ಹಲವು ನೀರಾವರಿ ಯೋಜನೆಗಳಿಗೆ ಸಂಪುಟ ಅಸ್ತು

ಬೆಂಗಳೂರು, ಫೆ.22 : ಮುಖ್ಯಮಂತ್ರಿ, ಸಂಪುಟದ ಇತರೆ ಎಲ್ಲ ಸದಸ್ಯರು, ಮುಖ್ಯ ಕಾರ್ಯದರ್ಶಿಯನ್ನು ಒಳಗೊಂಡಂತೆ ಎಲ್ಲ ಹಿರಿಯ ಅಧಿಕಾರಿಗಳನ್ನು ಲೋಕಾಯುಕ್ತ ವ್ಯಾಪ್ತಿಗೆ ಒಳಪಡುವ ನಿರ್ಧಾರ ಮತ್ತು ಹಲವಾರು ನೀರಾವರಿ ಯೋಜನೆಗಳಿಗೂ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ.

ಶುಕ್ರವಾರ ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಲೋಕಾಯುಕ್ತ ಕಾಯ್ದೆಯನ್ನು ಬಲಪಡಿಸುವ ವಿಧೇಯಕವನ್ನು ಸೋಮವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. [ಲೋಕಾಯುಕ್ತ ವ್ಯಾಪ್ತಿಗೆ ಸಿಎಂ]

Siddaramaiah

ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

* ಶಿವಮೊಗ್ಗ ಬಿಜಾಪುರ ಮತ್ತು ತುಮಕೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಿರುವುದರಿಂದ, ನಗರಸಭೆ ಸದಸ್ಯರನ್ನು ಮಹಾನಗರ ಪಾಲಿಕೆ ಸದಸ್ಯರೆಂದು ಪರಿಗಣಿಸುವುದಕ್ಕೆ ಪೌರಾಡಳಿತ ಕಾಯ್ದೆಗೆ ತಿದ್ದುಪಡಿ ತರಲು ಒಪ್ಪಿಗೆ ನೀಡಲಾಗಿದೆ.
* ಹಿಂದುಳಿದವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವುದಕ್ಕೆ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧಿನಿಯಮಕ್ಕೆ ತಿದ್ದುಪಡಿ ತರಲು ಒಪ್ಪಿಗೆ.
* 3.4 ಕೋಟಿ ವೆಚ್ಚದಲ್ಲಿ ಬೆಳಗಾವಿ, ಗುಲ್ಬರ್ಗ, ತುಮಕೂರು ಮತ್ತು ಮೈಸೂರಿನಲ್ಲಿ ಸೂಪರ್ ವೆಟರ್ನರಿ ಆಸ್ಪತ್ರೆ ಮತ್ತು ಬೆಂಗಳೂರಿನಲ್ಲಿ 8 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ವೆಟರ್ನರಿ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿಗೆ
* ಏ.1ರಿಂದ ನಗರ ಯಶಸ್ವಿನಿ ಯೋಜನೆಯನ್ನು ಆರಂಭಿಸುವುದು. ನಗರ ಪ್ರದೇಶ ವ್ಯಾಪ್ತಿಯ ಸಹಕಾರ ಸಂಘಗಳ ಸದಸ್ಯರು ಇದರ ಅನ್ವಯ ರು. 1000 ಪ್ರೀಮಿಯಂ ಕಟ್ಟುವ ಮೂಲಕ ಇದರ ಯೋಜನೆ ಸೌಲಭ್ಯ ಪಡೆಯಲು ಒಪ್ಪಿಗೆ.
* ಗದಗ, ಮಡಿಕೇರಿ, ಗುಲ್ಬರ್ಗ ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಮಾಡಲು ಟೆಂಡರ್ ಕರೆಯಲು ನಿರ್ಧಾರ.

ನೀರಾವರಿ ಯೋಜನೆಗಳು
* ಚಾಮರಾಜನಗರ ಜಿಲ್ಲೆಯ 166 ಹಳ್ಳಿಗಳಿಗೆ ರು. 292.80 ಕೋಟಿ ಹಾಗೂ ಗುಂಡ್ಲುಪೇಟೆಯ 191 ಹಳ್ಳಿಗಳಿಗೆ ನೀರು ಪೂರೈಕೆ ಮಾಡುವುದಕ್ಕೆ 205 ಕೋಟಿ ಮೊತ್ತದ ಪರಿಷ್ಕ್ರತ ಅಂದಾಜು ತಯಾರಿಸುವುದಕ್ಕೆ ಒಪ್ಪಿಗೆ.
* 2,488.97 ಕೋಟಿಯ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಯೋಜನಾ ವರದಿ ತಯಾರಿಸಲು ಒಪ್ಪಿಗೆ. [ಎತ್ತಿನಹೊಳೆ ಯೋಜನೆಗೆ ಸಂಪುಟ ಒಪ್ಪಿಗೆ]
* 92.82 ಕೋಟಿ ಮೊತ್ತದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೊಂದಿ ಆಣೆಕಟ್ಟೆ ಬಲದಂಡೆ ಮತ್ತು ಎಡದಂಡೆ ನಾಲೆ ಆಧುನೀಕರಣಕ್ಕೆ ಒಪ್ಪಿಗೆ.
* ಹೇಮಾವತಿ ನದಿಯ ತುಮಕೂರು ಶಾಖಾ ನಾಲೆಯಿಂದ ರಾಮನಗರ ಜಿಲ್ಲೆ ಮಾಗಡಿ ತಾಲೂಕು ಹಾಗೂ ತುಮಕೂರು ಜಿಲ್ಲೆಯ ಹುತ್ತರಿದುರ್ಗ ಹೋಬಳಿಯ 83 ಕೆರೆಗಳಿಗೆ ಕುಡಿಯುವ ನೀರು ಒದಗಿಸುವ ರು. 277.50 ಕೋಟಿ ಮೊತ್ತದ ಕಾಮಗಾರಿಗೆ ಸಮ್ಮತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+