ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ-ಕೆಜೆಪಿ ವಿಲೀನಕ್ಕೆ ಸ್ಪೀಕರ್ ಅಂಕಿತ

|
Google Oneindia Kannada News

ಬೆಂಗಳೂರು, ಜ.22 : ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತಂದ ಬಿಜೆಪಿ ನಾಯಕರು ಗುರುವಾರ ವಿಧಾನಸಭೆಯಲ್ಲಿ ಅಧಿಕೃತವಾಗಿ ಪ್ರತಿಪಕ್ಷ ಸ್ಥಾನ ಪಡೆಯಲಿದ್ದಾರೆ. ಬಿಜೆಪಿ-ಕೆಜೆಪಿ ವಿಲೀನಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅಂತಿಮ ಒಪ್ಪಿಗೆ ನೀಡಿದ್ದು, ಕೆಜೆಪಿ ಶಾಸಕರಿಗೆ ಬಿಜೆಪಿ ಶಾಸಕರೆಂದು ಮಾನ್ಯತೆ ನೀಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದ್ದಾರೆ. ವಿರೋಧ ಪಕ್ಷದ ಕುರಿತು ಗುರುವಾರ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ಬುಧವಾರ ರಾಜ್ಯಪಾಲರ ಭಾಷಣದ ನಂತರ ಸ್ಪೀಕರ್ ಕಾಗೋಡು ತಿಮ್ಮಪ್ಪ, ಕರ್ನಾಟಕ ಜನತಾ ಪಕ್ಷ ಬಿಜೆಪಿಯಲ್ಲಿ ವಿಲೀನಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 44ಕ್ಕೆ ಏರಿಕೆಯಾಗಿದ್ದು, ಬಿಜೆಪಿಗೆ ಅಧಿಕೃತ ಪ್ರತಿಪಕ್ಷ ಸ್ಥಾನ ನೀಡುವ ತೀರ್ಮಾನವನ್ನು ಗುರುವಾರ ಘೋಷಿಸಲಾಗುವುದು ಎಂದು ಹೇಳಿದರು. [ರಾಜ್ಯಪಾಲರ ಭಾಷಣ]

Jagadish Shettar

ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದಾಗಿ ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮನವಿ ಸಲ್ಲಿಸಿದ್ದರು. ಬಿಜೆಪಿ ಸಹ ವಿಲೀನಕ್ಕೆ ನಮ್ಮ ಒಪ್ಪಿಗೆ ಇದೆ ಎಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು. ಆದ್ದರಿಂದ ವಿಧಾನಸಭೆಯಲ್ಲಿ ಕೆಜೆಪಿಯ 4 ಶಾಸಕರಿಗೆ ಬಿಜೆಪಿಯ ಶಾಸರಕರಾಗಿ ಮಾನ್ಯತೆ ನೀಡಲಾಗಿದೆ ಸದನಕ್ಕೆ ತಿಳಿಸಿದರು. ಶಾಸಕಾಂಗ ನಡವಳಿಯಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. [ಬಿಜೆಪಿಗೆ ಪ್ರತಿಪಕ್ಷ ಸ್ಥಾನ]

ಕೆಜೆಪಿ ಶಾಸಕರಾದ ಬಿ.ಎಸ್. ಯಡಿಯೂರಪ್ಪ, ಯು.ಬಿ. ಬಣಕಾರ್, ವಿಶ್ವನಾಥ್ ಪಾಟೀಲ, ಗುರುಮಾದಪ್ಪ ನಾಗಮಾರಪಳ್ಳಿ ಅವರಿಗೆ ಬಿಜೆಪಿ ಶಾಸಕರಾಗಿ ಮಾನ್ಯತೆ ನೀಡಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಸದನಕ್ಕೆ ಮಾಹಿತಿ ನೀಡಿದರು. ವಿಧಾನಸಭೆಯಲ್ಲಿ ಬಿಜೆಪಿಯ ಬಲ 44ಕ್ಕೆ ಏರಿಕೆಯಾಗಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷದ ಕುರಿತು ಗುರುವಾರ ನಿರ್ಧಾರ ತಿಳಿಸಲಾಗುವುದು ಎಂದು ಹೇಳಿದರು.

ಬಿಜೆಪಿಗೆ ಪ್ರತಿಪಕ್ಷದ ಸ್ಥಾನ ದೊರೆತರೆ ಶಾಸಕಾಂಗ ಪಕ್ಷದ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಪ್ರತಿಪಕ್ಷದ ನಾಯಕನ ಸ್ಥಾನ ಅಲಂಕರಿಸಲಿದ್ದಾರೆ. ಉಪನಾಯಕನ ಸ್ಥಾನವನ್ನು ಸದ್ಯಕ್ಕೆ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅಲಂಕರಿಸುವ ಸಾಧ್ಯತೆ ಹೆಚ್ಚಾಗಿದೆ. ಉಪನಾಯಕನ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಸೇರಿದ ಹಿರಿಯ ಮುಖಂಡ ಗೋವಿಂದ ಕಾರಜೋಳ ಅವರಿಗೆ ನೀಡಬೇಕು ಎಂಬ ಒತ್ತಾಯವೂ ಪಕ್ಷದಲ್ಲಿ ಕೇಳಿ ಬರುತ್ತಿದೆ.

ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ 40 ಸ್ಥಾನಗಳಲ್ಲಿ ಪಡೆದಿದ್ದವು. ಮತಗಳ ಹಂಚಿಕೆ ಆಧಾರದ ಮೇಲೆ ಜೆಡಿಎಸ್ ಪಕ್ಷವನ್ನು ಅಧಿಕೃತ ಪ್ರತಿಪಕ್ಷವಾಗಿ ಘೋಷಿಸಲಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಪ್ರತಿಪಕ್ಷ ನಾಯಕರ ಸ್ಥಾನ ಅಲಂಕರಿಸಿದ್ದರು. ಸದ್ಯ ಬಿಜೆಪಿ ಬಲ 44ಕ್ಕೆ ಏರಿದ್ದು ಪ್ರತಿಪಕ್ಷ ಸ್ಥಾನ ಪಕ್ಷ ಪಾಲಾಗಲಿದೆ.

English summary
After B.S Yeddyurappa's Karnataka Janata Paksha (KJP) merging with the Bharataiya Janata Party, the BJP will get opposition party in the state Assembly. Speaker Kagodu Thimmappa said, opposition party decision will announced on Thursday, Jan 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X