ಸ್ಪೀಕರ್ ಚುನಾವಣೆ ಸುರೇಶ್‌ ಕುಮಾರ್ ನಾಮಪತ್ರ, ಕಾಂಗ್ರೆಸ್‌ನಿಂದ ಯಾರು?

ಬೆಂಗಳೂರು, ಮೇ 24: ನಾಳೆ ನಡೆಯಲಿರುವ ಸ್ಪೀಕರ್ ಆಯ್ಕೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ರಾಜರಾಜಿನಗರ ಶಾಸಕ ಸುರೇಶ್ ಕುಮಾರ್ ಅವರು ನಾಮಪತ್ರ ಸಲ್ಲಿಸಿಲಿದ್ದಾರೆ. ವಿಧಾನಸಭಾ ಕಾರ್ಯದರ್ಶಿ ಎಸ್.ಮೂರ್ತಿ ಅವರು ನಾಮಪತ್ರ ಸ್ವೀಕರಿಸಿದರು.

ನಾಳೆ ಸದನದಲ್ಲಿ ಸ್ಪೀಕರ್ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟದಿಂದ ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಹಂಗಾಮಿ ಸ್ಪೀಕರ್ ಬೋಪಯ್ಯ ಅವರು ನಾಳೆ ಸ್ಪೀಕರ್ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.

ಶಾಸಕರು ಮತ ಚಲಾಯಿಸಿ ಸ್ಪೀಕರ್ ಅನ್ನು ಆಯ್ಕೆ ಮಾಡಲಿದ್ದು, ಹೆಚ್ಚು ಶಾಸಕರ ಬಲ ಹೊಂದಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ರಮೇಶ್ ಕುಮಾರ್ ಅವರೇ ಸ್ಪೀಕರ್ ಆಗಿ ಆಯ್ಕೆ ಆಗುವ ಸಾಧ್ಯತೆ ಇದೆ. ಜೆಡಿಎಸ್ ಪಕ್ಷವು ಸ್ಪೀಕರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ ಎನ್ನಲಾಗಿದೆ.

BJP Suresh kumar files nomination for speaker election

ಪಕ್ಷದ ರಾಜ್ಯಾಧ್ಯಕ್ಷ ಸೂಚನೆಯಂತೆ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಗೆಲ್ಲುವ ವಿಶ್ವಾವಿದೆ ಎಂದು ಸುರೇಶ್‌ ಕುಮಾರ್ ಅವರು ಹೇಳಿದ್ದಾರೆ. ಸುರೇಶ್‌ ಕುಮಾರ್ ಅವರು ಮಲ್ಲೇಶ್ವರ ಶಾಸಕ ಡಾ.ಅಶ್ವತ್ಥನಾರಾಯಣ್ ಹಾಗೂ ಕಾರ್ಕಳದ ಶಾಸ ಸುನೀಲ್ ಕುಮಾರ್ ಅವರ ಜೊತೆ ಬಂದು ನಾಮಪತ್ರ ಸಲ್ಲಿಸಿದರು.

ಪ್ರಸ್ತುತ ಸನ್ನಿವೇಶದಲ್ಲಿ ಸೋಲು ಖಚಿತವೆಂದೂ ಅರಿತಿದ್ದರೂ ಸುರೇಶ್ ಕುಮಾರ್ ಅವರು ನಾಮಪತ್ರ ಸಲ್ಲಿಸಿರುವುದು ಆಶ್ಚರ್ಯ ಮೂಡಿಸಿದೆ. ಯಾರಾದರೂ ಶಾಸಕರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆಯೇ ಎಂಬ ಅನುಮಾನವೂ ಇದರಿಂದ ಮೂಡಿದೆ.

ಸ್ಪೀಕರ್‌ ಆಯ್ಕೆ ಬಹುಮತ ಸಾಬೀತಿಗೆ ತಾಲೀಮಿನಂತೆ ಇರಲಿದ್ದು, ನಾಳೆ ಎಷ್ಟು ಜನ ಶಾಸಕರು ಬಿಜೆಪಿ ಪರ ಇದ್ದಾರೆ, ಎಷ್ಟು ಶಾಸಕರು ಜೆಡಿಎಸ್-ಕಾಂಗ್ರೆಸ್ ಪರ ಇದ್ದಾರೆ ಎಂಬುದು ಗೊತ್ತಾಗಿಬಿಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+