ಶಾಸಕರು ರಾಜೀನಾಮೆ ಕೊಟ್ಟರೆ ಕ್ಷಣಮಾತ್ರದಲ್ಲೇ ಅಂಗೀಕಾರ: ಡಿ ಕೆ ಶಿವಕುಮಾರ್‌ ವಾರ್ನಿಂಗ್

ಬೆಂಗಳೂರು: ನೂತನ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಸಚಿವ ಸ್ಥಾನ ಸಿಗದೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಾಗೂ ರಾಜೀನಾಮೆ ನೀಡುವ ಬಗ್ಗೆ ಹೇಳಿಕೆ ನೀಡುತ್ತಿರುವ ಶಾಸಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ರಾಜೀನಾಮೆ ಕೊಡುವವರನ್ನು ಯಾರೂ ತಡೆಯೋಕೆ ಆಗುವುದಿಲ್ಲ. ರಾಜೀನಾಮೆ ‌ನೀಡಿದ ಕೆಲವೇ ಕ್ಷಣಗಳಲ್ಲಿ ಅಂಗೀಕರಿಸುತ್ತೇನೆ. ಇದೆಲ್ಲ ರಾಜಕೀಯದಲ್ಲಿ ನಡೆಯೊದೇ. ಈ ಹಿಂದೆ ನಾನು, ಪರಮೇಶ್ವರ್ ಮಂತ್ರಿ ಸ್ಥಾನ ಸಿಗದಿದ್ದಾಗ ತಾಳ್ಮೆಯಿಂದ ಇರಲಿಲ್ಲವೇ? ರಾಜಕೀಯ ಭವಿಷ್ಯ ಬೇಕು ಎಂದರೆ ಪಕ್ಷ ಮುಖ್ಯ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

Cabinet Expansion Fallout

ಕೆಲವು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನನಗೆ ಹಾಗೂ ಪರಮೇಶ್ವರ್ ಅವರಿಗೆ ಧರಂಸಿಂಗ್, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವ ಸ್ಥಾನ ತಪ್ಪಿಸಿದರು. ಆಗ ನಾನೂ ರಾಜಿನಾಮೆ ಕೊಡಬಹುದಿತ್ತಲ್ಲವೇ? ವೀರೇಂದ್ರ ಪಾಟೀಲ್ ಕಾಲದಲ್ಲಿ ಬಂಗಾರಪ್ಪ ಅವರಿಗೇ ಮಂತ್ರಿಸ್ಥಾನ ನೀಡಿರಲಿಲ್ಲ. ನಂತರ ಬಂಗಾರಪ್ಪ ಅವರು, ಧರಂಸಿಂಗ್ ಅವರು ಮುಖ್ಯಮಂತ್ರಿಗಳಾಗಲಿಲ್ಲವೇ? ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸ್ಥಾನ ನೀಡಿರಲಿಲ್ಲ‌‌ ಎಂದು ಹೇಳಿದರು.

ಇಂತಹ ಸಂದರ್ಭದಲ್ಲಿ ತಾಳ್ಮೆಯಿಂದ ಇರಬೇಕು.‌ ಎಲ್ಲದಕ್ಕಿಂತ ಪಕ್ಷ ಮುಖ್ಯ. ಎಲ್ಲಾ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಸೇರಿದಂತೆ ಇತರೇ ಹುದ್ದೆಗಳಿಗೆ ರಾಜಿನಾಮೆ ನೀಡಿ ಎಂದು ಸೂಚಿಸುತ್ತೇನೆ. ಎಲ್ಲರಿಗೂ ಮುಂಚಿತವಾಗಿ ಎರಡುವರೆ ವರ್ಷ ಎಂದು ಸೂಚನೆ ನೀಡಿದ್ದೆವು. ಶಾಸಕರು, ಮಂತ್ರಿಗಳಿಗೂ ಇದನ್ನು ತಿಳಿಸಿದ್ದೆವು. ಮೊದಲು ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುವುದು. ನಂತರ ಶಾಸಕರನ್ನು ಕರೆದು ಚರ್ಚಿಸಲಾಗುವುದು. ಹೊಸವಿಚಾರ ಇದ್ದರೇ ನಾನೇ ಮಾಧ್ಯಮಗಳನ್ನು ಕರೆದು ಮಾತನಾಡುತ್ತೇನೆ" ಎಂದರು.

ಬರ ಅಧ್ಯಯನ ನಡೆಸಲು ಸಚಿವರಿಗೆ ಸೂಚನೆ

ಎಲ್ಲ ನೂತನ ಸಚಿವರಿಗೆ ಕೂಡಲೇ ತಮಗೆ ಜವಾಬ್ದಾರಿ ನೀಡಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿಯ ಬಗ್ಗೆ ಅವಲೋಕಿಸ ಬೇಕು ಎಂದು ಹೇಳಿದ್ದೇನೆ. ಜೊತೆಗೆ ಸ್ಥಳ ವೀಕ್ಷಣೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+