ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ; ಡಿಕೆಶಿ ಬೆಂಬಲಕ್ಕೆ 70, ಸಿಎಂ ಬೆಂಬಲಕ್ಕೆ ಎಷ್ಟು ಶಾಸಕರು?
ಬೆಂಗಳೂರು, ಅಕ್ಟೋಬರ್ 23: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಟ್ವೀಟ್ ವಾರ್ ಇದೀಗ ಮತ್ತೆ ಮುಂದುರೆದಿದ್ದು, ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನವನ್ನ ಕುರಿತು ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗೆ ಎಷ್ಟೆಷ್ಟು ಶಾಸಕರ ಬೆಂಬಲ ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ಈ ಕುರಿತು ಬಿಜೆಪಿ ಪ್ರಶ್ನಿಸಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ 70 ಶಾಸಕರಿದ್ದರೆ ನಿಮ್ಮ ಬೆಂಬಲಕ್ಕೆ ಎಷ್ಟು ಶಾಸಕರಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಶ್ನಿಸಿದೆ.ಇದನ್ನು ಹೇಳುತ್ತಿರುವುದು ನಾವಲ್ಲ. ನಿಮ್ಮದೇ ಪಕ್ಷದ ಶಾಸಕ ಚನ್ನಗಿರಿಯ ಶಿವಗಂಗಾ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇನ್ನೂ 135 ರಲ್ಲಿ 70 ಜನ ಡಿ.ಕೆ ಶಿವಕುಮಾರ್ ಬೆಂಬಲಿಗರಾದರೆ ನಿಮ್ಮ ಬೆಂಬಲಿಗರ ಸಂಖ್ಯೆ ಎಷ್ಟು? ಇದನ್ನೆಲ್ಲಾ ಗಮನಿಸಿದರೆ, ನೀವು ಶಾಸಕರ ಆಯ್ಕೆಯಿಂದ ಆದ ಮುಖ್ಯಮಂತ್ರಿ ಅಲ್ಲ. ಬದಲಿಗೆ ಹೈಕಮಾಂಡ್‌ಗೆ ಬ್ಲ್ಯಾಕ್ ಮೇಲ್ ಮಾಡಿ ಅಥವಾ ಬ್ಯಾಂಕ್ ಚೆಕ್ ನೀಡಿ ಮುಖ್ಯಮಂತ್ರಿ ಆದವರು ಎಂಬುದಂತು ಸ್ಪಷ್ಟವಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಸಿಎಂ @siddaramaiah ಅವರೇ, ನಿಮ್ಮ ಪಕ್ಷದ 135 ಶಾಸಕರ ಪೈಕಿ, ಹೊಸದಾಗಿ ಗೆದ್ದಿರುವ 70 ಶಾಸಕರು ಡಿಸಿಎಂ @DKShivakumar ಬೆಂಬಲಿಗರಂತೆ, ಇದನ್ನು ಹೇಳಿದ್ದು ನಾವಲ್ಲ, ನಿಮ್ಮದೇ ಪಕ್ಷದ ಶಾಸಕ ಚನ್ನಗಿರಿಯ ಶಿವಗಂಗಾ ಬಸವರಾಜು!!
— BJP Karnataka (@BJP4Karnataka) October 22, 2023
135 ರಲ್ಲಿ 70 ಜನ ಅವರ ಬೆಂಬಲಿಗರಾದರೆ, ನಿಮ್ಮ ಬೆಂಬಲಿಗರ ಸಂಖ್ಯೆ ಎಷ್ಟು..??
ಇದನ್ನೆಲ್ಲಾ ಗಮನಿಸಿದರೆ,… pic.twitter.com/EomP4HENx6
ಕಲೆಕ್ಷನ್ ಮಾಸ್ಟರ್ಸ್‌ಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೊರ ರಾಜ್ಯಗಳಿಗೆ ಹಣ ಕಳುಹಿಸಲು ಸ್ಪರ್ಧೆಗೆ ಬಿದ್ದು ಜನತೆ ಮುಂದೆ ಬೆತ್ತಲಾಗಿದ್ದಾರೆ. ಸಿದ್ದರಾಮಯ್ಯ ಅವರು ಆಪ್ತ ಗುತ್ತಿಗೆದಾರ ಅಂಬಿಕಾಪತಿ ಮನೆಯ ಮಂಚದ ಕೆಳಗೆ ರಾಶಿ ರಾಶಿ ಹಣವಿಟ್ಟು ಸಿಕ್ಕಿಬಿದ್ದಿದ್ದರು..! ಇದೀಗ ಡಿ. ಕೆ. ಶಿವಕುಮಾರ್ ಅವರು ಅದಾಗಲೇ ತೆಲಂಗಾಣ ಚುನಾವಣೆಗೆ ಹಣ ಕಳುಹಿಸಿ ಹೊರ ರಾಜ್ಯದಲ್ಲಿ ಮತ್ತೊಮ್ಮೆ ತೆರಿಗೆ ಇಲಾಖೆಯ ಕುಣಿಕೆಗೆ ಬಿದ್ದಿದ್ದಾರೆ. ತೆಲಂಗಾಣ ಚುನಾವಣೆ ಉಸ್ತುವಾರಿ ಹೊತ್ತಿರುವ ಡಿಕೆ ಸಾಹೇಬರು ಕಳೆದ ಒಂದು ವಾರದಿಂದ ತಲೆ ಬಿಸಿ ಮಾಡಿಕೊಂಡು ಓಡಾಡುತ್ತಿರುವುದು ಇದೇ ಕಾರಣಕ್ಕೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಇನ್ನೂ ಕಾಂಗ್ರೆಸ್‌ನಲ್ಲಿ ಮನೆಯೊಂದು ನಾಲ್ಕು ಬಾಗಿಲು ಆಗಿದೆ. ಮರ್ಯಾದೆ-ಮುಜುಗರ ಇವುಗಳನ್ನು ಮೂಟೆ ಕಟ್ಟಿಟ್ಟ ನಂತರವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳಗಾವಿ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ಇದು ನಮ್ಮ ಆರೋಪವಲ್ಲ. ಕಾಂಗ್ರೆಸಿಗರೇ ಒಪ್ಪಿಕೊಂಡಿರುವ ಸತ್ಯ ಎಂದು ಬಿಜೆಪಿ ಹೇಳಿದೆ.
ಅಲ್ಲದೇ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ಹಣ ಕೊಡದೇ ವಂಚಿಸಿ ಗೃಹಲಕ್ಷ್ಮಿಯರ ಕಿವಿ ಮೇಲೆ ಹೂವಿಟ್ಟು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳ ಅವರು ಕಾಣೆಯಾಗಿದ್ದಾರೆ. ದಯವಿಟ್ಟು ಅವರನ್ನು ಹುಡುಕಿಕೊಡಿ ಎಂದು ಬಿಜೆಪಿ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದೆ.











Click it and Unblock the Notifications