ಉಪ ಚುನಾವಣೆ: ಮೂಲ ಬಿಜೆಪಿಗರ ಅತೃಪ್ತಿ ಶಮನಕ್ಕೆ ತಂಡ ರಚನೆ
ಬೆಂಗಳೂರು, ಸೆಪ್ಟೆಂಬರ್ 25: ಉಪ ಚುನಾವಣೆ ಸನ್ನಿಹಿತವಾಗುತ್ತಿದ್ದು, ಎಲ್ಲಾ ಪಕ್ಷಗಳಂತೆಯೇ ಬಿಜೆಪಿಯೂ ಕೂಡ ಟಿಕೆಟ್ ಹಂಚಿಕೆ ಮಾಡುತ್ತಿದೆ.
ಆದರೆ ಈ ಟಿಕೆಟ್ ಹಂಚಿಕೆಯಿಂದ ಮೂಲ ಬಿಜೆಪಿಗರು ಅಸಮಾಧಾನ ಪಟ್ಟುಕೊಳ್ಳುವ ಸಾಧ್ಯತೆ ಇದ್ದು ಈ ಅತೃಪ್ತಿ ಶಮನಕ್ಕಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಂಡ ರಚನೆ ಮಾಡಿದ್ದಾರೆ.
ಬಿಜೆಪಿ ಅಸ್ತಿತ್ವಕ್ಕೆ ಬರಲು ಅನರ್ಹಗೊಂಡಿರುವ ಶಾಸಕರ ಪಾತ್ರ ಮಹತ್ವವಾಗಿದೆ. ಕಾರಣ ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ. ಆದರೆ ಇದು ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲಿನ ಕ್ಷೇತ್ರಗಳಿಗೆ ಮಾತ್ರ ತಂಡ ರಚನೆ ಮಾಡಲಾಗಿದೆ. ಪ್ರಮುಖ ಸಚಿವರು ಮತ್ತು ಸಂಸದರಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ.

ಮಹಾಲಕ್ಷ್ಮೀ ಲೇಔಟ್ ಜವಾಬ್ದಾರಿ ಯಾರಿಗೆ?
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಜವಾಬ್ದಾರಿಯನ್ನು ಉಪಮುಖ್ಯಮಂತ್ರಿ ಡಾ. ಸಿ.ಎನ್, ಅಶ್ವತ್ಥ ನಾರಾಯಣ್ ಹಾಗೂ ಸುರೇಶ್ ಕುಮಾರ್‌ಗೆ ನೀಡಲಾಗಿದೆ. ಹೊಸಕೋಟೆ ಮತ್ತು ಯಶವಂತಪುರ ಕ್ಷೇತ್ರದ ಹೊಣೆಯನ್ನು ಆರ್ ಅಶೋಕ್ ಅರಿಗೆ ನೀಡಲಾಗಿದೆ. ಶಿವಾಜಿನಗರ ಕ್ಷೇತ್ರವನ್ನು ತೇಜಸ್ವಿ ಸೂರ್ಯ ಹಾಗೂ ಪಿಸಿ ಮೋಹನ್‌ಗೆ ವಹಿಸಲಾಗಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಹೊಣೆಗಾರಿಕೆ ಶಾಸಕ ಎಸ್.ಆರ್. ವಿಶ್ವನಾಥ್ ಸಂಸದ ಪಿಸಿ ಮೋಹನ್ ಹಾಗೂ ಕೆಆರ್ ಪುರ ಜವಾಬ್ದಾರಿಯನ್ನು ಸಂಸದ ಪಿಸಿ ಮೋಹನ್‌ಗೆ ನೀಡಲಾಗಿದೆ.

ಬಂಡಾಯ ಗುಣ ನನ್ನದಲ್ಲ ಎಂದ ಜಗ್ಗೇಶ್
ನಾನು ಇರುವ ಪಕ್ಷವನ್ನು ಶಿಸ್ತಿನಿಂದ ಹಿಂಬಾಲಿಸುತ್ತಿರುವ , ಪಕ್ಷ ನನಗೆ ನೆರಳು ಕೊಡುವ ಮರದಂತೆ . ನಾನು ಮರದ ಕೆಳಗೆ ಕೂರುವೆ ವಿನಃ ರೆಂಬೆ ಕಡಿಯುವ ಕಾರ್ಯ ಮಾಡುವುದಿಲ್ಲ ಎಂದು ಬಿಜೆಪಿ ಮುಖಂಡ ಜಗ್ಗೇಶ್ ಹೇಳಿದ್ದಾರೆ.

ಆನಂದ್ ಸಿಂಗ್ ವಿರುದ್ಧ ಆಕ್ರೋಶದ ಕಿಡಿ
ಉಪ ಚುನಾವಣೆಯಲ್ಲಿ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅನರ್ಹ ಶಾಸಕ ಆನಂದ್ ಸಿಂಗ್‌ಗೆ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಪಕ್ಷದ ಸ್ಥಳೀಯರು ಹಾಗೂ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಸಂಘಟನೆ ಸಂಬಂಧ ಹೊಸಪೇಟೆಯಲ್ಲಿ ಮಂಗಳವಾರ ಸ್ಥಳೀಯ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಭೆ ಹಮ್ಮಿಕೊಂಡಿದ್ದರು.

ರಾಜು ಕಾಗೆ ಬೆಂಬಲಿಗರ ಸಭೆ
ಕಾಗವಾಡ ಕ್ಷೇತ್ರದ ಉಪ ಚುನಾವನೆಯಲ್ಲಿ ಮಾಜಿ ಶಾಸಕ ರಾಜು ಕಾಗೆ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಅವರ ಬೆಂಬಲಿಗರು ನಡೆಸಿದ ಸಭೆಯಲ್ಲಿ ಆಗ್ರಹಿಸಲಾಗಿದೆ. ಟಿಕೆಟ್ ಸಿಗದಿದ್ದರೆ ರಾಜು ಕಾಗೆಯವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದು ಹೇಳಿದ್ದಾರೆ.












Click it and Unblock the Notifications