Live

BS Yediyurappa Birthday Celebrations Live : ಯಡಿಯೂರಪ್ಪಗೆ ಶುಭಾಶಯ ಹೇಳಲು ಬಂದ ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ 27 : ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಫೆಬ್ರವರಿ 27ರ ಗುರುವಾರ 78ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಹುಟ್ಟು ಹಬ್ಬದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಯಡಿಯೂರಪ್ಪಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮ ಆರಂಭವಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

Yediyurappa Facilitation Program Live Updates In Kannada

ಅಭಿನಂದನಾ ಸಮಾರಂಭದಲ್ಲಿ 'ಧಣಿವರಿಯದ ಧೀಮಂತ' ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ. ಕೇಂದ್ರ ಸಚಿವರ ರಾಜನಾಥ್ ಸಿಂಗ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಯಡಿಯೂರಪ್ಪ ಸಂಪುಟದ ವಿವಿಧ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ.

78ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಯಡಿಯೂರಪ್ಪಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಹುಟ್ಟು ಹಬ್ಬದ ದಿನ ಯಡಿಯೂರಪ್ಪ 'ಧವಳಗಿರಿ'ಯಿಂದ 'ಕಾವೇರಿ' ನಿವಾಸಕ್ಕೆ ವಾಸ್ತವ್ಯ ಬದಲಿಸಿದರು.

Feb 27, 2020, 8:19 pm IST

ಯಡಿಯೂರಪ್ಪಗೆ ಸನ್ಮಾನ ಮಾಡಿದ ರಾಜನಾಥ್ ಸಿಂಗ್
Feb 27, 2020, 7:17 pm IST

"ನನ್ನ ಸಿದ್ದಾಂತ ಬೇರೆ ಯಡಿಯೂರಪ್ಪ ಸಿದ್ದಾಂತ ಬೇರೆಯಾಗಿದೆ. ಆದರೆ, ಅದು ಕೇವಲ ರಾಜಕಾರಣಕ್ಕೆ ಸೀಮಿತ ನಮ್ಮ ನಮ್ಮ ಸಿದ್ದಾಂತವನ್ನು ಜನರ ಮುಂದಿಡುತ್ತೇವೆ. ಜನರು ಅಂತಿಮ ತೀರ್ಮಾನ ಮಾಡುತ್ತಾರೆ. ಇದರಿಂದ ವೈಯಕ್ತಿಕ ಸಂಬಂಧಕ್ಕೆ ಯಾವುದೇ ಸಮಸ್ಯೆ ಆಗಬಾರದು" ಎಂದು ಸಿದ್ದರಾಮಯ್ಯ ಹೇಳಿದರು.
Feb 27, 2020, 7:11 pm IST

ಬಿ. ಎಸ್. ಯಡಿಯೂರಪ್ಪ ದಕ್ಷಿಣ ಭಾರತ ಮಾತ್ರವಲ್ಲ ಇಡೀ ದೇಶದಲ್ಲಿ ಛಾಪು ಮೂಡಿಸಿದ್ದಾರೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದರು.
Feb 27, 2020, 6:38 pm IST

ಅಭಿನಂದನಾ ಸಮಾರಂಭದಲ್ಲಿ ಯಡಿಯೂರಪ್ಪ, ಸಿದ್ದರಾಮಯ್ಯ
Feb 27, 2020, 6:04 pm IST

ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
Feb 27, 2020, 5:57 pm IST

ಯಡಿಯೂರಪ್ಪಗೆ ಹಸಿರು ಶಾಲು ಹೊದಿಸಿ, ಬೆಳ್ಳಿಯ ನೇಗಿಲು ನೀಡಿ ಸನ್ಮಾನ ಮಾಡಲಾಯಿತು.
Feb 27, 2020, 5:55 pm IST

ಸಿದ್ದರಾಮಯ್ಯ ಆಗಮಿಸಿದ ವಿಡಿಯೋ

Oneindia Kannada on Twitter

ಸಿಎಂ ಯಡಿಯೂರಪ್ಪ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ @BSYBJP | @siddaramaiah https://t.co/aDYzABiml3

Feb 27, 2020, 5:41 pm IST

ಮಾಜಿ ರಾಜ್ಯಪಾಲ ಎಸ್. ಎಂ. ಕೃಷ್ಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕಾರ್ಯಕ್ರಮಕ್ಕೆ ಆಗಮಿಸಿದರು.
Feb 27, 2020, 5:40 pm IST

ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿಗೂ ಅಭಿನಂದನಾ ಸಮಾರಂಭಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ, ಪೂರ್ವ ನಿಗದಿತ ಕಾರ್ಯಕ್ರಮ ಇರುವುದದಿಂದ ಸಮಾರಂಭಕ್ಕೆ ಬರುವುದಿಲ್ಲ ಎಂದು ಅವರು ಗುರುವಾರ ಬೆಳಗ್ಗೆ ಸ್ಪಷ್ಟಪಡಿಸಿದ್ದರು. ಯಡಿಯೂರಪ್ಪಗೆ ಕರೆ ಮಾಡಿ ಶುಭಾಶಯ ಸಲ್ಲಿಸಿದ್ದರು.
Feb 27, 2020, 5:39 pm IST

ಅಭಿನಂದನಾ ಸಮಾರಂಭಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್, ಬಿ. ಎಲ್. ಸಂತೋಷ್, ಕೇಂದ್ರ ಸಚಿವರಾದ ಡಿ. ವಿ. ಸದಾನಂದ ಗೌಡ ಆಗಮಿಸಿದ್ದಾರೆ.
Feb 27, 2020, 5:38 pm IST

ಅರಮನೆ ಮೈದಾನಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಹೂಗುಚ್ಛ ನೀಡಿ ಯಡಿಯೂರಪ್ಪಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
Feb 27, 2020, 5:37 pm IST

ಗುರುವಾರ ಬೆಳಗ್ಗೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, "ಪ್ರೀತಿಯ ಯಡಿಯೂರಪ್ಪ ಅವರಿಗೆ 77ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ರಾಜಕೀಯ ಹೋರಾಟವನ್ನೇ ಬದುಕಿನ ಮಾರ್ಗವನ್ನಾಗಿ ಮಾಡಿಕೊಂಡು ಯಶಸ್ಸನ್ನು ಸಾಧಿಸಿದ ನಿಮಗೆ, ಇನ್ನಷ್ಟು ಕಾಲ ಪಕ್ಷಕ್ಕೆ ಮಾರ್ಗದರ್ಶನ ನೀಡುವ ಅವಕಾಶ ಒದಗಿ ಬರಲಿ, ಜೊತೆಗೆ ಆಯುರಾರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಆಶಿಸುವೆ" ಎಂದು ಹಾರೈಸಿದ್ದರು.
Feb 27, 2020, 5:35 pm IST

ಅಭಿನಂದನಾ ಸಮಾರಂಭಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿದರು. 'ಕಾಫಿ ಟೇಬಲ್' ಎಂಬ ಪುಸ್ತಕವನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+