Get Updates
Get notified of breaking news, exclusive insights, and must-see stories!

BSY Delhi Visit: ಯಡಿಯೂರಪ್ಪ ಭೇಟಿಯಾದ ವಿಪಕ್ಷ ಸ್ಥಾನದ ಆಕಾಂಕ್ಷಿ ಆರಗ ಜ್ಞಾನೇಂದ್ರ

ಬೆಂಗಳೂರು, ಜಲೈ 02: ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ ಇತ್ತ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕರ ಆಯ್ಕೆ ಆಗಬೇಕಿತ್ತು. ಆದರೆ ತಡವಾದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇತ್ತ ಮಾಜಿ ಸಚಿವರೊಬ್ಬರು ವಿಪಕ್ಷ ಸ್ಥಾನಕ್ಕಾಗಿ ಯಡಿಯೂರಪ್ಪರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಬಿಜೆಪಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಅನೇಕರ ಹೆಸರು ಕೇಳಿ ಬರುತ್ತಿದೆ. ಒಂದು ಗುಂಪಿನವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಆಗಲಿದೆ ಎಂದರೆ, ಇನ್ನು ಕೆಲವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿ.ಸುನೀಲ್ ಕುಮಾರ್ ಅವರ ಹೆಸರು ಪ್ರಸ್ತಾಪಿಸಿದ್ದಾರೆ.

BJP Opposition Leader Aspirants Araga Jnanendra Meets BS Yediyurappa, Before Delhi Visit

ಇದೀಗ ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು, ದೆಹಲಿಗೆ ಪ್ರಯಾಣ ಬೆಳೆಸಲಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ವಿಪಕ್ಷ ಸ್ಥಾನಕ್ಕಾಗಿ ಲಾಭಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ವಿಪಕ್ಷ ಸ್ಥಾನದ ಆಸೆ ವ್ಯಕ್ತ: ಆರಗ

ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಲಿರುವ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರ ಆಯ್ಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ವಿಚಾರ ಪಕ್ಷದ ನಾಯಕರಿಗೆ ಮುಟ್ಟುತ್ತಿದ್ದಂತೆ ವಿಪಕ್ಷ ಸ್ಥಾನದ ಕೆಲವು ಆಕಾಂಕ್ಷಿಗಳಿಂದ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅದರಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ವಿಪಕ್ಷ ನಾಯಕನಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಇದೇ ವಿಚಾರವಾಗಿ ಯಡಿಯೂರಪ್ಪ ಭೇಟಿ ಬಳಿಕ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ ಅವರು, ನಾನು ಯಾವ ಸ್ಥಾನದ ಆಕಾಂಕ್ಷಿಯು ಅಲ್ಲ, ಹೈಕಮಾಂಡ್ ನಾಯಕರೇ ನನಗೆ ಹುದ್ದೆ ನೀಡಿದರೆ ಸಮರ್ಥವಾಗಿ ನಿಭಾಯಿಸುವೆ ಎಂದು ನನ್ನ ನಿಲುವು ಸ್ಪಷ್ಟಪಡಿಸಿದ್ದೇನೆ. ವರಿಷ್ಠರು ಏನೇ ನಿರ್ಧಾರ ಮಾಡಿದರೂ ಅದಕ್ಕೆ ನಾನು ಬದ್ಧ ಎಂದು ಹೇಳಿದರು.

BJP Opposition Leader Aspirants Araga Jnanendra Meets BS Yediyurappa, Before Delhi Visit

ಮಾಜಿ ಮುಖ್ಯಮಂತ್ರಿಗಳ ಭೇಟಿ ವಿಚಾರಕ್ಕೆ ಹೊಸ ಅರ್ಥ ಏನು ಇಲ್ಲ. ನಗರಕ್ಕೆ ಬಂದಾಗಲೆಲ್ಲ ಯಡಿಯೂರಪ್ಪನವರ ಮನೆಗೆ ಎಂದಿನಂತೆ ಹೋಗುವುದು ರೂಢ, ಇದು ಸಹ ಹಾಗೆಯೇ ಎಂದರು. ಇನ್ನೂ ವಿರೋಧ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ನನ್ನ ಹೆಸರು ಓಡಾಡುತ್ತಿರುವ ಬಗ್ಗೆ ವರದಿ ಪ್ರಸಾರವನ್ನು ನೋಡಿದ್ದೇನೆ. ಆದಗ್ಯೂ ಕೇಂದ್ರ ವರಿಷ್ಠ ಯಾರನ್ನು ವಿಪಕ್ಷ ನಾಯಕನನ್ನಾಗಿ ಮಾಡುತ್ತಾರೆ ಅದಕ್ಕೆ ನಾನು ಸಹಮತ ಇದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಸ್ಥಾನ ನೀಡಿ:ಶಶಿಲ್ ನಮೋಶಿ

ನಾನು ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಸ್ಥಾನದ ಆಕಾಂಕ್ಷಿ ಹೌದು ಎಂದಿರುವ ಪರಿಷತ್ ಸದಸ್ಯ ಶಶಿಲ್ ನಮೋಶಿ ಅವರು ಸಹ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ. ಈವರೆಗೆ ನಾನು ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಒಂದು ಸ್ಥಾನ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಪರಿಷತ್ ವಿಪಕ್ಷ ಸ್ಥಾನಕ್ಕೆ ನಾನು ಸಮರ್ಥವಾಗಿದ್ದೇನೆ. ಪಕ್ಷಕ್ಕಾಗಿ ಶ್ರಮಿಸಲು ನಾನು ಸಿದ್ಧನಿದ್ದೇನೆ. ವರಿಷ್ಠರು ನನ್ನಂತ ಹಿರಿಯನನ್ನು ಕಡೆಗಣಿಸಬಾರದು. ಪಕ್ಷ ಹೇಳಿದಂತೆ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. ಕೇಂದ್ರ ನಾಯಕರು ಸಮರ್ಥನನ್ನು ಆಯ್ಕೆ ಮಾಡಲಿದ್ದಾರೆ. ಮುಂದೆ ರಾಜ್ಯಕ್ಕೆ ಒಳಿತಾಗುವುದನ್ನು ಅವರು ಮಾಡುತ್ತಾರೆ ಎಂದು ಹೇಳಿದರು.

ಸದ್ಯ ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಯಾಗದಿರುವುದನ್ನು ಲೇವಡಿ ಮಾಡಿದ್ದಾರೆ. ವಿಪಕ್ಷ ಸ್ಥಾನಕ್ಕೆ ಬೇಕಾಗಿದ್ದಾರೆ ಎಂದು ಜಾಹೀರಾತು ರೂಪದಲ್ಲಿ ಪ್ರಕಟಣೆ ಕೊಟ್ಟಿದ್ದಾರೆ. ಚುನಾವಣೆ ಮುಗಿದು, ಸರ್ಕಾರ ರಚನೆಯಾಗಿರುವ ತಿಂಗಳುಗಳ ಕಳೆದರೂ ಇನ್ನೂ ವಿಪಕ್ಷ ಸ್ಥಾನದ ಆಯ್ಕೆ ನಡೆಯದಿರುವುದು ಹಲವು ರಾಜಕೀಯ ಅನುಮಾನಗಳಿಗೆ ಕಾರಣವಾಗಿದೆ ಅಂತಲೂ ವಿಶ್ಲೇಷಿಸಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+