ಸಮಾಜವಾದಿ, ಜಾತ್ಯತೀತ ಪದಕ್ಕೆ ಕೊಕ್, ಸಂವಿಧಾನ ಬದಲಾಯಿಸುವ ಬಿಜೆಪಿ ಹಿಡೆನ್ ಅಜೆಂಡಾ: ದಿನೇಶ್ ಗುಂಡೂರಾವ್
ಬೆಂಗಳೂರು, ಸೆಪ್ಟೆಂಬರ್ 21: ನೂತನ ಪಾರ್ಲಿಮೆಂಟ್‌ನಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನಕ್ಕೆ ಬರುವ ಸಂಸದರಿಗೆ ನೀಡಿರುವ ಸಂವಿಧಾನ ಪ್ರತಿಗಳಲ್ಲಿ ಪ್ರಸ್ತಾವನೆಯಲ್ಲಿ ಸಮಾಜವಾದಿ ಹಾಗೂ ಜಾತ್ಯತೀತ ಪದಗಳನ್ನು ತೆಗೆದುಹಾಕಿರುವುದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸಂವಿಧಾನದ ಅಧಿಕೃತ ಪ್ರಸ್ತಾವನೆಯಲ್ಲಿ 'ಜಾತ್ಯಾತೀತ ಮತ್ತು ಸಮಾಜವಾದ'ದ ಉಲ್ಲೇಖವಿದೆ. ಆದರೆ ಕೇಂದ್ರ ಸರ್ಕಾರ ಸಂಸದರಿಗೆ ನೀಡಿರುವ ಸಂವಿಧಾನದ ಪ್ರತಿಯಲ್ಲಿ ಜಾತ್ಯಾತೀತ ಮತ್ತು ಸಮಾಜವಾದ ಪದಗಳೇ ಇಲ್ಲ. ಇದು ಸಂವಿಧಾನಕ್ಕೆ ಎಸಗಿದ ಅಪಚಾರ ಮಾತ್ರವಲ್ಲ, ಕೇಂದ್ರದ BJP ಸರ್ಕಾರ ಜಾತ್ಯಾತೀತ ತತ್ವದ ಮೇಲೆ ನಂಬಿಕೆಯಿಟ್ಟಿಲ್ಲ ಎಂದೂ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.

ಸಂವಿಧಾನದ ಪ್ರಸ್ತಾವನೆಯಲ್ಲಿ ಇರುವ ಜಾತ್ಯಾತೀತ ಪದ ಕೇವಲ ಅದು ಪದವಲ್ಲ. ಅದು ನಮ್ಮ ದೇಶದ ಮನಸ್ಥಿತಿಯ ಪ್ರತೀಕ. ಆದರೆ BJPಯವರು ಈಗ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಜಾತ್ಯಾತೀತ ಪದವನ್ನೇ ಉದ್ದೇಶಪೂರ್ವಕವಾಗಿ ಮೆರೆಮಾಚುತ್ತಿದ್ದಾರೆ. ಇದು ಸಂವಿಧಾನ ಬದಲಾಯಿಸುವ ಕೇಂದ್ರ BJP ಸರ್ಕಾರದ ಹಿಡೆನ್ ಅಜೆಂಡಾವಿದ್ದಂತಿದೆ ಎಂದು ಹೇಳಿದ್ದಾರೆ.
2
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 21, 2023
ಸಂವಿಧಾನದ ಪ್ರಸ್ತಾವನೆಯಲ್ಲಿ ಇರುವ ಜಾತ್ಯಾತೀತ ಪದ ಕೇವಲ ಅದು ಪದವಲ್ಲ.
ಅದು ನಮ್ಮ ದೇಶದ ಮನಸ್ಥಿತಿಯ ಪ್ರತೀಕ.
ಆದರೆ BJPಯವರು ಈಗ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಜಾತ್ಯಾತೀತ ಪದವನ್ನೇ ಉದ್ದೇಶಪೂರ್ವಕವಾಗಿ ಮೆರೆಮಾಚುತ್ತಿದ್ದಾರೆ.
