ಚುನಾವಣೆಯಲ್ಲಿ ಭಾರೀ ಮುಖಭಂಗ: ಕರ್ನಾಟಕದಲ್ಲಿ ಪ್ರಬಲ ಹಿಂದುತ್ವ ಅಜೆಂಡಾವನ್ನು ಮುನ್ನೆಲೆಗೆ ತರಲು ಬಿಜೆಪಿ ಚಿಂತನೆ
ಬೆಂಗಳೂರು, ಮೇ 18: ಮೇ 10ರ ಚುನಾವಣೆಯಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ ಕಳೆದ ಕೆಲವು ದಿನಗಳಿಂದ ಬಿಜೆಪಿಯಲ್ಲಿ ಚಿಂತನ ಮಂಥನ ನಡೆಯುತ್ತಿದೆ. ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಪಕ್ಷದ ಚುನಾವಣಾ ಭವಿಷ್ಯವನ್ನು ಪುನರುಜ್ಜೀವನಗೊಳಿಸಲು ಬಿಜೆಪಿ ಯೋಜನೆ ರೂಪಿಸುತ್ತಿದೆ. ತನ್ನ ರಾಜ್ಯ ನಾಯಕತ್ವವನ್ನು ಮರುಪರಿಶೀಲಿಸಿ ಪ್ರಬಲ ಹಿಂದುತ್ವದ ಅಜೆಂಡಾವನ್ನು ಅನುಸರಿಸುವ ನಿರೀಕ್ಷೆಯಿದೆ.
ಇತ್ತೀಚಿನ ಸಮೀಕ್ಷೆಗಳು, ರಾಜಕೀಯ ತಜ್ಞರು ಅಭಿಪ್ರಾಯಗಳು ತಿಳಿಸಿದಂತೆ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವ ಸಿದ್ಧಾಂತ ಜನರ ಮೇಲೆ ಪರಿಣಾಮ ಬೀರಿಲ್ಲವೆಂದು ಹೇಳಲಾಗುತ್ತಿದೆ. ಮೃದುವಾದ ಹಿಂದುತ್ವ ಜನರ ಮೇಲೆ ಪ್ರಭಾವ ಬೀರಲು ವಿಫಲವಾಗಿದೆ ಎಂದು ತಜ್ಞರು ಭಾವಿಸಿದ್ದಾರೆ.

ರಾಜ್ಯದ ಎಲ್ಲಾ ಪ್ರಮುಖ ಸಮುದಾಯಗಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡಲು ಪಕ್ಷದ ಪ್ರಮುಖರು ನಿರ್ಧರಿಸಿದ್ದಾರೆ. ಬಿಜೆಪಿಯು ತನ್ನ ಭವಿಷ್ಯವನ್ನು ಗಟ್ಟಿಮಾಡಿಕೊಳ್ಳಲು ಹಿಂದುತ್ವದ ಅಜೆಂಡಾವನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.
'ಟೈಮ್ಸ್ ಆಫ್ ಇಂಡಿಯಾ' ಜೊತೆ ಮಾತನಾಡಿರುವ ಹಿರಿಯ ಆರ್‌ಎಸ್‌ಎಸ್ ಮತ್ತು ಬಿಜೆಪಿ ಪದಾಧಿಕಾರಿಗಳು, 'ನಮ್ಮ ಪಕ್ಷದಿಂದ ಒಬ್ಬ ಸಾಮೂಹಿಕ ನಾಯಕ ಹೊರ ಹೊಮ್ಮುವವರೆಗೆ, ಅದು ಇನ್ನೂ ಐದರಿಂದ ಹತ್ತು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಪಕ್ಷವು ತನ್ನ ಹಿಂದುತ್ವದ ಮೂಲ ಸಿದ್ಧಾಂತದೊಂದಿಗೆ ಮುಂದುವರಿಯುವ ಸಾಧ್ಯತೆಯಿದೆ. ಒಂದೇ ಅಜೆಂಡಾವನ್ನು ಮುನ್ನೆಲೆಗೆ ತರಲು ನಮಗೆ ಕಷ್ಟಕರವಾದ ರಾಜ್ಯವಾಗಿದೆ' ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇಂತಹ ಸಂಭವನೀಯ ನೀತಿಯನ್ನು ಮರುಪ್ರಾರಂಭಿಸುವ ನಿರೀಕ್ಷೆ ಇದೆ. ಆದ್ದರಿಂದ, ಬಿಜೆಪಿಯು ಬಲಪಂಥೀಯ ನಾಯಕರಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಇಂಧನ ಸಚಿವ ವಿ ಸುನೀಲ್ ಕುಮಾರ್ ಅವರತ್ತ ನೋಡುತ್ತಿದೆ. ಒಬಿಸಿಗಳನ್ನು ಪ್ರತಿನಿಧಿಸುವ ಈಡಿಗ ಮತ್ತು ಸಂಘಪರಿವಾರಕ್ಕೆ ಹತ್ತಿರವಾಗಿರುವ ಸುನೀಲ್ ಕುಮಾರ್ ಅವರ ಆದ್ಯತೆಯ ಆಯ್ಕೆಯಾಗಬಹುದು ಎಂಬ ಊಹಾಪೋಹಗಳು ದಟ್ಟವಾಗಿವೆ.

