BPL Card: ನಿಮ್ಮ ಬಿಪಿಎಲ್ ರದ್ದಾಗಿದ್ರೆ ಮತ್ತೆ ವಾಪಾಸ್ ಸಿಗಲಿದೆ; ನೀವು ಮಾಡಬೇಕಾದ ಕೆಲಸ ಇಷ್ಟೆ..
BPL Card: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಕಲಿ ದಾಖಲೆ ನೀಡಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ಸರ್ಕಾರ ರದ್ದು ಮಾಡುತ್ತಾ ಬಂಸಿದೆ. ಅಲ್ಲದೆ ಅಂತಹವರನ್ನು ಎಪಿಎಲ್‌ಗೆ ಸೇರ್ಪಡೆ ಮಾಡುವುದಾಗಿ ಹೇಳಿದೆ. ಇದರ ನಡುವೆ ಮತ್ತೊಂದೆಡೆ ಸರ್ಕಾರವು ಬಡವರ ಬಳಿಯಿದ್ದ ಬಿಪಿಲ್ ಕಾರ್ಡ್‌ಗಳನ್ನು ರದ್ದು ಮಾಡಿದೆ ಎನ್ನುವ ಗಂಭೀರ ಆರೋಪಗಳನ್ನು ಕೇಳಿಬಂದಿವೆ.
ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಿವೆ ಎನ್ನಲಾಗುತ್ತಿದ್ದು, ಇದೇ ಈಗ ತೀವ್ರ ವಿವಾದಕ್ಕೂ ಕಾರಣ ಆಗಿದೆ. ಯಾಕೆಂದರೆ ಬಡವರ ಬಳಿಯಿದ್ದ ಬಿಜೆಪಿಎಲ್ ಕಾರ್ಡ್‌ಗಳನ್ನು ಕಿತ್ತುಕೊಂಡಿದೆ ಎನ್ನುವ ಆರೋಪಗಳನ್ನು ಜೋರಾಗಿ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಒಂದು ವೇಳೆ ಬಡವರ ಕಾರ್ಡ್ ರದ್ದಾಗಿದ್ದರೆ ಅವುಗಳನ್ನು ಮತ್ತೆ ಹಿಂತಿರುಗಿಸುವುದಾಗಿ ಹೇಳಿದೆ.

ಹಾಗೆಯೇ ಒಂದು ವೇಳೆ ನಿಮ್ಮ ಬಿಪಿಎಲ್ ಪಡಿತರ ಚೀಟಿ ರದ್ದಾಗಿದ್ದರೆ, ತಹಶೀಲ್ದಾರರ ಗಮನಕ್ಕೆ ತನ್ನಿ. ಆಗ ಒಂದು ವಾರದಲ್ಲೇ ಸಮಸ್ಯೆ ಬಗೆಹರಿಸಿ, ನಿಮ್ಮ ಬಿಪಿಎಲ್ ಕಾರ್ಡ್ ವಾಪಾಸ್ ಸಿಗಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಒಂದು ವೇಳೆ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಡವರಿಗೆ ತೊಂದರೆಯಾದಲ್ಲಿ ತಹಶೀಲ್ದಾರ್ ಗಮನಕ್ಕೆ ತಂದರೆ ಒಂದು ವಾರದೊಳಗಾಗಿ ಸಮಸ್ಯೆ ಬಗೆಹರಿಸಲಾಗುವುದು. ಅರ್ಹರಿಗೆ ಬಿಪಿಎಲ್ ತಪ್ಪಿ ಹೋಗಬಾರದು. ಆಕಸ್ಮಾತ್ ತಪ್ಪಿ ಹೋಗಿದ್ದರೆ ವಾಪಸ್ ಕೊಡಲಾಗುವುದು. ಹಾಗೆಯೇ ಪಡಿತರ ಚೀಟಿ ಇಲ್ಲವೆಂದು ಆರೋಗ್ಯ ಸೌಲಭ್ಯ ವಿಚಾರದಲ್ಲಿ ಯಾವುದೇ ತೊಂದರೆ… pic.twitter.com/dD7ldo6UMT
— DIPR Karnataka (@KarnatakaVarthe) November 21, 2024
ಒಂದು ವೇಳೆ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಡವರಿಗೆ ತೊಂದರೆ ಆಗಿದ್ದರೆ, ತಹಶೀಲ್ದಾರರ ಗಮನಕ್ಕೆ ತಂದರೆ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಲಾಗುವುದು. ಅರ್ಹರಿಗೆ ಬಿಪಿಎಲ್ ತಪ್ಪಿ ಹೋಗಬಾರದು. ಒಂದು ವಳೆ ತಪ್ಪಿ ಹೋಗಿದ್ದರೆ ಅದನ್ನು ವಾಪಸ್ ಕೊಡಲಾಗುವುದು. ಹಾಗೆಯೇ ಪಡಿತರ ಚೀಟಿ ಇಲ್ಲವೆಂದು ಆರೋಗ್ಯ ಸೌಲಭ್ಯ ವಿಚಾರದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂದು ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಈಗಾಗಲೇ ಮಾಹಿತಿ ನೀಡಿದ್ದಾರೆ.
ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ, ತಕ್ಷಣವೇ ವಾಪಸ್ ನೀಡಬೇಕು. ಬಡ ಕುಟುಂಬಗಳ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ, ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಕೂಡ ತಿಳಿಸಿದ್ದಾರೆ.
ಯಾವೆಲ್ಲಾ ಪ್ರಯೋಜನೆಗಳಿವೆ?
ಪಡಿತರ ಚೀಟಿಯು ಉಚಿತ ಅಥವಾ ಕಡಿಮೆ ವೆಚ್ಚದ ಪಡಿತರವನ್ನು ಪಡೆಯುವುದಕ್ಕೆ ಮಾತ್ರವಲ್ಲ, ಅದರ ಮೂಲಕ ಇತರ ಅನೇಕ ಸೌಲಭ್ಯಗಳನ್ನು ಸಹ ಪಡೆಯಬಹುದಾಗಿದೆ.
* ಅರ್ಹರಿಗೆ ಮಾತ್ರ ವಿವಿಧ ಆಹಾರ ಪದಾರ್ಥಗಳ ಉಚಿತ ವಿತರಣೆ ಮಾಡಲಾಗುತ್ತದೆ.
* ಪಡಿತರ ಚೀಟಿದಾರರು ಸರ್ಕಾರ ನಿಗದಿಪಡಿಸಿದ ಅಗ್ಗದ ದರದಲ್ಲಿ ಆಹಾರ ಪದಾರ್ಥಗಳನ್ನು ಪಡೆಯುತ್ತಾರೆ.
* ಪಡಿತರ ಚೀಟಿಯ ಮೂಲಕ ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಬಹುದು.
* ಪಡಿತರ ಚೀಟಿಯನ್ನು ಗುರುತಿನ ಪುರಾವೆಯಾಗಿ ಬಳಸಬಹುದು.
* ಅನೇಕ ಯೋಜನೆಗಳಲ್ಲಿ ಪಡಿತರ ಚೀಟಿದಾರರು ಸಾಲದ ಮೇಲೆ ಸಬ್ಸಿಡಿಯನ್ನು ಸಹ ಪಡೆಯುತ್ತಾರೆ.
* ಕೆಲವು ರಾಜ್ಯಗಳಲ್ಲಿ ಪಡಿತರ ಚೀಟಿದಾರರು ಆರೋಗ್ಯ ವಿಮೆಯ ಪ್ರಯೋಜನವನ್ನು ಸಹ ಪಡೆಯುತ್ತಾರೆ.
* ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಪಡಿತರ ಚೀಟಿಗಳ ಮೂಲಕವೂ ಪಡೆಯಬಹುದಾಗಿದೆ.
* ಪಡಿತರ ಚೀಟಿದಾರರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಕೆಲವು ಯೋಜನೆಗಳಿವೆ.












Click it and Unblock the Notifications