ಕಾಂಗ್ರೆಸ್ ನಾಯಕರು ಹುಚ್ಚರು; ಇವರ ಆರೋಪದಲ್ಲಿ ಯಾವುದೇ ಹುರುಳಿಲ್ಲ; ಯಡಿಯೂರಪ್ಪ ಕಿಡಿ
ಕಾಂಗ್ರೆಸ್ ನಾಯಕರು ಹುಚ್ಚರು, ತಲೆ ತಿರುಕರು ಹೀಗೆ ಮಾತಾಡೋದು. ಅಧಿಕಾರದ ಭ್ರಮೆಯಿಂದ ನಾವು ಅಧಿಕಾರಕ್ಕೆ ಬಂದೆ ಬಿಟ್ಟಿದ್ದೇವೆಂದು ಹೀಗೆ ಹುಚ್ಚುಚ್ಚಾಗಿ ಮಾತಾಡ್ತಿದ್ದಾರೆ. ಇವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದರು.
ಬೆಂಗಳೂರು,ಫೆಬ್ರವರಿ15: ಪಕ್ಷ ನಮ್ಮ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‍ನವರು ತಿರುಕನ ಕನಸು ಕಾಣುತ್ತಿದ್ದಾರೆ. ನಾಯಕತ್ವ ಇಲ್ಲದೆ ಪರದಾಡುವ ಕಾಂಗ್ರೆಸ್ಸಿಗೆ ಭವಿಷ್ಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್ ಯಡಿಯೂರಪ್ಪ ಅವರು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ಈ ಕುರಿತು ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಹುಚ್ಚರು, ತಲೆ ತಿರುಕರು ಹೀಗೆ ಮಾತಾಡೋದು. ತಲೆ ಸರಿ ಇದ್ದವರು ಯಾರು ಕೂಡ ಈ ರೀತಿ ಮಾತಾಡಲ್ಲ
ಅಧಿಕಾರದ ಭ್ರಮೆಯಿಂದ ನಾವು ಅಧಿಕಾರಕ್ಕೆ ಬಂದೆ ಬಿಟ್ಟಿದ್ದೇವೆಂದು ಹೀಗೆ ಹುಚ್ಚುಚ್ಚಾಗಿ ಮಾತಾಡ್ತಿದ್ದಾರೆ. ಇವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದನ್ನು ಸದನದಲ್ಲಿ ಅವ್ರು ಮಾತಾಡಲಿ, ಅದಕ್ಕೆ ನಾವು ತಕ್ಕ ಉತ್ತರವನ್ನು ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕರ ಟೆಂಡರ್ ಗೋಲ್ಮಾಲ್ ಆರೋಪಕ್ಕೆ ಬಿ ಎಸ್ ಯಡಿಯೂರಪ್ಪ ತಿರುಗೇಟು ನೀಡಿದರು.
ನಾನು ಅಧಿವೇಶನದಲ್ಲೇ ಇರೋದಿಲ್ಲ ಅಂತಾರೆ ಸಿದ್ದರಾಮಯ್ಯನ ನವರು. ಒಬ್ಬ ವಿರೋಧ ಪಕ್ಷದ ನಾಯಕನಾಗಿ ಈ ರೀತಿಯ ಹೇಳೋದು ಅವರಿಗೆ ಗೌರವ ತರುತ್ತದೆಯಾ.? ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವರು ಆ ರೀತಿಯ ನಡೆದುಕೊಳ್ಳಬಹುದಾ..? ಅವರಿಗೆ ಚುನಾವಣೆಯೇ ಮುಖ್ಯವಾಯ್ತಾ.? ಎಂದು ಪ್ರಶ್ನಿಸಿದ್ದಾರೆ.

