ಸ್ಪೀಕರ್ ಕಟ್ಟಿ ಹಾಕಲು ಅವಿಶ್ವಾಸ ನಿರ್ಣಯದ ನೋಟಿಸ್?
ಬೆಂಗಳೂರು, ಜುಲೈ 26 : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಲಿದೆ. 14 ಶಾಸಕರ ರಾಜೀನಾಮೆ ಅರ್ಜಿ ಸ್ಪೀಕರ್ ಮುಂದೆ ಬಾಕಿ ಇದೆ.
ಗುರುವಾರ ಸ್ಪೀಕರ್ ರಮೇಶ್ ಕುಮಾರ್ ಮೂವರು ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದರು. ಈಗ ಹೊಸ ಸರ್ಕಾರ ಬರುತ್ತಿದ್ದಂತೆ ಸ್ಪೀಕರ್ ಕಟ್ಟಿ ಹಾಕಲು ತಂತ್ರ ನಡೆದಿದೆ. ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿದರೆ ಸ್ಪೀಕರ್ ಯಾವುದೇ ತೀರ್ಮಾನವನ್ನು ಕೈಗೊಳ್ಳಲು ಸಾಧ್ಯವಿಲ್ಲ.
ರಮೇಶ್ ಕುಮಾರ್ ಮಾಧ್ಯಮಗಳ ಜೊತೆ ಮಾತನಾಡುವಾಗ, "ಹೊಸ ಸರ್ಕಾರ ರಚನೆಯಾಗಿ ನನ್ನ ವಿರುದ್ಧ ಅವಿಶ್ವಾಸ ಮಂಡಿಸಿದರೆ ಮಾತ್ರ ಸಭಾದ್ಯಕ್ಷರು ಬದಲಾಗಬಹುದು. ಅಲ್ಲಿಯ ತನಕ ನಾನೇ ಸಭಾಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯುತ್ತೇನೆ" ಎಂದು ಸ್ಪಷ್ಟಪಡಿಸಿದ್ದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ನೋಟಿಸ್ ಜಾರಿ ಮಾಡಲಾಗುತ್ತದೆ. ಆಗ ಸ್ಪೀಕರ್ ಶಾಸಕರ ಅನರ್ಹತೆ, ರಾಜೀನಾಮೆ ಬಗ್ಗೆ ಯಾವುದೇ ತೀರ್ಮಾನವನ್ನು ಕೈಗೊಳ್ಳುವಂತಿಲ್ಲ.
ಒಮ್ಮೆ ಅವಿಶ್ವಾಸ ನಿರ್ಣಯದ ನೋಟಿಸ್ ಜಾರಿಗೊಂಡರೆ 14 ದಿನದಲ್ಲಿ ಅದನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಬೇಕಿದೆ. ಆಡಳಿತ ಪಕ್ಷದ ಸದಸ್ಯರು ನಿರ್ಣಯದ ವಿರುದ್ಧ ಮತ ಚಲಾವಣೆ ಮಾಡುವ ಮೂಲಕ ಸ್ಪೀಕರ್ ಬದಲಾವಣೆ ಮಾಡುತ್ತಾರೆ.












Click it and Unblock the Notifications