• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ರಂಪ್ ಖಾತೆ ಸ್ಥಗಿತ: ಟ್ವಿಟ್ಟರ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

|

ಬೆಂಗಳೂರು, ಜನವರಿ 9: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ ಟ್ವಿಟ್ಟರ್ ಕ್ರಮದ ವಿರುದ್ಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕ್ರಮವು ಅನಿಯಂತ್ರಿತ ದೊಡ್ಡ ತಾಂತ್ರಿಕ ಕಂಪೆನಿಗಳಿಂದ ಎದುರಾಗಿರುವ ಬೆದರಿಕೆಗಳ ಬಗ್ಗೆ ಪ್ರಜಾಪ್ರಭುತ್ವವಾದಿಗಳಿಗೆ ಎಚ್ಚರಿಕೆಯ ಗಂಟೆ ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಪರ ಬೆಂಬಲಿಗರು ಕ್ಯಾಪಿಟಲ್ ಹಿಲ್‌ನ ಕಟ್ಟಡಕ್ಕೆ ನುಗ್ಗಿ ಹಿಂಸಾಚಾರ ನಡೆಸಿ, ಚುನಾವಣೆಯಲ್ಲಿನ ಟ್ರಂಪ್ ಸೋಲನ್ನು ನಿರಾಕರಿಸುವಂತೆ ಆಗ್ರಹಿಸಿದ ಘಟನೆ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಕಂಪೆನಿ 12 ಗಂಟೆಗಳ ಕಾಲ ಅಮಾನತು ಮಾಡಿತ್ತು. ಆದರೆ ಮುಂದಿನ ದಿನಗಳಲ್ಲಿ ಕೂಡ ಟ್ರಂಪ್ ಅವರು ಹಿಂಸಾಚಾರಕ್ಕೆ ಪ್ರಚೋದನೆ ಉಂಟುಮಾಡುವ ಅಪಾಯ ಇರುವುದರಿಂದ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿರುವುದಾಗಿ ಹೇಳಿದೆ.

ಟ್ವಿಟ್ಟರ್ ಎಡಪಂಥೀಯರ ಪರ, ನನ್ನದೇ ಸೋಷಿಯಲ್ ಮೀಡಿಯಾ ಮಾಡ್ತೀನಿ: ಟ್ರಂಪ್ ಸೆಡ್ಡು

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಖಾತೆಯನ್ನು ಟ್ಯಾಗ್ ಮಾಡಿರುವ ತೇಜಸ್ವಿ ಸೂರ್ಯ, 'ಅನಿಯಂತ್ರಿತ ದೊಡ್ಡ ತಾಂತ್ರಿಕ ಕಂಪೆನಿಗಳಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಇರುವ ಬೆದರಿಕೆಯನ್ನು ಇನ್ನೂ ಅರ್ಥಮಾಡಿಕೊಳ್ಳದವರಿಗಾಗಿ ಇದು ಎಚ್ಚರಿಕೆಯ ಗಂಟೆಯಾಗಬೇಕು. ಇದನ್ನು ಅವರು 'ಪೋಟಸ್'ಗೆ (ಅಮೆರಿಕ ಅಧ್ಯಕ್ಷರ ಖಾತೆ) ಮಾಡುತ್ತಾರೆ ಎನ್ನಬಹುದಾದರೆ ಅವರು ಯಾರಿಗೆ ಬೇಕಾದರೂ ಮಾಡಬಹುದು. ಭಾರತವು ಮಧ್ಯಂತರ ನಿಯಂತ್ರಣಗಳ ಬಗ್ಗೆ ಶೀಘ್ರವೇ ಪರಾಮರ್ಶೆ ನಡೆಸುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಒಳಿತು' ಎಂದು ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ.

ಸಂಸತ್‌ನಲ್ಲಿಯೂ ಹೇಳಿದ್ದೆ

ಸಂಸತ್‌ನಲ್ಲಿಯೂ ಹೇಳಿದ್ದೆ

'ಸಂಸತ್‌ನ ಶೂನ್ಯ ಅವಧಿಯಲ್ಲಿ ಐಟಿ ಮಧ್ಯಂತರ ಮಾರ್ಗಸೂಚಿ ನಿಯಮಗಳನ್ನು ರದ್ದುಗೊಳಿಸುವಂತೆ ನಾನು ಮನವಿ ಮಾಡಿದ್ದೆ. ಮಧ್ಯಸ್ಥಿಕೆ ನಿಯಮಗಳಲ್ಲಿ ಅವುಗಳ ವ್ಯಾಖ್ಯಾನದ ಪ್ರಕಾರ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿನ ಅಂಶಗಳ ಕುರಿತು ಹಸ್ತಕ್ಷೇಪ ಮಾಡುವಂತಿಲ್ಲ. ಈ ಅಸಮಂಜಸ ವಿಚಾರವನ್ನು ಕೂಡಲೇ ಪರಿಶೀಲಿಸಬೇಕು' ಎಂದು ತೇಜಸ್ವಿ ಹೇಳಿದ್ದಾರೆ.

