ಸೋರುತಿರುವ ಬಸ್; ಮಳೆಯಲ್ಲಿ ಕೊಡೆ ಹಿಡಿದು ಸರ್ಕಾರಿ ಬಸ್ ಚಾಲನೆ: 'ಛತ್ರಿ ಭಾಗ್ಯ' ಎಂದ ಬಿಜೆಪಿ

ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಇಡೀ ದೇಶದಲ್ಲೇ ಅತ್ಯುತ್ತಮ ಹೆಸರು ಗಳಿಸಿರುವ ಸಾರ್ವಜನಿಕ ಸಾರಿಗೆ ಸಂಸ್ಥೆ. ಇದು ಕರ್ನಾಟಕದ ಹೆಮ್ಮೆ ಕೂಡ. ಆದರೆ ಉತ್ತರ ಕರ್ನಾಟಕದ ವಿಚಾರದಲ್ಲಿ ಇದು ತದ್ವಿರುದ್ಧ.

ರಾಜ್ಯ ಸರ್ಕಾರಗಳಿಗೆ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮೊದಲಿನಿಂದಲೂ ನಿರ್ಲಕ್ಷ್ಯ, ಸಾರಿಗೆ ವಿಚಾರದಲ್ಲಿ ಕೂಡ ಇದು ಮುಂದುವರೆದಿದೆ. ಕೆಎಸ್‌ಆರ್‌ಟಿಸಿ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸುಗಳನ್ನು ನೋಡಿದಾಗ ಈ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುತ್ತದೆ.

BJP Slams Karnataka Govt Following KSRTC Bus Driver s Umbrella Use in Rain

ಉತ್ತರ, ಕಲ್ಯಾಣ ಕರ್ನಾಟಕ ಗ್ರಾಮೀಣ ಪ್ರದೇಶದ ಸಾರಿಗೆ ಬಸ್ಸುಗಳ ಸ್ಥಿತಿ ಕೂಡ ಕಳಪೆಯಾಗಿದೆ. ಇದೆಲ್ಲದರ ನಡುವೆ ಈಗ ವಿಡಿಯೋವೊಂದು ವೈರಲ್ ಆಗಿದ್ದು, ಚಾಲಕರು, ಪ್ರಯಾಣಿಕರ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಭಾರಿ ಮಳೆಯಿಂದ ವಾಯುವ್ಯ ಕರ್ನಾಟಕ ಬಸ್‌ ಸೋರುತ್ತಿದ್ದು, ಸುರಿಯುವ ಮಳೆಯಲ್ಲೂ ಚಾಲಕ ಛತ್ರಿ ಹಿಡಿದುಕೊಂಡು ಒಂದೇ ಕೈನಲ್ಲಿ ಬಸ್ ಚಾಲನೆ ಮಾಡುತ್ತಿರುವ ಆಘಾತಕಾರಿ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು "ಸನ್ಮಾನ್ಯ ರಾಮಲಿಂಗಾರೆಡ್ಡಿ ಅವರೇ, ಇದು ನಮ್ಮ ಸರ್ಕಾರಿ ಬಸ್ಸುಗಳ ದುಃಸ್ಥಿತಿ. ಈ ರೀತಿ ಒಂದು ಕೈಯಲ್ಲಿ ಕೊಡೆ, ಒಂದು ಕೈಯಲ್ಲಿ ಸ್ಟಿಯರಿಂಗ್ ವೀಲ್ ಬ್ಯಾಲೆನ್ಸ್ ಮಾಡುತ್ತ ಓಡಿಸುವುದರಿಂದ ಚಾಲಕರು ಹಾಗೂ ಪ್ರಯಾಣಿಕರ ಜೀವಕ್ಕೆ ಕುತ್ತು. ಇದೇನಾ ಚಾಲಕರಿಗೆ ಇರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ ? (standard operating procedure). ಚಾಲಕರ, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ಇರಲಿ." ಎಂದು ಹೇಳಿದ್ದಾರೆ.

ಕರ್ನಾಟಕ ಬಿಜೆಪಿ ವ್ಯಂಗ್ಯಚಿತ್ರವನ್ನು ಹಂಚಿಕೊಂಡಿದ್ದು ಕರ್ನಾಟಕದ ಸರ್ಕಾರದಿಂದ ಛತ್ರಿ ಭಾಗ್ಯಕ್ಕೆ ಚಾಲನೆ ಎಂದು ಸರ್ಕಾರವನ್ನು ಟೀಕಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+