ಟಿಪ್ಪು ಜಯಂತಿಗೆ ಹಣವಿದೆ, ಹಂಪಿ ಉತ್ಸವಕ್ಕೆ ಮಾತ್ರ ಬರವೇ?: ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ
Recommended Video

ಬೆಂಗಳೂರು, ನವೆಂಬರ್ 29: ಈ ಬಾರಿಯ ಹಂಪಿ ಉತ್ಸವ ಆಚರಿಸದೆ ಇರಲು ನಿರ್ಧರಿಸಿರುವ ಸರ್ಕಾರದ ಕ್ರಮದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ನೂರಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಇರುವ ಕಾರಣ ಈ ಹಿಂದಿನಂತೆ ಆಡಂಬರದಿಂದ ಹಂಪಿ ಉತ್ಸವ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಉತ್ಸವವನ್ನು ಮುಂದೂಡಲಾಗಿದೆ ಎಂದು ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಂಪಿ ಉತ್ಸವಕ್ಕೆಂದೇ 10 ಕೋಟಿ ರೂ.ಗಳ ಅನುದಾನವನ್ನು ತೆಗೆದಿರಿಸುತ್ತಿತ್ತು, ಆದರೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಹಂಪಿ ಉತ್ಸವಕ್ಕೆ ಯಾವುದೇ ಅನುದಾನವನ್ನು ತೆಗೆದಿರಿಸಿರಲಿಲ್ಲ.
ರಾಜ್ಯ ಸರ್ಕಾರ ಹಂಪಿ ಉತ್ಸವಕ್ಕೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲವಾದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಸಂಪನ್ಮೂಲ ಕ್ರೋಢೀಕರಿಸಿ ಹಂಪಿ ಉತ್ಸವ ನೆರವೇರಿಸುವುದಾಗಿ ಹಂಪಿ ಉತ್ಸವ ನಡೆಸುವುದಾಗಿ ಡಿಕೆ ಶಿವಕುಮಾರ್ ತಿಳಿಸಿದ್ದರು.
ಇದಕ್ಕೆ ಬಿಜೆಪಿಯ ವಿವಿಧ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
|
ಟಿಪ್ಪು ಜಯಂತಿಗೆ ಹಣವಿರುತ್ತದೆ
ಹುಸಿ ಜಾತ್ಯತೀತ ಸರ್ಕಾರವು ಟಿಪ್ಪು ಜಯಂತಿಯನ್ನು ಆಚರಿಸಲು ಎಲ್ಲ ಹಣ ಮತ್ತು ಸಮಯ ಹೊಂದಿರುತ್ತದೆ. ಆದರೆ, ಅದು ಬರದ ನೆಪವೊಡ್ಡಿ ಹಂಪಿ ಉತ್ಸವ ಸ್ಥಗಿತಗೊಳಿಸಿದೆ.
ಈ ಸರ್ಕಾರಕ್ಕೆ ಮತಾಂಧ ಮತ್ತು ಪರ್ಷಿಯನ್ ಭಾಷೆ ಹೇರಿಕೆ ಮಾಡಿದಾತ ಕರ್ನಾಟಕದ ಹೆಮ್ಮೆ. ಆದರೆ, ವಿಜಯನಗರ ಸಾಮ್ರಾಜ್ಯದ ಸುವರ್ಣಯುಗ ಹೊರೆ ಎಂದು ಬಿಜೆಪಿ ಕರ್ನಾಟಕ ಘಟಕ ಟ್ವೀಟ್ ಮಾಡಿದೆ.
| Array |
ಹಿಂದೂಗಳ ವಿರುದ್ಧ ದ್ವೇಷವೇಕೆ?
ಅಪವಿತ್ರ ಮೈತ್ರಿ ಸರ್ಕಾರವು ಟಿಪ್ಪು ಜಯಂತಿಯನ್ನು ಕೆಲವು ದಿನಗಳ ಹಿಂದಷ್ಟೇ ಅದ್ಧೂರಿಯಾಗಿ ಆಚರಿಸಲಾಯಿತು. ಆಗ ಕರ್ನಾಟಕ ಸಮೃದ್ಧಿಯ ರಾಜ್ಯವಾಗಿತ್ತು.
ಇದ್ದಕ್ಕಿದ್ದಂತೆ ಇದೇ ಸರ್ಕಾರ ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದನ್ನು ಗಮನಿಸಿ ಪ್ರತಿಷ್ಠಿತ ಹಂಪಿ ಉತ್ಸವ ಆಚರಿಸದೆ ಇರಲು ನಿರ್ಧರಿಸಿತು. ಹಿಂದೂಗಳ ವಿರುದ್ಧ ಏಕೆ ಈ ರೀತಿಯ ದ್ವೇಷ? ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
|
ಬಳ್ಳಾರಿ ಸಮಾವೇಶಕ್ಕೆ ಹಣವಿತ್ತೇ?
ದುಂದು ವೆಚ್ಚ ಮಾಡಿ ಬಳ್ಳಾರಿಯಲ್ಲಿ ಕೃತಜ್ಞನತಾ ಸಮಾವೇಶ ಮಾಡಿದಾಗ ಅಡ್ಡ ಬರದ ಬರಗಾಲ ಹಂಪಿ ಉತ್ಸವ ಆಚರಿಸಲು ಬಂತೆ ? ನಿಮ್ಮ ರೈತಪರ ಕಾಳಜಿಯನ್ನು ರೈತರ ಸಾಲಮನ್ನಾ ಮಾಡುವ ಮೂಲಕ ತೋರಿಸಿ. ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಹಕಾರ ನೀಡುವ ಮೂಲಕ ಮಾಡಿ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಬಳ್ಳಾರಿಯಲ್ಲೇ ಐದು ತಾಲ್ಲೂಕುಗಳಲ್ಲಿ ಬರ
ಬಳ್ಳಾರಿಯ ಐದು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಹಂಪಿ ಉತ್ಸವ ಬೇಕೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಸರ್ಕಾರದ ಹಂತದಲ್ಲಿಯೇ ತೀರ್ಮಾನ ಮಾಡಲಾಗುವುದು ಎಂದು ಸಚಿವ ಡಿಕೆ ಶಿವಕುಮಾರ್ ಬುಧವಾರ ಹೇಳಿದ್ದರು.












Click it and Unblock the Notifications