ಇದು ಸಂವಿಧಾನ ಬದಲಾಯಿಸುವ ಕೇಂದ್ರ BJP ಸರ್ಕಾರದ ಹಿಡೆನ್ ಅಜೆಂಡಾವಿದ್ದಂತಿದೆ.
ಮಂಗಳವಾರ ನೂತನ ಸಂಸತ್ ಕಟ್ಟಡದಲ್ಲಿ ಆರಂಭದ ವೇಳೆ ನೀಡಲಾಗಿದ್ದ ಸಂವಿಧಾನ ಪ್ರತಿಯ ಪ್ರಸ್ತಾವನೆಯಲ್ಲಿ ಸರ್ಕಾರವು ಸಂವಿಧಾನವನ್ನು ತಿರುಚಿದೆ, ವಿರೂಪಗೊಳಿಸಿದೆ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ವಿಷಯವನ್ನು ಲೋಕಸಭೆಯ ವಿಶೇಷ ಅಧಿವೇಶನದ ಉಳಿದ ದಿನಗಳಲ್ಲಿ ಪ್ರಸ್ತಾಪಿಸಲು ವಿರೋಧ ಪಕ್ಷಗಳು ನಿರ್ಧಾರ ಮಾಡಿವೆ.
ಸಂವಿಧಾನದ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ತಂದಿರುವ ಬದಲಾವಣೆಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ಬಹಿರಂಗಪಡಿಸಿದ್ದರು. ಸರ್ಕಾರವು ಸಂವಿಧಾನದ ಪ್ರಸ್ತಾವನೆಯನ್ನು ಬದಲಾಯಿಸಿದ್ದು ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳನ್ನು ಕೈಬಿಟ್ಟಿರುವ ಸಂವಿಧಾನದ ಪ್ರತಿಗಳನ್ನು ಸಂಸದರಿಗೆ ನೀಡಿದೆ. ಆದರೆ, ಸರ್ಕಾರವು ನೀಡಿದ್ದ ಪ್ರತಿಯಲ್ಲಿ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆ ಎಂಬುದನ್ನೂ ರಾಷ್ಟ್ರೀಯ ಏಕತೆ ಎಂದು ಬದಲಿಸಿ ಮುದ್ರಿಸಲಾಗಿದೆ ಎಂದು ತಿಳಿಸಿದ್ದರು.
ಅಧೀರ್ ರಂಜನ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾನೂನು ಸಚಿವ ಅರ್ಜುನ್ ರಾಮ್ ಮೆಘವಾಲ್, ಸಂವಿಧಾನದ ಮೂಲ ಪ್ರಸ್ತಾವನೆ ಇರುವ ಪ್ರತಿಯನ್ನು ಸಂಸದರಿಗೆ ನೀಡಲಾಗಿದೆ. ಮೂಲ ಪ್ರತಿಯಲ್ಲಿ ಸಮಾಜವಾದಿ, ಜಾತ್ಯತೀತ ಎಂಬ ಪದಗಳು ಇರಲಿಲ್ಲ. ಅವುಗಳನ್ನು ಆನಂತರ ತಿದ್ದುಪಡಿ ಮಾಡಿ ಸೇರಿಸಲಾಗಿದೆ' ಎಂದು ಸಮರ್ಥಿಸಿಕೊಂಡಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಅಧೀರ್ ರಂಜನ್ ಚೌಧರಿ, ಇಂದು ನೀವು ಯಾರಿಗಾದರೂ ಸಂವಿಧಾನದ ಪ್ರತಿ ನೀಡುತ್ತೀರಿ ಎಂದಾದರೆ, ಅದು ಈಗ ಜಾರಿಯಲ್ಲಿರುವ ಪ್ರತಿಯೇ ಆಗಿರಬೇಕು. ಹಳೆಯದನ್ನು ನೀಡಬಾರದು. ಜತೆಗೆ ಹೀಗೆ ಮಾಡುವಲ್ಲಿ ಸರ್ಕಾರದ ಉದ್ದೇಶವೇನು ಎಂಬುದು ಅರ್ಥವಾಗತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದರು.












Click it and Unblock the Notifications