ಟ್ರಂಪ್‌ಗೆ ಮತ್ತೊಂದು ಹಿನ್ನಡೆ: ಟ್ವಿಟ್ಟರ್ ಖಾತೆ ಶಾಶ್ವತ ಸ್ಥಗಿತ

ಅಪಾಯಕಾರಿ ನಡೆ-ಮಾಳವೀಯ

ಅಪಾಯಕಾರಿ ನಡೆ-ಮಾಳವೀಯ

'ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ವಿಟ್ಟರ್‌ನಿಂದ ತೆಗೆದುಹಾಕಿರುವುದು ಅಪಾಯಕಾರಿ ಸಂಪ್ರದಾಯಕ್ಕೆ ಬುನಾದಿ ಹಾಕಿದೆ. ಅದು ಅವರ ಅಭಿಪ್ರಾಯಗಳ ಕುರಿತಾಗಿರುವುದಕ್ಕಿಂತಲೂ ಹೆಚ್ಚು ಭಿನ್ನ ಅಂಶಗಳ ಅಸಹಿಷ್ಣುತೆಗೆ ಸಂಬಂಧಿಸಿದೆ. ವ್ಯಂಗ್ಯವೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪ್ರತಿಪಾದಿಸುವವರು ಈಗ ಸಂಭ್ರಮಿಸುತ್ತಿದ್ದಾರೆ. ದೊಡ್ಡ ಕಂಪೆನಿಗಳು ಈಗ ಹೊಸ ಜನತಂತ್ರ ವಿರೋಧಿಗಳಾಗುತ್ತಿವೆ' ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

ನೈತಿಕತೆ ಹೆಚ್ಚಾಗೊಲ್ಲ

ನೈತಿಕತೆ ಹೆಚ್ಚಾಗೊಲ್ಲ

'ಈ ವೇದಿಕೆಯನ್ನು ತಂತ್ರಜ್ಞಾನ ಕಂಪೆನಿಯೊಂದು ಒದಗಿಸಿದೆ. ಅವರು ತಮ್ಮದೇ ನಿಯಮಗಳನ್ನು ರೂಪಿಸಲು ಬದ್ಧರಾಗಿರುತ್ತಾರೆ ಹಾಗೂ ದೇಶಗಳು ಸಿದ್ಧಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಹಲವು ವರ್ಷಗಳಿಂದ ದ್ವೇಷ ಹೇಳಿಕೆಗಳಿಗೆ ಅವಕಾಶ ನೀಡಿ, ಈಗ ಏಕಾಏಕಿ ನಿಷೇಧ ಹೇರಿದ ಮಾತ್ರಕ್ಕೆ ಅವರ ನೈತಿಕತೆ ಹೆಚ್ಚಾಗುವುದಿಲ್ಲ' ಎಂದು ಶಿವಸೇನಾದ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

ಅಮೆರಿಕದಲ್ಲಿ ನಡೆದ ಹಿಂಸಾಚಾರ 'ಸುಂದರ ದೃಶ್ಯ' ಎಂದು ಚೀನಾ ಲೇವಡಿ

ಟ್ರಂಪ್ ಟ್ವಿಟ್ಟರ್ ಖಾತೆ ಸ್ಥಗಿತ

ಟ್ರಂಪ್ ಟ್ವಿಟ್ಟರ್ ಖಾತೆ ಸ್ಥಗಿತ

ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಹಸ್ತಾಂತರಕ್ಕೂ ಮುನ್ನ ಮತ್ತಷ್ಟು ಪ್ರಚೋದನಾಕಾರಿ ಟ್ವೀಟ್‌ಗಳನ್ನು ಮಾಡಬಹುದು. ಇದರಿಂದ ಪುನಃ ಹಿಂಸಾಚಾರ ಶುರುವಾಗಬಹುದು ಎಂಬ ಕಾರಣಕ್ಕೆ ಅವರ ಖಾತೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಟ್ವಿಟ್ಟರ್ ಹೇಳಿಕೆ ನೀಡಿದೆ. ತಮ್ಮನ್ನು ಮೌನವಾಗಿಸಲು ಟ್ವಿಟ್ಟರ್‌ಗೆ ಸಾಧ್ಯವಿಲ್ಲ, ಈ ವೇದಿಕೆ ಎಡಪಂಥೀಯರ ಪರ ಎಂದು ಟ್ರಂಪ್ ತಿರುಗೇಟು ನೀಡಿದ್ದಾರೆ. ಭಾರತದಲ್ಲಿಯೂ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಈ ಆರೋಪ ಮಾಡಿದ್ದಾರೆ. ಕೆಟ್ಟ ಭಾಷೆ, ದ್ವೇಷದ ಹೇಳಿಕೆ ನೀಡುವ ಎಡಪಂಥೀಯರು, ಉಗ್ರವಾದದಲ್ಲಿ ತೊಡಗಿರುವವರು ಟ್ವಿಟ್ಟರ್‌ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಬಲಪಂಥೀಯರ ಖಾತೆಗಳನ್ನು ಮಾತ್ರ ಟ್ವಿಟ್ಟರ್ ಅಮಾನತು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

English summary
BJP MP Tejasvi Surya has demanded government to review the intermediaries regulations to save our democracy after twitter bans Donald Trump permanently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X