ಉಪ ಚುನಾವಣೆ : ಸಿದ್ದರಾಮಯ್ಯ, ಶ್ರೀರಾಮುಲು ನಡುವೆ ಟ್ವಿಟರ್ ವಾರ್!
ಬೆಂಗಳೂರು, ಅಕ್ಟೋಬರ್ 23 : ಐದು ಕ್ಷೇತ್ರಗಳ ಉಪ ಚುನಾವಣಾ ಕಣ ರಂಗೇರಿದೆ. ಪ್ರಚಾರದ ಭರಾಟೆ ಹೆಚ್ಚಾಗಿದ್ದು, ನಾಯಕರ ನಡುವೆ ಮಾತಿನ ಸಮರ ನಡೆಯುತ್ತಿದೆ. ಸಿದ್ದರಾಮಯ್ಯ ಮತ್ತು ಬಿ.ಶ್ರೀರಾಮುಲು ಅವರ ನಡುವೆ ಟ್ವಿಟರ್ ವಾರ್ ಆರಂಭವಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿ ಲೋಕಸಭಾ ಉಪ ಚುನಾವಣೆಗೆ ಸೋಮವಾರ ಪ್ರಚಾರ ನಡೆಸಿದರು. ಬಿ.ಶ್ರೀರಾಮುಲು ಅವರ ತವರು ನೆಲದಲ್ಲಿಯೇ ನಿಂತು ಅವರ ವಿರುದ್ಧ ವಾಗ್ದಾಳಿ ನಡೆಸಿದರು, ಹಲವು ಪ್ರಶ್ನೆಗಳನ್ನು ಕೇಳಿದ್ದರು.
ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಈಗ ಶ್ರೀರಾಮುಲು ಅವರು ಅದಕ್ಕೆಲ್ಲಾ ಉತ್ತರಗಳನ್ನು ನೀಡಿದ್ದಾರೆ.
ಸಿದ್ದರಾಮಯ್ಯ ಮತ್ತು ಬಿ.ಶ್ರೀರಾಮುಲು ಅವರ ಟ್ವಿಟರ್ ವಾರ್ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಇನ್ನೂ ಒಂದು ವಾರಗಳ ಕಾಲ ಚುನಾವಣಾ ಪ್ರಚಾರ ನಡೆಯಲಿದೆ, ಶ್ರೀರಾಮುಲು ಉತ್ತರಕ್ಕೆ ಸಿದ್ದರಾಮಯ್ಯ ಪ್ರತ್ಯುತ್ತರ ನೀಡಲಿದ್ದಾರೆಯೇ? ಕಾದು ನೋಡಬೇಕು....
|
371 ಜೆ ಜಟಾಪಟಿ
ಶ್ರೀರಾಮುಲುಗೆ 371 ಜೆ ಅಂದರೆ ಏನು ಅಂತಲೇ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಇದಕ್ಕೆ ಶ್ರೀರಾಮುಲು ಅವರು ತಿರುಗೇಟು ಕೊಟ್ಟಿದ್ದಾರೆ.

ಲೋಕಸಭೆ, ವಿಧಾಸನಸಭೆಯಲ್ಲಿ ಮಾತನಾಡಿಲ್ಲ
ಲೋಕಸಭೆ ಅಥವಾ ವಿಧಾನಸಭೆಯಲ್ಲಿ ಒಂದು ದಿನವೂ ಶ್ರೀರಾಮುಲು ಅವರು ಮಾತನಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ಹೇಳಿಕೆಗೆ ಶ್ರೀರಾಮುಲು ಅವರು ತಿರುಗೇಟು ನೀಡಿದ್ದಾರೆ. ನಾನು ಮಾತನಾಡುವಾಗ ಸಿದ್ದರಾಮಯ್ಯ ನಿದ್ದೆ ಮಾಡುತ್ತಿದ್ದರು ಎಂದು ಟಾಂಗ್ ನೀಡಿದ್ದಾರೆ.
|
ರಾಹುಲ್ ಗಾಂಧಿ ಎಳೆದು ತಂದ ಶ್ರೀರಾಮುಲು
ಲೋಕಸಭೆ ನಾನು ಮಾತನಾಡಿದ್ದೇನೆ ಎಂದು ಹೇಳಿರುವ ಶ್ರೀರಾಮುಲು ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಈ ಚರ್ಚೆಗೆ ಎಳೆದು ತಂದಿದ್ದಾರೆ.
|
ಸಿದ್ದರಾಮಯ್ಯ ಟ್ವಿಟ್
ಸಿದ್ದರಾಮಯ್ಯ ಅವರು ವಿ.ಎಸ್.ಉಗ್ರಪ್ಪ ಅವರು ಬಳ್ಳಾರಿಯವರು ಅಲ್ಲ ಎನ್ನುವುದಾದರೆ ಬಾದಾಮಿಯಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಶ್ರೀರಾಮುಲು ಅವರು ಬಾದಾಮಿಯಲ್ಲಿಯೇ ಜನಿಸಿದವರಾ ಎಂದು ಪ್ರಶ್ನೆ ಮಾಡಿದ್ದಾರೆ.
|
ಲೋಕಸಭೆಯಲ್ಲಿ ಒತ್ತಾಯ ಮಾಡಿಲ್ಲ
ರೈತರ ಸಾಲ ಮನ್ನಾ ಮಾಡಿ ಎಂದು ಶ್ರೀರಾಮುಲು ಒಂದು ದಿನವೂ ಲೋಕಸಭೆಯಲ್ಲಿ ಒತ್ತಾಯ ಮಾಡಿಲ್ಲ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.











Click it and Unblock the Notifications