ರವಿ ಪೂಜಾರಿ ಇರಲಿ, ಶಾಸಕ ಗಣೇಶ್‌ ಅನ್ನು ಹಿಡಿಯಿರಿ: ಸಿಎಂಗೆ ಬಿಜೆಪಿ ಟಾಂಗ್

Recommended Video

      ರವಿ ಪೂಜಾರಿಯನ್ನು ಬಂಧಿಸಿದ್ದು ಕುಮಾರಸ್ವಾಮಿ ಸರ್ಕಾರ ಅಂತೆ..! | Oneindia Kannada

      ಬೆಂಗಳೂರು, ಫೆಬ್ರವರಿ 02: ಡಾನ್ ಹಣೆಪಟ್ಟಿ ಕಟ್ಟಿಕೊಂಡು ಮೆರೆಯುತ್ತಿದ್ದ ರವಿ ಪೂಜಾರಿಯ ಬಂಧನದ ಶ್ರೇಯ ನಮ್ಮ ಸರ್ಕಾರದ್ದು ಎಂದಿದ್ದ ಕುಮಾರಸ್ವಾಮಿಗೆ ಬಿಜೆಪಿ ಕರ್ನಾಟಕವು ಟ್ವಿಟ್ಟರ್‌ನಲ್ಲಿ ಟಾಂಗ್ ನೀಡಿದೆ.

      ರವಿ ಪೂಜಾರಿಯನ್ನು ಬಂಧಿಸಿದ್ದ ನಮ್ಮ ಸರ್ಕಾರ ಎಂದು ಕೀರ್ತಿ ಪಡೆವ ಮೊದಲು ಕಂಪ್ಲಿ ಶಾಸಕ ಗಣೇಶ್ ಅನ್ನು ಬಂಧಿಸಿ, ನಿಮ್ಮ ಪೌರುಷ ತೋರಿಸಿ ಎಂದು ಬಿಜೆಪಿ ಟ್ವಿಟ್ಟರ್‌ನಲ್ಲಿ ಸವಾಲು ಹಾಕಿದೆ.

      ಶಾಸಕ ಗಣೇಶ್ ಅವರು ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿ ಆಗಿದ್ದಾರೆ. ಬಿಡದಿ ಪೊಲೀಸರು ಗಣೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಗಣೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜನವರಿ 19 ರ ರಾತ್ರಿ ಘಟನೆ ನಡೆದಿದ್ದು ಈವರೆಗೆ ಪೊಲೀಸರು ಶಾಸಕ ಗಣೇಶ್‌ ಅವರನ್ನು ಬಂಧಿಸಿಲ್ಲ.

      BJP tweets to CM Kumaraswamy to arrest MLA Ganesh

      ಮಂಗಳೂರು ಮೂಲದ ಡಾನ್ ರವಿ ಪೂಜಾರಿಯನ್ನು ಜವನರಿ 21 ರಂದು ಸೆನೆಗಲ್ ಪೊಲಿಸರು ಬಂಧಿಸಿದ್ದು, ಬಂಧನಕ್ಕೆ ಬೆಂಗಳೂರು ಗುಪ್ತಚರ ಪೊಲೀಸರ ನೀಡಿದ್ದ ಸುಳಿವು ವಹಿಸಿದ ಕಾಳಜಿಯೇ ಕಾರಣ ಎಂದು ಹೇಳಲಾಗುತ್ತಿದೆ.

      ರವಿ ಪೋಜಾರಿ ಬಂಧಿನದ ಶ್ರೇಯ ನಮ್ಮ ಸರ್ಕಾರಕ್ಕೆ ಸಲ್ಲಬೇಕು ಎಂದು ಕುಮಾರಸ್ವಾಮಿ ನಿನ್ನೆಯಷ್ಟೆ ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+