ಬಿಪಿಎಲ್ : ಆದಾಯ ಪ್ರಮಾಣ ಪತ್ರ ಸಲ್ಲಿಕೆ ನಿಯಮದಲ್ಲಿ ಸಡಿಲಿಕೆ
ಬೆಂಗಳೂರು, ಆಗಸ್ಟ್ 4: ಇನ್ನುಮುಂದೆ ಬಿಪಿಎಲ್ ಪಡಿತರ ಚೀಟಿಗಾಗಿ ಪರದಾಡಬೇಕಿಲ್ಲ, ಆನ್‌ಲೈನ್ ಮೂಲಕವೇ ಪಡಿತರ ಚೀಟಿಗೆ ಅರ್ಜಿ ಹಾಕಬಹುದಾಗಿದೆ. ಅಷ್ಟೇ ಅಲ್ಲ ಅರ್ಜಿ ಹಾಕಲು ಕುಟುಂಬ ಸದಸ್ಯರೆಲ್ಲರ ಆದಾಯ ಪ್ರಮಾಣ ಪತ್ರದ ಅಗತ್ಯವೂ ಇರುವುದಿಲ್ಲ.
ಹೊಸದಾಗಿ ಆನ್‌ಲೈನ್‌ನಲ್ಲಿ ಪಡಿತರ ಚೀಟಿಗಳ ಅರ್ಜಿ ಸಲ್ಲಿಕೆಗೆ ರೂಪುಗೊಂಡಿದ್ದ ಸಾಫ್ಟ್‌ವೇರ್‌ನಲ್ಲಿ ಕೆಲವು ದೋಷಗಳು ಕಂಡುಬಂದಿತ್ತು ಹಾಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಹೃದಯಕ್ಕೆ ಸಂಬಂಧಿಸಿದ ಕಾಯಿಲೆ, ಕ್ಯಾನ್ಸರ್ ಅಥವಾ ಇನ್ನಿತರೆ ಕಾಯಿಲೆಗಳಿಗೆ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ನೀಡಿದರೆ ಉಚಿತ ಅಥವಾ ರಿಯಾಯಿತಿ ದರದ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

ಈ ಸಾಫ್ಟ್‌ವೇರ್‌ನನ್ನು ಎರಡು ದಿನದಲ್ಲಿ ಬದಲಾವಣೆ ಮಾಡುವಂತೆ ಆಹಾರ ಸಚಿವ ಜಮೀರ್ ಅಹಮದ್ ಖಾನ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ 4.50 ಲಕ್ಷ ನಕಲಿ ಕಾರ್ಡ್‌ಗಳನ್ನು ರದ್ದು ಮಾಡಿರುವುದರಿಂದ ಸರ್ಕಾರಕ್ಕೆ 500 ಕೋಟಿ ಉಳಿತಾಯವಾಗಲಿದೆ.
ಇದು ವಾರ್ಷಿಕ ಶೇ.8ರಷ್ಟು ಉಳಿತಾಯವಾಗುವಂತೆ ಮಾಡುತ್ತದೆ. ಪಡಿತರ ವ್ಯವಸ್ಥೆಗಾಗಿಯೇ ಈ ವರ್ಷ 3,393 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದು ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ರಾಜ್ಯದಲ್ಲಿ ಒಟ್ಟಾರೆ 1.13 ಕೋಟಿ ಬಿಪಿಎಲ್ ಕಾರ್ಡ್‌ಗಳಿವೆ.












Click it and Unblock the Notifications