ನಟ ಯಶ್‌ ಬೆಂಬಲಕ್ಕೆ ನಿಂತ ಬಿಜೆಪಿ ಸಂಸದ ಪ್ರತಾಪ್ ಸಿಂಹ

Recommended Video

      ನಟ ಯಶ್ ರನ್ನ ಬೆಂಬಲಿಸಲು ಹೊರಟ ಪ್ರತಾಪ್ ಸಿಂಹ | Oneindia Kannada

      ಬಾಡಿಗೆ ಮನೆ ಗಲಾಟೆಯಲ್ಲಿ ಸಿಕ್ಕಿಕೊಂಡಿರುವ ರಾಕಿಂಗ್ ಸ್ಟಾರ್ ನಟ ಯಶ್ ಅವರ ಬೆಂಬಲಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ನಿಂತಿದ್ದಾರೆ.

      ಯಶ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ ಅವರು, 'ಜಾಲಿ ಮರಕ್ಕೆ ಕಲ್ಲು ಯಾರೂ ಕಲ್ಲು ಹೊಡೆಯಲ್ಲ, ಮಾವಿನ ಮರಕ್ಕೇ ಹೊಡೆಯುವುದು' ಎಂದು ಹೇಳುವ ಮೂಲಕ ಯಶ್ ಅವರಿಗೆ ಸಾಂತ್ವನ ಹೇಳಿದ್ದಾರೆ.

      ಬಾಡಿಗೆ ಮನೆ ರಾದ್ಧಾಂತದ ಬಗ್ಗೆ ಕಡೆಗೂ ಸತ್ಯ ಬಾಯ್ಬಿಟ್ಟ ನಟ ಯಶ್.!

      ಚೀಟಿ, ಬಾಡಿಗೆ, ನದಿ ನೀರು ಗಲಾಟೆಗಳಿಗೆ ವಿನಾಕಾರಣ ಅತ್ಯಂತ ಜನಪ್ರಿಯ ನಟ ಯಶ್​ ವಿರುದ್ಧ ಆರೋಪ ಮಾಡ್ತಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿರುವ ಸಂಸದ ಪ್ರತಾಪ್‌ಸಿಂಹ, ಈ ರೀತಿಯ ತೆಗಳಿಕೆ, ಹೀಯಾಳಿಕೆ ಯಶ್ ವಿರುದ್ಧ ಕಳೆದ ಏಳೆಂಟು ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಹೇಳಿದ್ದಾರೆ.

      BJP MP Prathap Simha supports actor Yash

      ಯಶ್ ಅವರು ನಿನ್ನೆ (ಏಪ್ರಿಲ್ 18) ಲೈವ್ ಬಂದು ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ತೋರಿಸುತ್ತಿರುವ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿರುವ ಪ್ರತಾಪ್ ಸಿಂಹ #ISupportYash ಹ್ಯಾಷ್‌ಟ್ಯಾಗ್ ಬಳಸಿದ್ದಾರೆ.

      ಯಶ್ ಅವರು ಬಾಡಿಗೆ ಪಾವತಿಸುತ್ತಿಲ್ಲ ಎಂದು ಮನೆ ಮಾಲೀಕರು ಸಿಟಿ ಸಿವಿಲ್‌ ಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಾಲಯವು 9.60 ಲಕ್ಷ ಬಾಡಿಗೆಯನ್ನು ಪಾವತಿಸುವಂತೆ ಸೂಚಿಸಿತ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡಲೆಂದು ನಿನ್ನೆ ಫೇಸ್‌ಬುಕ್‌ ಲೈವ್ ಬಂದಿದ್ದ ಯಶ್ ರತಾನು ಬಾಡಿಗೆ ಉಳಿಸಿಕೊಂಡಿಲ್ಲವೆಂದು, ನಿಗದಿತವಾಗಿ ಬಾಡಿಗೆ ಪಾವತಿಸಿರುವ ಬಗ್ಗೆ ಬ್ಯಾಂಕ್ ದಾಖಲೆ ತೋರಿಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+