ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕುವ ನಾಟಕ ಪ್ರದರ್ಶನ ಮಾಡುತ್ತಿರುವುದು ಕನ್ನಡಿಗರ ಪಾಲಿನ ದೌರ್ಭಾಗ್ಯ..! ಎಂದು ಬಿಜೆಪಿ ಹೇಳಿತ್ತು.
ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ, 'ಸ್ಟಾಲಿನ್ ರಾಜ್ಯಕ್ಕೆ ಕಳ್ಳತನದಿಂದ ಕಾವೇರಿ ನೀರು ಬಿಟ್ಟು, ಭದ್ರೆಯ ನೀರಿಗೆ ಅಂಕುಶ ಹಾಕಿ, ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ದ್ರೋಹ ಬಗೆದಿದೆ. ನಾಡಿಗೆ ಅನ್ನ ನೀಡುವ ಅನ್ನದಾತನ ಬದುಕು ದುಸ್ತರವಾಗುವ ಜೊತೆಗೆ, ಕುಡಿಯುವ ಹನಿ ನೀರಿಗೂ ಸಹ "ಕೈ" ಸರ್ಕಾರದ ತಪ್ಪು ನಿರ್ಧಾರಗಳಿಂದ ತತ್ವಾರ ಆರಂಭವಾಗಿದೆ. ರಾಜ್ಯದೆಲ್ಲೆಡೆ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ರೈತರು ಬೀದಿಗಿಳಿದು, ಬಂದ್ ಮಾಡಿ ಪ್ರತಿಭಟಿಸಿದರೂ, ಭಂಡ ಸರ್ಕಾರ ಮಾತ್ರ ನಿದ್ದೆಯಿಂದ ಮೇಲೇಳುತ್ತಿಲ್ಲ' ಎಂದು ಆರೋಪ ಮಾಡಿದೆ.












Click it and Unblock the Notifications