ಆದಾಗ್ಯೂ, ಊಹಾಪೋಹಗಳನ್ನು ತಳ್ಳಿಹಾಕಿರುವ ಸುನೀಲ್ ಕುಮಾರ್ ಅವರು ಪಕ್ಷದ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಇಲ್ಲ ಎಂದು ಹೇಳಿದರು. ಜಾತಿ ಆಧಾರಿತ ರಾಜಕೀಯವು ಬಿಜೆಪಿಯ ನಿಜವಾದ ಸಿದ್ಧಾಂತವಲ್ಲ ಎಂದು ಅವರು ಪುನರುಚ್ಚರಿಸಿದರು.
'ನಾವು ಈಗಾಗಲೇ ರಾಜ್ಯ ಘಟಕದಲ್ಲಿ ನಾಯಕರ ಗಂಭೀರ ಕೊರತೆಯನ್ನು ಎದುರಿಸುತ್ತಿದ್ದೇವೆ. ನಾವು ನಮ್ಮ ಜಾತಿ ಆಧಾರಿತ ನಿಲುವನ್ನು ಬದಲಾಯಿಸಬೇಕಾಗಿದೆ. ನಮ್ಮ ಹಿಂದೂ ಮತ್ತು ಹಿಂದುತ್ವ ಸಿದ್ಧಾಂತಗಳಿಗೆ ಬದ್ಧರಾಗಿರಬೇಕಾಗಿದೆ' ಎಂದು ಅವರು ಹೇಳಿದರು.
ಬಿಜೆಪಿಯನ್ನು ಲಿಂಗಾಯತರು ಮತ್ತು ಬ್ರಾಹ್ಮಣರ ಪಕ್ಷ ಎಂದು ಬಿಂಬಿಸಿಕೊಂಡಿದ್ದರೆ, ಜೆಡಿಎಸ್ ತನ್ನನ್ನು ಒಕ್ಕಲಿಗ ಸಂಘಟನೆ ಎಂದು ಬಿಂಬಿಸಿಕೊಂಡಿದೆ. ಇದಕ್ಕೆ ವ್ಯತಿರಿಕ್ತವಾಗಿ, ಎಲ್ಲಾ ಸಮುದಾಯಗಳನ್ನು ತನ್ನ ಮಡಿಲಿಗೆ ಇಟ್ಟುಕೊಂಡು ಜಾತಿ ರಾಜಕಾರಣದ ದೊಡ್ಡ ಫಲಾನುಭವಿಯಾಗಿ ಕಾಂಗ್ರೆಸ್ ಹೊರಹೊಮ್ಮಿದೆ.

ಇಂತಹ ರಾಜಕೀಯ ವಾಸ್ತವವನ್ನು ಗಮನಿಸಿದರೆ, ಕರ್ನಾಟಕದಲ್ಲಿ ತನ್ನ ಜಾತಿ ಆಧಾರಿತ ರಾಜಕೀಯದ ಬ್ರ್ಯಾಂಡ್ ಅನ್ನು ತೆಗೆಯದೇ ಹೊರತು ಬಹುಮತ ಅಂಚಿಗೆ ಹೋಗುವುದಿಲ್ಲ.
'ಚುನಾವಣೆ ಯಶಸ್ಸಿಗೆ ತಿರುಳಲ್ಲಿ ಜಾತಿ ಆಧಾರ ರಾಜಕೀಯ ಮುಂದುವರಿಯುತ್ತದೆ. ಅದನ್ನು ನಾವು ಕಡೆಗಣಿಸಲಾಗುವುದಿಲ್ಲ. ಉದಾಹರಣೆಗೆ, ಬಸವರಾಜ ಬೊಮ್ಮಾಯಿ ಅವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರೆ, ಒಕ್ಕಲಿಗ ಸಮುದಾಯದ ನಾಯಕರೊಬ್ಬರು ರಾಜ್ಯಾಧ್ಯಕ್ಷರ ಪಟ್ಟವನ್ನು ಅಲಂಕರಿಸುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.












Click it and Unblock the Notifications