ಕಾಂಗ್ರೆಸ್ ಪಕ್ಷದಲ್ಲಿ ನಾಯಕರೇ ಇಲ್ಲ ರೀ ಎಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಭಾರತ್ ಜೋಡೋ ಯಾತ್ರೆಯಿಂದ ರಾಜಕೀಯ ಲಾಭ ಆಗುತ್ತೇ ಅಂತಾ ನನಗನಿಸಲ್ಲ. ರಾಹುಲ್ ಗಾಂಧಿ ನಾಯಕರು ಅಂತಾ ಯಾರು ಒಪ್ಪಿಕೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಳಿದರು.

ಶಿವಮೊಗ್ಗ, ಜನವರಿ30: ಭಾರತ್ ಜೋಡೋ ಯಾತ್ರೆ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ. ಯಾಕೆಂದರೇ ಕಾಂಗ್ರೆಸ್ ಪಕ್ಷದಲ್ಲಿ ನಾಯಕರೇ ಇಲ್ಲ ರೀ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ. ಅವರೋಬ್ಬರು ಈ ತುದಿಯಿಂದ ಆ ತುದಿಗೆ ಹೋಗಿಬಂದರು. ನಾನು ಅದನ್ನು ಅಲ್ಲಗಳೆಯಲ್ಲ. ಆದರೆ, ಆದರಿಂದ ರಾಜಕೀಯ ಲಾಭ ಆಗುತ್ತೇ ಅಂತಾ ನನಗನಿಸಲ್ಲ. ರಾಹುಲ್ ಗಾಂಧಿ ನಾಯಕರು ಅಂತಾ ಯಾರು ಒಪ್ಕೋತ್ತಾರೆ ಎಂದು ಕೇಳಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಓಡಾಟ ಮಾಡುತ್ತಿದ್ದಾರೆ. ಅದರಿಂದ ನಮಗೆ ಲಾಭ ಅಗುತ್ತೆ.. ಪ್ರಧಾನಿ ಇನ್ನೂ ಹೆಚ್ಚಿನ ಸಮಯ ಕೊಡುತ್ತಾರೆ ಎಂದು ಹೇಳಿದರು.

BJP Will Come Power Winning 140 Seats Says Former CM BS Yediyurappa

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಕೇಂದ್ರ ಗೃಹಸಚಿವ ಅಮಿತ್ ಶಾ ಮಾರ್ಗದರ್ಶನದಂತೆ ರಣತಂತ್ರ ರೂಪಿಸಲಾಗಿದೆ. 140 ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.ಎಲ್ಲರೂ ಕೂಡ ಪ್ರವಾಸ ಶುರು ಮಾಡಿದ್ದೇವೆ. ಅಧಿವೇಶನದ ನಂತರ ಮತ್ತೇ ಎಲ್ಲಾ ಕಡೆ ಹೋಗ್ತೇವೆ. ಹಗಲು ಕನಸು ಕಾಣೋರ ಬಗ್ಗೆ ನಾವೇನು ಚರ್ಚೆ ಮಾಡಲ್ಲ. ಮಂಡ್ಯ, ಮೈಸೂರು ಭಾಗದಲ್ಲಿ ಸಹ ಓಡಾಟ ಮಾಡಲಾಗುತ್ತಿದೆ. ಎಲ್ಲರನ್ನೂ ಸಂಪರ್ಕ ಮಾಡುತ್ತಿದ್ದೇವೆ. ಅನೇಕ ಮುಖಂಡರು ಬಿಜೆಪಿಗೆ ಬರಲು ಸಿದ್ದರಾಗಿದ್ದಾರೆ ಎಂದು ಹೇಳಿದರು.

BJP Will Come Power Winning 140 Seats Says Former CM BS Yediyurappa

ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಮಾತನಾಡಿದ ಅವರು, ಈಗಾಗಲೇ ಸುಮಲತಾ ಅಂಬರೀಶ್ ಬೆಂಬಲಿಗರು ಬಿಜೆಪಿ ಸೇರುತ್ತಿದ್ದಾರೆ. ಸುಮಲತಾ ಅಂಬರೀಶ್ ಸೇರ್ಪಡೆ ಬಗ್ಗೆ ಚರ್ಚೆಯಾಗಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+