ವಿನಯ್ ಗುರೂಜಿ ಜೊತೆ 3 ಗಂಟೆಗಳ ಕಾಲ ಯಡಿಯೂರಪ್ಪ ಚರ್ಚೆ!
Recommended Video

ಚಿಕ್ಕಮಗಳೂರು, ಆಗಸ್ಟ್ 30 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗೌರಿ ಗೆದ್ದೆಯ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿದರು. ಸುಮಾರು 3 ಗಂಟೆಗಳ ಕಾಲ ವಿನಯ್ ಗುರೂಜಿ ಜೊತೆ ಅವರು ಚರ್ಚೆ ನಡೆಸಿದರು.
ಗುರುವಾರ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರ ಜೊತೆ ಯಡಿಯೂರಪ್ಪ ಗೌರಿ ಗದ್ದೆಗೆ ಭೇಟಿ ನೀಡಿದರು. ವಿನಯ್ ಗುರೂಜಿ ಭೇಟಿಯಾದರು.
ಬೆಳಗ್ಗೆ 10.30ಕ್ಕೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಅವರು ಮಧ್ಯಾಹ್ನ 12.30ರ ತನಕ ಮಾತುಕತೆ ನಡೆಸಿದರು. ಯಡಿಯೂರಪ್ಪ, ವಿನಯ್ ಗುರೂಜಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವಾಗ ವಿನಯ್ ಗುರೂಜಿ ಅವರು ಎಚ್.ಡಿ.ದೇವೇಗೌಡ ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿದ್ದರು. ವಿನಯ್ ಗುರೂಜಿ ಪಾದಪೂಜೆಯನ್ನು ದೇವೇಗೌಡರು ಮಾಡಿದ್ದರು.
29 ವರ್ಷದ ವಿನಯ್ ಗುರೂಜಿಗೆ ಘಟಾನುಘಟಿ ರಾಜಕಾರಣಿಗಳು ಭಕ್ತರಾಗಿದ್ದಾರೆ. ಎಚ್.ಡಿ.ದೇವೇಗೌಡ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳು, ಸಿನಿಮಾ ನಟರು ಗುರೂಜಿಯ ಭಕ್ತರಾಗಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಾರೆ. ಜೆಡಿಎಸ್ ಪಕ್ಷಕ್ಕೆ 40ಕ್ಕಿಂತ ಹೆಚ್ಚಿನ ಸ್ಥಾನಗಳು ಬರುತ್ತವೆ ಎಂದು ವಿನಯ್ ಗುರೂಜಿ ಅವರು ಟಿ.ಎ.ಶರವಣ ಅವರಿಗೆ ಹೇಳಿದ್ದರಂತೆ. ಅದಕ್ಕಾಗಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವಾಗ ಅವರನ್ನು ಮನೆಗೆ ಕರೆಸಿ ಪಾದಪೂಜೆ ಮಾಡಲಾಗಿತ್ತು.












Click it and Unblock the Notifications