HD Kumaraswamy: 'ಯಾವ ಮಂತ್ರಿ ಮಗನೂ ಬಸ್‌ನಲ್ಲಿ ಓಡಾಡಲ್ಲ'- ಬಸ್ ಟಿಕೆಟ್ ದರ ಏರಿಕೆಗೆ ಹೆಚ್‌ಡಿಕೆ ಗರಂ
ಮೈಸೂರು ಜನವರಿ 5: ಬಸ್ ಟಿಕೆಟ್ ದರ ಏರಿಕೆಯಿಂದ ಸಾಮಾನ್ಯ ಜನರ ಜೀವನದ ಮೇಲೆ ಹೊರೆಯಾಗಲಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಯಾವ ಮಂತ್ರಿ, ಶಾಸಕರ ಮಕ್ಕಳು ಕೂಡ ಬಸ್‌ನಲ್ಲಿ ಓಡಾಡುವುದಿಲ್ಲ. ಬಸ್‌ನಲ್ಲಿ ಓಡಾಡುವವರು ಜನಸಾಮಾನ್ಯರು. ಅವರಿಗೆ ಇದರಿಂದ ತೊಂದರೆಯಾಗಲಿದೆ ಎಂದು ಕುಮಾರಸ್ವಾಮಿ ಗರಂ ಆದರು.
ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ ಅವರು, 'ಸರ್ಕಾರ ಗ್ಯಾರಂಟಿಗಳನ್ನು ನಿಲ್ಲಿಸಲು ನೆಪ ಹುಡುಕುತ್ತಿದೆ. ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿಗಳನ್ನು ನಿಲ್ಲಿಸಬೇಡಿ. ಯಾಕೆಂದರೆ ಸಾಕಷ್ಟು ಜನರಿಗೆ ಇದರಿಂದ ಅನುಕೂಲ ಹೆಚ್ಚಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅವರಿಂದಲೇ ಕಿತ್ತು ಅವರಿಗೆ ಕೊಡುವ ಕೆಲಸ ಮಾಡಬಾರದು.

ಹೀಗೆ ಮಾಡಿ ಮಾಡಿ ಮಾಧ್ಯಮ ವರ್ಗದ ಜನರ ಜೊತೆಗೆ ಸರ್ಕಾರ ಆಟ ಆಡುತ್ತಿದೆ. ಅತ್ತೆದನ್ನ ಅಳಿಯ ದಾಮ ಮಾಡಿದ ಅನ್ನೋ ಮಾತಿನಂತೆ ಅವರಿಂದ ಕಿತ್ತು ಅವರಿಗೆ ಕೊಡೊಕೆ ಇವರೇ ಆಗಬೇಕಾ? ಬಸ್fನಲ್ಲಿ ಓಡಾಡುವವರು ಮಂತ್ರಿ ಮಕ್ಕಳಲ್ಲ. ಸಾಮಾನ್ಯರು. ಅವರಿಗೆ ಹತ್ತು ರೂಪಾಯಿ ಹೆಚ್ಚಾದರೂ ಅದು ಅವರಿಗೆ ಹೊರೆಯಾಗಲಿದೆ ಎಂದು ಆಕ್ರೋಶಗೊಂಡರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒಪ್ಪಿಕೊಳ್ಳುವಂತೆ ಕಾಂಗ್ರೆಸ್ ಅವಧಿಯಲ್ಲಿ 60% ಲಂಚ ತಲುಪಿದೆ. ಮನೆ ಹಂಚಿಕೆಯಲ್ಲೂ ಲಂಚ ಪಡೆಯಲಾಗಿದೆ. ಮೊದಲು ಪಿಡಿಒ ಲಂಚ ಪಡೆಯುತ್ತಿದ್ದ. ಈಗ ವಿಧಾನಸೌದಲ್ಲಿ ಸಚಿವರೇ ಲಂಚ ಪಡೆಯುತ್ತೊದ್ದಾರೆ. ಸತ್ಯಮೇವಾ ಜಯತೇ ಎನ್ನುವ ಸಿದ್ದರಾಂಯ್ಯ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರಾ? ಅವರ ಆತ್ಮಕ್ಕೆ ಅವರು ಉತ್ತರ ಕೊಟ್ಟುಕೊಳ್ಳಲಿ ಎಂದು ಹೆಚ್‌ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಹಣ ಲೂಟಿ ಮಾಡುವುದಕ್ಕೆ ಒಂದು ಇತಿಮಿತಿ ಇರಬೇಕು. ಇದನ್ನು ನೋಡಿದರೆ ಹಿಂದಿನ ಬಿಜೆಪಿಯ ಸರ್ಕಾರ ಚೆನ್ನಾಗಿತ್ತು ಎಂದು ಕಾಂಗ್ರೆಸ್ ಪರ ಗುತ್ತಿಗೆದಾರರು ಹೇಳುತ್ತಿದ್ದಾರೆ. ಇದಕ್ಕೆಲ್ಲಾ ಸಿದ್ದರಾಮಯ್ಯ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ವಾಗ್ದಾಳಿ ಮಾಡಿದರು. ಇಂತಹ ಆರೋಪಗಳನ್ನು ಜನರೇ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಸ್ ಪ್ರಯಾಣ ದರ ಎಷ್ಟು ಏರಿಕೆ?
ಕರ್ನಾಟಕದ ಎಲ್ಲಾ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಏರಿಕೆ ಮಾಡಲು ಕಾಂಗ್ರೆಸ್ ಸರ್ಕಾರ ತೀರ್ಮಾನ ಮಾಡಿದೆ. ಅದರಂತೆ ಜನವರಿ 4ರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬಂದಿದೆ. ಪ್ರಸ್ತುತ ಟಿಕೆ ದರಕ್ಕಿಂತ ಅಂದಾಜು 10 ರಿಂದ 20 ರೂಪಾಯಿಗಳಷ್ಟು ಹೆಚ್ಚು ದರವನ್ನು ಪ್ರಯಾಣಿಕರು ಕೊಡಬೇಕಾಗುತ್ತದೆ. ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ.
ಆಟೋ ಪ್ರಯಾಣ ಬೆಲೆ ಹೆಚ್ಚಳಕ್ಕೆ ಒತ್ತಡ
ಬಸ್ ಟಿಕೆಟ್ ದರ ಹೆಚ್ಚಳವಾದ ಬಳಿಕ ಆಟೋ ಪ್ರಯಾಣ ದರ ಕೂಡ ಏರಿಕೆ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಆಟೋರಿಕ್ಷಾ ಪ್ರಯಾಣ ದರ ಏರಿಕೆ ಮಾಡುವಂತೆ ಬೆಂಗಲೂರು ನಗರ ಜಿಲ್ಲಾಧಿಕಾರಿಗಳಿಗೆ ಕೆಲ ಆಟೋ ಚಾಲಕ ಸಂಘಟನೆಗಳು ಮನವಿ ಮಾಡಿವೆ. ಪ್ರಸ್ತುತ ಒಂದು ಕಿಲೋಮೀಟರ್‌ಗೆ ಐದು ರೂಪಾಯಿ ಇದೆ. ಎರಡು ಕಿಲೋಮೀಟರ್‌ಗೆ ಹತ್ತು ರೂಪಾಯಿ ಏರಿಕೆ ಮಾಡುವಂತೆ ಸಂಘಟನೆಗಳು ಮನವಿ ಮಾಡಿವೆ. ಸದ್ಯ ಆಟೋ ಪ್ರಯಾಣ ದರ ಮಿನಿಮ್ ಚಾರ್ಜ್ 30ರೂಪಾಯಿ ಇದ್ದು ಇದೀಗ 40 ರೂಪಾಯಿಗೆ ದರ ಏರಿಕೆ ಮಾಡುವಂತೆ ಮನವಿ ಮಾಡಲಾಗಿದೆ.












Click it and Unblock the Notifications