ಈ ರೀತಿಯ ಅನೇಕ ಆರೋಪ ಗಳ ಮೂಲಕ ಹುಚ್ಚುಚ್ಚಾಗಿ ಆಡೋದು ಬಹಳ ಜಾಸ್ತಿ ಯಾಗಿದೆ. ಆದರೆ ಶಿವಕುಮಾರ್ ತಮ್ಮ ಜವಾಬ್ದಾರಿ ಅರಿತು ಮಾತಾಡಬೇಕಿತ್ತು.ಆದರೆ, ಅವರು ಈ ಮಟ್ಟಕ್ಕೆ ಇಳಿದಿರೋದು ನನಗೆ ತುಂಬಾ ನೋವು ತಂದಿದೆ. ಇನಾದರೂ ಅವರು ಜವಾಬ್ದಾರಿ ಯುತವಾಗಿ ಮಾತಾಡಲಿ ಎಂದು ತಿರುಗೇಟು ನೀಡಿದರು.
ನಾವು ಏನು ಕೆಲಸಗಳನ್ನು ಮಾಡಿದ್ದೇವೆ ಅಂತ ಸಿಎಂ ಈಗ ಹೇಳಿದ್ದಾರೆ. ನಮ್ಮ ಕೆಲಸವನ್ನು ಜನರಿಗೆ ತಿಳಿಸುವ ಜವಾಬ್ದಾರಿ ನಿಮ್ಮದು, ಆ ಕೆಲಸವನ್ನು ನೀವುಗಳು ಮಾಡಿದ್ರೆ ಮಾತ್ರ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮತ್ತೆ ನಾವು ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಗೆ ಆದರ್ಶ ಮೋದಿ, ಅವರು ದೇಶ ವಿದೇಶ ಸುತ್ತಿ ಅದರ ನಡುವೆ ಒಳ್ಳೆಯ ಅಡಳಿತ ನೀಡಿದ್ದಾರೆ. ಇದು ಚುನಾವಣಾ ಪರ್ವ ಕಾಲ ನಮ್ಮಗೆ ದೊಡ್ಡ ಕಾರ್ಯಕರ್ತರ ಪಡೆ ಇದೆ. ಇಲ್ಲಿ ಇರುವ ಕಾರ್ಯಕರ್ತರಿಗೆ ಎಲ್ಲಾ ಗೊತ್ತಿದೆ. ಕಳದೆ ಎಂಟು ವರ್ಷಗಳಿಂದ ಮೋದಿ ಅವರು ಯಾವುದೇ ಸ್ವಜನ ಪಕ್ಷಪಾತ ಇಲ್ಲದೇ ಅಡಳಿತ ಕೊಟ್ಟಿದ್ದಾರೆ ಎಂದರು.

ಮೋದಿಯಂತಹ ನಾಯಕತ್ವ ನಮಗೆ ಇದೆ. ವಿಪಕ್ಷದವರು ಯಾರೋ ಯಂಕ, ನಾಣಿ, ಸೀನ ಅಂತಾ ನಾಯಕತ್ವ ಕೊಡಲು ಸಾಧ್ಯವಿಲ್ಲ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಮೋದಿ ನಮ್ಮ ನಿಜವಾದ ಆಸ್ತಿ. ಮತದಾರರನ್ನು ಮನವೊಲಿಸುವ ಜವಾಬ್ದಾರಿ ನಿಮ್ಮ ಮೇಲೆ ಇದೆ, ಫಲಾನುಭವಿಗಳನ್ನು ಗುರುತಿಸುವ ಕೆಲಸ ಆಗಬೇಕು. ಅದು ಆದರೆ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯ ಎಂದು ತಿಳಿಸಿದರು.
ಪಕ್ಷದ ಅಭ್ಯರ್ಥಿಗಳನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ, ಕಾಂಗ್ರೆಸ್ ನವರೇ ಮೋದಿ ಮುಂದೆ ರಾಹುಲ್ ಗಾಂಧಿ ಕರೆತಂದು ನೀವು ಮತ ಕೇಳುತ್ತೀರಾ? ಕಾಂಗ್ರೆಸ್ ನವರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications